ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ರಾಜಧಾನಿ- ಜಗತ್ತಿನ ಟಾಪ್‌ 50ರಲ್ಲಿ ಭಾರತದ 35 ನಗರಗಳು

Public TV
1 Min Read
delhi Air Pollution

ನವದೆಹಲಿ: ವಿಶ್ವದಲ್ಲೇ ಅತ್ಯಂತ ವಾಯುಮಾಲಿನ್ಯ ನಗರವಾಗಿ ದೆಹಲಿ ಹೊರಹೊಮ್ಮಿದೆ. ಕಲುಷಿತ ರಾಜಧಾನಿ ಎಂದೇ ದೆಹಲಿ ಕುಖ್ಯಾತಿ ಪಡೆದಿದೆ.

delhi airpollution 2 web

ಮಂಗಳವಾರ ಬಿಡುಗಡೆಯಾದ ಸ್ವಿಸ್ ಸಂಸ್ಥೆ IQAir ಸಿದ್ಧಪಡಿಸಿದ ವಿಶ್ವ ವಾಯು ಗುಣಮಟ್ಟ ವರದಿಯ ಪ್ರಕಾರ, ನವದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ಎನಿಸಿಕೊಂಡಿದೆ. ಅತ್ಯಂತ ಕಳಪೆ ಗಾಳಿಯ ಗುಣಮಟ್ಟ ಹೊಂದಿರುವ 50 ನಗರಗಳ ಪೈಕಿ 35 ನಗರಗಳು ಭಾರತದ್ದೇ ಆಗಿವೆ ಎಂದು ತಿಳಿಸಿದೆ. ಇದನ್ನೂ ಓದಿ: ಗ್ಯಾಸ್, ಡೀಸೆಲ್, ಪೆಟ್ರೋಲ್‍ಗೆ ವಿಧಿಸಲಾದ ಲಾಕ್‍ಡೌನ್‍ ತೆಗೆಯಲಾಗಿದೆ: ರಾಹುಲ್ ಗಾಂಧಿ

ಆದರೆ ಚೀನಾದ ಮಾಲಿನ್ಯ ಗುಣಮಟ್ಟ ಸುಧಾರಿಸಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಚೀನಾದ ಅರ್ಧಕ್ಕಿಂತ ಹೆಚ್ಚು ನಗರಗಳು ಕಡಿಮೆ ಮಟ್ಟದ ವಾಯುಮಾಲಿನ್ಯ ಕಂಡಿದ್ದು, ಗಾಳಿಯ ಗುಣಮಟ್ಟ ಸುಧಾರಿಸಿದೆ ಎಂದು ಅಧ್ಯಯನ ತಿಳಿಸಿದೆ. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಮಾಲಿನ್ಯದ ಮಟ್ಟವು ಸುಧಾರಿಸಿದೆ. ಕಲ್ಲಿದ್ದಲು, ವಿದ್ಯುತ್ ಸ್ಥಾವರ ಮತ್ತು ಮಾಲಿನ್ಯಕಾರಕ ಹೊಗೆ ಹೊರಸೂಸುವ ಚಟುವಟಿಕೆಗಳು, ಉದ್ಯಮಗಳಿಗೆ ಚೀನಾದಲ್ಲಿ ಕಡಿವಾಣ ಹಾಕಲಾಗಿದೆ ಎಂಬುದು ವರದಿಯಿಂದ ತಿಳಿದುಬಂದಿದೆ.

air pollution 1

ವಿಶ್ವ ಆರೋಗ್ಯ ಸಂಸ್ಥೆ (WHO)ಯ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಷ್ಟು ಗಾಳಿಯ ಗುಣಮಟ್ಟದ ಮಾನದಂಡಗಳನ್ನು ಭಾರತದ ಯಾವುದೇ ನಗರವು ಪೂರೈಸಿಲ್ಲ ಎಂದು IQAir ವರದಿ ಹೇಳಿದೆ. 2021 ರಲ್ಲಿ ಜಾಗತಿಕ ಗಾಳಿಯ ಗುಣಮಟ್ಟದ ಸ್ಥಿತಿಯ ಅವಲೋಕನವನ್ನು ವರದಿ ಪ್ರಸ್ತುತಪಡಿಸಿದೆ. 117 ದೇಶಗಳ 6,475 ನಗರಗಳಿಂದ PM2.5 ವಾಯು ಗುಣಮಟ್ಟದ ದತ್ತಾಂಶವನ್ನು ಈ ವರದಿ ಆಧರಿಸಿದೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ

Share This Article
Leave a Comment

Leave a Reply

Your email address will not be published. Required fields are marked *