ನವದೆಹಲಿ: ರಿಕ್ವಿಸಿಷನ್ ಸ್ಲಿಪ್ (Requisition Slip) ಮತ್ತು ಐಡಿ ಪುರಾವೆಗಳಿಲ್ಲದೆ 2,000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಅಧಿಸೂಚನೆಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ರಿಕ್ವಿಸಿಷನ್ ಸ್ಲಿಪ್ ಮತ್ತು ಐಡಿ ಪುರಾವೆಯಿಲ್ಲದೇ ಮುಖ್ಯನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ (Satish Chandra Sharma) ಮತ್ತು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ (Subramonium Prasad) ಅವರ ಪೀಠವು ಬಿಜೆಪಿ ನಾಯಕ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ (Ashwini Upadhyay) ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ. ಈ ಕುರಿತು ವಿವರವಾದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಇದನ್ನೂ ಓದಿ: ರಾಹುಲ್‌ಗಾಂಧಿ 3 ವರ್ಷ ಸಾಮಾನ್ಯ ಪಾಸ್‌ಪೋರ್ಟ್ ಬಳಸಲು ದೆಹಲಿ ಕೋರ್ಟ್ ಅನುಮತಿ
Advertisement
Advertisement
ಯಾವುದೇ ರಿಕ್ವಿಸಿಷನ್ ಸ್ಲಿಪ್ ಮತ್ತು ಗುರುತಿನ ಪುರಾವೆಗಳನ್ನು ಪಡೆಯದೆಯೇ ಆರ್‌ಬಿಐ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಿದೆ. ಇದು ಅನಿಯಂತ್ರಿತ ಎಂದು ಉಪಾಧ್ಯಾಯ ಅವರು ತಮ್ಮ ಮನವಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಮಕ್ಕಳನ್ನು ಅಪಹರಿಸಿ ಅತ್ಯಾಚಾರಗೈದು ಹತ್ಯೆ- ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ಕೋರ್ಟ್
Advertisement
ಚಲಾವಣೆಯಲ್ಲಿರುವ 2,000 ರೂ. ನೋಟುಗಳ ಒಟ್ಟು ಮೌಲ್ಯ 6.73 ಲಕ್ಷ ಕೋಟಿಯಿಂದ 3.62 ಲಕ್ಷ ಕೋಟಿಗೆ ಇಳಿಕೆಯಾಗಿದೆ ಎಂದು ಆರ್‌ಬಿಐ ಒಪ್ಪಿಕೊಂಡಿದೆ. ದೊಡ್ಡ ಮೊತ್ತದ ಕರೆನ್ಸಿಗಳು ವ್ಯಕ್ತಿಯ ಲಾಕರ್ ತಲುಪಿದೆ. ಈ ದೊಡ್ಡ ಮೊತ್ತದ ಹಣವನ್ನು ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು, ಮಾವೋವಾದಿಗಳು, ಡ್ರಗ್ ಸ್ಮಗ್ಲರ್‌ಗಳು, ಗಣಿ ಮಾಫಿಯಾಗಳು ಮತ್ತು ಭ್ರಷ್ಟರಿಂದ ಸಂಗ್ರಹಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಬಿಬಿಸಿ ಮೇಲೆ 10 ಸಾವಿರ ಕೋಟಿ ರೂ. ಮಾನನಷ್ಟ ಕೇಸ್ – ಹೈಕೋರ್ಟ್‍ನಿಂದ ಸಮನ್ಸ್ ಜಾರಿ
Advertisement
ಮೇ 19ರಂದು 2,000 ರೂ. ನೋಟುಗಳನ್ನು ಹಿಂಪಡೆಯುವಂತೆ ಆರ್‌ಬಿಐ ಸೂಚನೆ ನೀಡಿತ್ತು. ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಅಥವಾ ಬ್ಯಾಂಕ್ ಶಾಖೆಗಳಲ್ಲಿ ಇತರ ಮುಖಬೆಲೆಯ ನೋಟುಗಳಿಗೆ ವಿನಿಮಯ ಮಾಡಿಕೊಳ್ಳಲು ಆರ್‌ಬಿಐ (RBI) ಜನರಿಗೆ ಸಲಹೆ ನೀಡಿದೆ. ಇದನ್ನೂ ಓದಿ: ಕೊಲೆ ಪಾತಕಿಗೆ ಜೀವಾವಧಿ ಶಿಕ್ಷೆ – 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ