ಹುಟ್ಟೂರಿನ ಬಗ್ಗೆಯೇ ಅನುಮಾನದ ಮಾತುಗಳನ್ನಾಗಿ ಅಚ್ಚರಿ ಮೂಡಿಸಿದ್ದಾರೆ ಬಾಲಿವುಡ್ ನಟಿ, ದಂಗಲ್ ಖ್ಯಾತಿಯ ಸಾನಿಯಾ ಮಲ್ಹೋತ್ರ. ಈ ನಟಿ ದೆಹಲಿಯಲ್ಲಿ ಹುಟ್ಟಿದ್ದರೂ, ಇದು ಮಹಿಳೆಯರಿಗೆ ಸುರಕ್ಷಿತ ಸಿಟಿಯಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ದೆಹಲಿ ಸುರಕ್ಷತೆಯ ಬಗ್ಗೆ ಅಚ್ಚರಿಯ ಸಂಗತಿಗಳನ್ನು ಹೇಳಿರುವ ಅವರು, ಆ ಕಾರಣಕ್ಕಾಗಿಯೇ ತಾವು ದೆಹಲಿ ತೊರೆದಿರುವುದಾಗಿ ಹೇಳಿಕೊಂಡಿದ್ದಾರೆ.
Advertisement
ದೆಹಲಿಯ ಪ್ರತಿ ಹುಡುಗಿಗೂ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಆಗಿರುತ್ತದೆ. ನಾನೂ ಅನುಭವಿಸಿದವಳೇ. ದೆಹಲಿ ಅಭಿವೃದ್ಧಿ ಬಗ್ಗೆ ನನಗೆ ಗೊತ್ತಿಲ್ಲ. ಅದು ಅಭಿವೃದ್ಧಿ ಆಗಿದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ, ಸುರಕ್ಷಿತ ದೃಷ್ಟಿಯಲ್ಲಿ ನನಗೆ ದೆಹಲಿ ಬಗ್ಗೆ ತೃಪ್ತಿಯಿಲ್ಲ. ಹಾಗಾಗಿಯೇ ನಾನು ದೆಹಲಿ ತೊರೆದು, ಮುಂಬೈ ಸೇರಿಕೊಂಡಿದ್ದೇನೆ ಎಂದು ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್
Advertisement
Advertisement
ದೆಹಲಿಗಿಂತಲೂ ಹೆಚ್ಚು ಮುಂಬೈ ಸುರಕ್ಷತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು ಹಾಗಾಗಿಯೇ ತಾವು ಮುಂಬೈಯಲ್ಲಿ ನವೆಂಬರ್ ತಿಂಗಳಿನಲ್ಲಿ ಹೊಸ ಮನೆ ಖರೀದಿಸಿರುವುದಾಗಿ ಅವರು ತಿಳಿಸಿದ್ದಾರೆ. ಇಲ್ಲಿ ನೆಮ್ಮೆದಿಯ ಜೀವನ ನಡೆಸುವುದಕ್ಕೆ ಸಾಧ್ಯವಾಗಿದೆ ಎಂದೂ ಅವರು ಮುಂಬೈ ಬಗ್ಗೆ ಹಾಡಿ ಹೊಗಳಿದ್ದಾರೆ.