ಟೇಕಾಫ್‌ ಆಗ್ಬೇಕಿದ್ದ ಏರ್‌ ಇಂಡಿಯಾದಲ್ಲಿ ತಾಂತ್ರಿಕ ದೋಷ – ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ಬೋಯಿಂಗ್ ವಿಮಾನ ರದ್ದು

Public TV
1 Min Read
Boeing Dreamliner 787

ನವದೆಹಲಿ: ದೆಹಲಿಯಿಂದ ಲಂಡನ್‌ಗೆ ಹಾರಬೇಕಿದ್ದ ಏರ್‌ ಇಂಡಿಯಾ ವಿಮಾನವನ್ನು (Delhi-London Air India Flight) ತಾಂತ್ರಿಕ ದೋಷದ ಶಂಕೆಯಿಂದ ರದ್ದುಗೊಳಿಸಲಾಗಿದೆ.

ಏರ್ ಇಂಡಿಯಾ (Air India) ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ (Boeing Dreamliner 787), ದೆಹಲಿ ವಿಮಾನ ನಿಲ್ದಾಣದಿಂದ ರನ್‌ವೇಯಲ್ಲಿ ಟೇಕಾಫ್‌ಗೆ (Take-Off) ಸಿದ್ಧವಾಗಿತ್ತು. ಈ ವೇಳೆ, ವಿಮಾನದಲ್ಲಿ ತಾಂತ್ರಿಕ ದೋಷದ ಶಂಕೆ ವ್ಯಕ್ತವಾಗಿದೆ. ಇದರಿಂದ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳಕ್ಕೆ ಮರಳಿದೆ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ಟೇಕಾಫ್‌ ವೇಳೆ ಕೈಕೊಟ್ಟ ಲ್ಯಾಂಡಿಂಗ್‌ ಗೇರ್‌ – ಬೋಯಿಂಗ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

ಶಂಕಿತ ತಾಂತ್ರಿಕ ದೋಷದ ನಂತರ ಪೈಲಟ್‌ಗಳು ಟೇಕಾಫ್‌ ಸ್ಥಗಿತಗೊಳಿಸಿ, ಪರಿಶೀಲನೆಗಾಗಿ ವಿಮಾನವನ್ನು ಹಿಂತಿರುಗಿಸಲು ನಿರ್ಧರಿಸಿದರು. ಇನ್ನೂ ಪ್ರಯಾಣಿಕರನ್ನು ಲಂಡನ್‌ಗೆ ಕಳುಹಿಸಲು ಮತ್ತೊಂದು ವಿಮಾನವನ್ನು ನಿಯೋಜಿಸಲಾಗುತ್ತಿದೆ. ಅಡಚಣೆಯಿಂದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನಮಗೆ ನಮ್ಮ ಪ್ರಯಾಣಿಕರ ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಜೂ.12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹಾರಾಟ ನಡೆಸುತ್ತಿದ್ದ ಏರ್‌ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ಟೇಕಾಫ್‌ ಆದ ಕೇವಲ 32 ಸೆಕೆಂಡುಗಳಲ್ಲಿ ಪತನಗೊಂಡಿತ್ತು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದರು. ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದ. ಇದನ್ನೂ ಓದಿ: ಬೋಯಿಂಗ್‌ ನಿರ್ಮಿತ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

Share This Article