ನವದೆಹಲಿ: ಎಲೆಕ್ಟ್ರಿಕ್ ರಿಕ್ಷಾವನ್ನು ಚಾರ್ಜ್ ಮಾಡುವ ವೇಳೆ 34 ವರ್ಷದ ಮೆಕ್ಯಾನಿಕ್ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿರುವ ಘಟನೆ ದೆಹಲಿಯ ನಿಹಾಲ್ ವಿಹಾರ್‌ನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ವಿಕಾಸ್ ಪುರಿಯ ಇಂದಿರಾ ಕ್ಯಾಂಪ್ ನಿವಾಸಿ ಧರ್ಮೇಂದರ್ ಎಂದು ಗುರುತಿಸಲಾಗಿದ್ದು, ಇವರು ಗ್ಯಾರೇಜ್‍ನಲ್ಲಿ ಇ-ರಿಕ್ಷಾವನ್ನು ಚಾರ್ಜಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಕೈದಿಗಳಿಂದ ಮೊಬೈಲ್ ಬಳಕೆ – ಟೈಲ್ಸ್, ಗೋಡೆ ಕೊರೆದು ಬಚ್ಚಿಟ್ಟಿದ್ದ 19 ಫೋನ್ ವಶಕ್ಕೆ
ಧರಾಮೇಂದರ್ ಅವರು ಇ-ರಿಕ್ಷಾವನ್ನು ಚಾರ್ಜ್ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿದೆ. ನಂತರ ತಕ್ಷಣ ಅವರನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 20 ಲಕ್ಷ ರೂ. ಸಾಲ ತೀರಿಸ್ಲಿಲ್ಲ ಅಂತ ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿ ಹೊಡೆದ್ರು
ಇದೀಗ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಗ್ಯಾರೇಜ್ ಆವರಣವನ್ನು ಸೀಲ್ ಮಾಡಿದ್ದಾರೆ. ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವ್ಯಕ್ತಿ ಮೃತದೇಹವನ್ನು ಅವರ ತಂದೆಗೆ ಹಸ್ತಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಸದ್ಯ ಕಾಯಲಾಗುತ್ತಿದೆ. ಈ ನಡುವೆ ಪೊಲೀಸರು ಎಫ್‍ಐಆರ್ ಪ್ರತಿಯನ್ನು ಮೃತರ ಸಂಬಂಧಿಕರಿಗೆ ನೀಡಿದ್ದಾರೆ.