ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಕೊರೊನಾ ಮತ್ತು ಲಾಕ್‍ಡೌನ್ ಮಧ್ಯೆಯೂ ಭಾರಿ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ದಾಖಲಾಗಿವೆ.
Advertisement
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ, ಬೆಂಗಳೂರು, ಮುಂಬೈ ಸೇರಿದಂತೆ ಇತರೆ ಮಹಾ ನಗರಗಳಿಗಿಂತಲೂ ದೆಹಲಿಯಲ್ಲಿ ಹೆಚ್ಚು ಪ್ರಕರಣ ದಾಖಲಾಗಿದ್ದು ಮಹಿಳೆಯರ ಸುರಕ್ಷಿತೆಯನ್ನು ಪ್ರಶ್ನೆ ಮಾಡುವಂತಾಗಿದೆ. ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್‍ನಲ್ಲಿ ಯುವತಿ ಫುಲ್ ಡ್ಯಾನ್ಸ್, ವೀಡಿಯೋ ವೈರಲ್- ಮುಂದೇನಾಯ್ತು?
Advertisement
Advertisement
2019 ಮತ್ತು 2020 ರ ನಡುವೆ ಶೇ.18 ರಷ್ಟು ಪ್ರಕರಣಗಳು ಕೊರೊನಾ ಮತ್ತು ಲಾಕ್ಡೌನ್ ನಿಂದ ಕುಸಿದಿದ್ದರೂ 2020 ರಲ್ಲಿ ಒಟ್ಟು 2.4 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನವೊಂದಕ್ಕೆ 650 ಕ್ಕೂ ಹೆಚ್ಚು ಪ್ರಕರಣಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ಇತರೆ ಮಹಾ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಕಳೆದ ವರ್ಷ 19,964 ಮತ್ತು ಮುಂಬೈನಲ್ಲಿ 50,000 ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಆರ್‌ಬಿ ಹೇಳಿದೆ.
Advertisement
ದೆಹಲಿಯಲ್ಲಿ 2019 ರಲ್ಲಿ 5901 ಕಿಡ್ಯಾಪ್ ಪ್ರಕರಣಗಳು ದಾಖಲಾದರೆ 2020 ರಲ್ಲಿ 4062 ಪ್ರಕರಣಗಳು ದಾಖಲಾಗಿದೆ, 2019 ರಲ್ಲಿ 13395 ಮಹಿಳೆಯರ ಮೇಲೆ ದೌರ್ಜನ್ಯ ಆದ್ರೆ 2020 ರಲ್ಲಿ 10,093 ಪ್ರಕರಣಗಳು ದಾಖಲಾಗಿದೆ, 2019 ರಲ್ಲಿ 521 ಮಹಿಳೆಯರ ಕೊಲೆಯಾದ್ರೆ 2020 ರಲ್ಲಿ 472 ಮಹಿಳೆಯರ ಕೊಲೆಯಾಗಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ
ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ 10,093 ಕ್ಕೂ ಹೆಚ್ಚು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ದಾಖಲಾಗಿವೆ. ಮುಂಬೈ, ಪುಣೆ, ಗಾಜಿಯಾಬಾದ್, ಬೆಂಗಳೂರು ಅಥವಾ ಇಂದೋರ್ ನಲ್ಲಿ ದಾಖಲಾದ ಪ್ರಕರಣಗಳಿಗಿಂತ ಎರಡು ಪಟ್ಟು ಹೆಚ್ಚು ದೆಹಲಿಯಲ್ಲಿ ದಾಖಲಾಗಿದೆ.