ದೆಹಲಿ ಮದ್ಯ ಹಗರಣದಲ್ಲಿ 100 ಕೋಟಿ ಕಿಕ್‌ಬ್ಯಾಕ್‌ ಆರೋಪ – ಕೆಸಿಆರ್ ಪುತ್ರಿ ಕವಿತಾಗೆ 10ಕ್ಕೂ ಹೆಚ್ಚು ಬಾರಿ ಕರೆ

Public TV
2 Min Read
Delhi Liquor Policy Scam ED Names CM KCRs Daughter Kavitha in Case Alleges Role in Rs 100 Cr Kickbacks

ನವದೆಹಲಿ: ಆಪ್ ಸರ್ಕಾರದ ಹೊಸ ಮದ್ಯ ನೀತಿಯಲ್ಲಿ(Delhi Liquor Policy Scam) ನಡೆದಿದೆ ಎನ್ನಲಾದ ಅಕ್ರಮದಲ್ಲಿ(Scam) ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್(K Chandrashekar Rao) ಅವರ ಪುತ್ರಿ ಎಂಎಲ್‌ಸಿ ಕಲ್ವಕುಂಟ್ಲ ಕವಿತಾ(Kavitha) ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ED) ಹೇಳಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಕವಿತಾ ಹೆಸರು ಉಲ್ಲೇಖವಾಗಿದೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರ ಆಪ್ತ ಸಹಾಯಕ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಮಿತ್ ಅರೋರಾ, ಕಳೆದ ಒಂದು ವರ್ಷದಲ್ಲಿ 10ಕ್ಕೂ ಹೆಚ್ಚು ಬಾರಿ ಕವಿತಾಗೆ ದೂರವಾಣಿ ಕರೆ ಮಾಡಿದ್ದು, ಒಟ್ಟು 35 ಜನರನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಇಡಿ ಹೇಳಿದೆ.

ಕೆ.ಕವಿತಾ ಅಮಿತ್ ಅರೋರಾ ಅವರೊಂದಿಗೆ ಸಂವಹನ ನಡೆಸಲು ಫ್ಯಾನ್ಸಿ ನಂಬರ್‌ಗಳನ್ನು ಬಳಸಿದ್ದಾರೆ. ಪೈಕಿ ಎರಡು ಸಿಮ್‌ಗಳನ್ನು ಹೆಚ್ಚು ಬಳಸಿದ್ದು, ಈ ಬಗ್ಗೆ ಸಂಭಾಷಣೆ ನಡೆಸಲು ಅವರು ಹತ್ತಕ್ಕೂ ಹೆಚ್ಚು ಬಾರಿ IMEI ಅನ್ನು ಬದಲಾಯಿಸಿದ್ದಾರೆ. ತನಿಖೆ ವೇಳೆ ಫೋನ್‌ಗಳನ್ನು ಪರಿಶೀಲಿಸಿದಾಗ ಫೋನ್‌ಗಳಲ್ಲಿ ಡೇಟಾವನ್ನು ಅಳಿಸಿ ಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಎಪಿ ನಾಯಕ ವಿಜಯ್ ನಾಯರ್ ಅವರು ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ನಿಯಂತ್ರಣದಲ್ಲಿರುವ ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿಗಳನ್ನು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಇದನ್ನೂ ಓದಿ: ಸರ್ಕಾರದಿಂದ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ಇಲ್ಲ: ಶಶಿಕಲಾ ಜೊಲ್ಲೆ

liquor

ಇಡಿ ಆರೋಪಗಳನ್ನು ಕೆ. ಕವಿತಾ ಬಲವಾಗಿ ತಳ್ಳಿಹಾಕಿದ್ದಾರೆ, ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್(TRS) ಅನ್ನು ಅಸ್ಥಿರಗೊಳಿಸುವ ಪ್ರಯತ್ನವಲ್ಲದೆ ಮತ್ತೇನಲ್ಲ ಎಂದು ಕಿಡಿಕಾರಿದ್ದಾರೆ. ಚುನಾವಣಾ ರಾಜ್ಯಗಳಲ್ಲಿ ಬಿಜೆಪಿ ನಾಯಕರಿಗಿಂತ ಮುನ್ನ ಇಡಿ ಮೊದಲು ತಲುಪಲಿದ್ದು ನಾವು ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಇಡಿ ಯಾವುದೇ ತನಿಖೆ ನಡೆಸಿದರೂ ವಿಚಾರಣೆಯಲ್ಲಿ ಭಾಗಿಯಾಗಿ ಉತ್ತರಿಸಲು ಸಿದ್ದವಿದ್ದೇವೆ ಆದರೆ ಮಾಧ್ಯಮಗಳಿಗೆ ಆಯ್ದ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ನಾಯಕರ ಇಮೇಜ್‌  ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಜನರು ಒಪ್ಪುವುದಿಲ್ಲ ಎಂದು ಇಡಿ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article