ದೆಹಲಿ: ಐಸಿಸ್ ಉಗ್ರ ಸಂಘಟನೆಯ ಸಂಪರ್ಕದ ಶಂಕೆ ಹಿನ್ನೆಲೆ ಮೂವರು ಅನುಮಾನ್ಪದ ವ್ಯಕ್ತಿಗಳನ್ನು ದೆಹಲಿ ವಜೀರಾಬಾದ್ ನಲ್ಲಿ ಪೊಲೀಸ್ ಬಂಧಿಸಿದ್ದಾರೆ. ಶಂಕಿತರಿಂದ ಮದ್ದು ಗುಂಡುಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಬಂಧನ ಕುರಿತು ಇನ್ನು ಕೆಲ ಹೊತ್ತಿನಲ್ಲಿ ಪೂರ್ಣ ಮಾಹಿತಿಯನ್ನು ದೆಹಲಿ ಪೊಲೀಸರು ನೀಡಲಿದ್ದಾರೆ.
ಈ ಹಿಂದೆ ಐಸಿಸ್ ತರಬೇತಿ ಪಡೆದ ಐವರು ಭಯೋತ್ಪಾದಕರು ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಿದ್ದಾರೆ ಮತ್ತು ಉತ್ತರ ಪ್ರದೇಶದಲ್ಲಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ನೇಪಾಳ ಗಡಿಯ ಸಮೀಪವಿರುವ ಬಸ್ತಿ, ಗೋರಖ್‍ಪುರ, ಸಿದ್ಧಾರ್ಥನಗರ, ಕುಶಿನಗರ ಮತ್ತು ಮಹಾರಾಜ್‍ಗಂಜ್ ಜಿಲ್ಲೆಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿತ್ತು.
ಇಬ್ಬರು ಭಯೋತ್ಪಾದಕರು ದೇಶವನ್ನು ಪ್ರವೇಶಿಸಿದ ಬಗ್ಗೆ ಮಾಹಿತಿ ಸಿಕ್ಕಿದೆ ಮತ್ತು ಅವರು ಸದ್ಯ ಉತ್ತರ ಪ್ರದೇಶದಲ್ಲಿದ್ದಾರೆ ಎಂದು ಬಸ್ತಿ ಐಜಿ ಅಶುತೋಷ್ ಕುಮಾರ್ ಹೇಳಿದ್ದರು. ಈ ಬೆನ್ನಲ್ಲೇ ದೆಹಲಿಯಲ್ಲಿ ಮೂವರು ಶಂಕಿತರನ್ನು ದೆಹಲಿ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.