ಮುಂಬೈ: ದೆಹಲಿಯ ಮೇಕಪ್ ಆರ್ಟಿಸ್ಟ್ ಆಗಿರುವ ದೀಕ್ಷಿತಾ ಎಂಬವರು ತಮ್ಮ ಅದ್ಭುತವಾದ ಮೇಕಪ್ ಶೈಲಿಯಿಂದ ಬಾಲಿವುಡ್ ಬಾದ್ಶಾ ಶಾರೂಖ್ ಖಾನ್ ಆಗಿ ರೂಪಾಂತರಗೊಂಡ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ತಾಯಿ ಮೇಲೆ ಹಲ್ಲೆ ಮಾಡಿದನೆಂದು ಸಂಬಂಧಿಯನ್ನೇ ಕೊಂದ ಬಾಲಕಿಯರು!
View this post on Instagram
Advertisement
ಕೇವಲ ಮೇಕಪ್ ಸೆಟ್ಗಳನ್ನು ಬಳಸಿ ದೀಕ್ಷಿತಾ ಟುಕ್ಸೆಡೊದಲ್ಲಿ ಶಾರೂಖ್ ಅವರ ಚಿತ್ರವನ್ನು ತೋರಿಸುವುದರೊಂದಿಗೆ ಈ ವೀಡಿಯೋ ಪ್ರಾರಂಭಿಸುತ್ತಾರೆ. ಶಾರೂಖ್ ಅವರ ಚಮ್ಮಕ್ ಚಲ್ಲೋ ರಿಮಿಕ್ಸ್ ಬ್ಯಾಕ್ ಗ್ರೌಂಡ್ ಹಾಡು ಪ್ಲೇ ಆಗುತ್ತಿದ್ದಂತೆ, ಅವರು ತಮ್ಮ ಬ್ಲೆಂಡರ್ಗಳು ಮತ್ತು ಬ್ರಷ್ಗಳ ಕೆಲವು ಸ್ವೀಪ್ಗಳು ಮತ್ತು ಪಫ್ಗಳೊಂದಿಗೆ ಕಿಂಗ್ ಖಾನ್ ಆಗಿ ರೂಪಾಂತರಗೊಳ್ಳುತ್ತಾರೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಶುರುವಾಯ್ತಾ ಕೊರೊನಾ ಮೂರನೇ ಅಲೆ?
Advertisement
ದಿಕ್ಷಿತಾ ಅವರು ತಮ್ಮ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಬಾಲಿವುಡ್ ರಾಜನಾಗಿ ರೂಪಾಂತರ ಎಂದು ಶಿರ್ಷಿಕೆ ಬರೆದುಕೊಂಡಿದ್ದಾರೆ. ವೀಡಿಯೋ 150 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದಿದ್ದು, ಸಾಕಷ್ಟು ಜನರಿಂದ ಮೆಚ್ಚುಗೆಯ ಕಾಮೆಂಟ್ಸ್ಗಳನ್ನು ಗಳಿಸಿದೆ.