– ದೆಹಲಿ ಕೋರ್ಟಿನಲ್ಲಿ ವಿಚಿತ್ರ ಪ್ರಸಂಗ
– ನ್ಯಾಯಾಲಯದಲ್ಲಿ ಅವನಲ್ಲ, ಅವಳು ವಾದ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೋರ್ಟಿನಲ್ಲಿ ವಿಚಿತ್ರ ಪ್ರಸಂಗ ನಡೆದಿದೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಕೋರ್ಟ್ ಮುಂದೆ ತಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ ಎಂದು ಸಮರ್ಥಿಸಿಕೊಂಡಿದ್ದಾನೆ.
ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತಿತ್ತು. ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದ ಆರೋಪಿ ಮಹಿಳೆಯರ ಬಟ್ಟೆ ಧರಿಸಿ ಮೇಕಪ್ ಹಾಗೂ ಹೇರ್ ಸ್ಟೈಲ್ ಮಾಡಿಕೊಂಡು ವಿಚಾರಣೆ ಆಗಮಿಸಿದ್ದನ್ನು ನೋಡಿ ನ್ಯಾಯಧೀಶರು ಕೆಲಕಾಲ ಗೊಂದಲಕ್ಕೆ ಒಳಗಾದರು.
Advertisement
Advertisement
ನ್ಯಾಯಧೀಶರ ಮುಂದೆ ವಾದ ಮಂಡಿಸಿದ ಆರೋಪಿ, ತನಗೆ ಎಂದಿಗೂ ಮಹಿಳೆಯರ ಬಗ್ಗೆ ಯಾವುದೇ ಆಕರ್ಷಣೆ ಇಲ್ಲ. ಅಲ್ಲದೆ ಸ್ವತಃ ಮಹಿಳೆಯಾಗುವ ಪ್ರಕ್ರಿಯೆಯಲ್ಲಿದ್ದೇನೆ. ಬಾಲ್ಯದಿಂದಲೂ ಲೈಂಗಿಕ ಡಿಸ್ಫೊರಿಯಾದಿಂದ (sexual dysphoria) ಬಳಲುತ್ತಿದ್ದೇನೆ. ಲೈಂಗಿಕ ಡಿಸ್ಫೊರಿಯಾ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೈವಿಕ ಲಿಂಗಕ್ಕೆ ವಿರುದ್ಧವಾಗಿ ಸ್ತ್ರೀ ಅಥವಾ ಪುರುಷ ಎಂದು ತನ್ನ ಗುರುತನ್ನು ಅನುಭವಿಸಲು ಪ್ರಾರಂಭಿಸುವ ಸಮಸ್ಯೆಯಾಗಿದೆ ಎಂದು ಕೋರ್ಟ್ ಮುಂದೆ ಆರೋಪಿ ವಿವರಿಸಿದ್ದಾನೆ. ತನ್ನನ್ನು ತಾನು ಒಬ್ಬ ಮಹಿಳೆ ಎಂದು ಬಣ್ಣಿಸಿಕೊಂಡಿದ್ದಾನೆ. ಲೈಂಗಿಕ ಕಿರುಕುಳ ನೀಡಿರುವ ಮಹಿಳೆ ನನಗೆ ಸಹೋದರಿ ಸಮ. ಹೀಗಿರುವಾಗ ಹೇಗೆ ಲೈಂಗಿಕ ಕಿರುಕುಳ ನೀಡಲು ಸಾಧ್ಯ ಎಂದು ಕೋರ್ಟ್ ಮುಂದೆ ಪ್ರಶ್ನಿಸಿದ್ದಾನೆ. ಹೀಗಾಗಿ ಈ ಆರೋಪದಲ್ಲಿ ಹುರುಳಿಲ್ಲ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಆರೋಪದ ಕ್ರಿಮಿನಲ್ ಮೊಕದ್ದಮೆ ರದ್ದು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಆದರೆ ಆರೋಪಿಯ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
Advertisement
ಕೋರ್ಟ್ ಮುಂದೆ ಹಾಜರಾಗಿದ್ದ ದೂರುದಾರ ಮಹಿಳೆ ಆರೋಪಿಯ ಈ ವಾದವನ್ನು ಒಪ್ಪಿಕೊಂಡಿಲ್ಲ. ಕೋರ್ಟ್ ಈ ಪ್ರಕರಣವನ್ನು ಇತ್ಯರ್ಥ ಪಡಿಸುವ ಮನಸ್ಸು ಮಾಡಿದ್ದರೂ ಮಹಿಳೆಯ ಪರ ವಕೀಲರು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಮಾಡಲು ಕೋರ್ಟ್ ನಿರಾಕರಿಸಿತು.
Advertisement
ಪ್ರಕರಣದ ಹಿನ್ನೆಲೆ:
2014ರಿಂದ ದೂರುದಾರ ಮಹಿಳೆ ಮತ್ತು ಆರೋಪಿ ಇಬ್ಬರು ನೊಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2016ರ ಅಕ್ಟೋಬರ್‍ನಲ್ಲಿ ದಾಖಲಾದ ಎಫ್‍ಐಆರ್ ಪ್ರಕಾರ, ದೆಹಲಿಯ ಕೇನ್ನಾಟ್ ಪ್ಲೇಸ್‍ನಲ್ಲಿರುವ ಪಬ್‍ವೊಂದರಲ್ಲಿ ಪಾರ್ಟಿ ವೇಳೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತಾವು ಕೆಲಸ ಮಾಡುತ್ತಿದ್ದ ಕಂಪನಿಗೆ ಹಲವಾರು ಬಾರಿ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆರೋಪಿಗಳ ಪರವಾಗಿ ತೀರ್ಮಾನ ತೆಗದುಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಕಳೆದ ಆಗಸ್ಟ್ ನಲ್ಲಿ ಕೆಳ ನ್ಯಾಯಾಲಯವು ಆರೋಪಿಯ ವಿರುದ್ಧ ವಿಚಾರಣೆ ನಡೆಯುತಿತ್ತು. ಈ ಪ್ರಕರಣ ರದ್ದು ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಆರೋಪಿ ಅರ್ಜಿ ಸಲ್ಲಿಸಿದ್ದನು.