ಕುತುಬ್ ಮಿನಾರ್ ಮಸೀದಿಯಲ್ಲಿ ನಮಾಜ್ ತಡೆಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೋರ್ಟ್ ನಕಾರ

Public TV
1 Min Read
qutub minar 1

ನವದೆಹಲಿ: ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿರುವ ಮೊಘಲ್ ಮಸೀದಿಯಲ್ಲಿ ನಮಾಜ್ ಮಾಡುವುದನ್ನು ನಿರ್ಬಂಧಿಸುವಂತೆ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

ಸದ್ಯಕ್ಕೆ ಮನವಿ ಆಲಿಸುವ ತುರ್ತು ಇಲ್ಲ ಎಂದು ನ್ಯಾಯಮೂರ್ತಿಗಳಾದ ಮನೋಜ್ ಕುಮಾರ್ ಓಹ್ರಿ ಹಾಗೂ ಪೂನಂ ಎ ಬಂಬಾ ಅವರಿದ್ದ ರಜೆ ಕಾಲೀನ ಪೀಠವು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಹಲವು ದೇಶಗಳಲ್ಲಿ ಬ್ಯಾನ್ : ಭಾರತದ ಹೆಸರು ಕೆಡಿಸುವ ಹುನ್ನಾರ ಎಂದ ನಿರ್ದೇಶಕ

qutub minar 3

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮೇ 6ರಂದು ಕೇವಲ 5 ಮಂದಿಗೆ ಮಸೀದಿಯಲ್ಲಿ ನಮಾಜ್ ಮಾಡಲು ಅನುಮತಿಸುವ ಮೂಲಕ ಪ್ರಾರ್ಥನೆಗೆ ಭಾಗಶಃ ತಡೆಯೊಡ್ಡಿತು. ನಂತರ ಮೇ 13ರಂದು ಅಧಿಕಾರಿಗಳು ಪ್ರಾರ್ಥನೆ ಸಂಪೂರ್ಣವಾಗಿ ನಿಲ್ಲಿಸಿದರು ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ.ಸುಫಿಯಾನ್ ಸಿದ್ದಿಕಿ ತಿಳಿಸಿದರು. ಇದನ್ನೂ ಓದಿ: ಜೂನ್ 13 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಯಾವುದೇ ಆದೇಶ ನೀಡದೆ ಮೌಖಿಕ ಸೂಚನೆಗಳ ಮೂಲಕವೇ ಜನರ ಪ್ರಾರ್ಥನೆಗೆ ತಡೆಯೊಡ್ಡಲಾಗಿದೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಕಾನೂನಾತ್ಮಕ ಆಡಳಿತವನ್ನು ಎತ್ತಿಹಿಡಿದು ರಕ್ಷಿಸಬೇಕು ಎಂದು ಸಿದ್ದಿಕ್ಕೆ ಮನವಿ ಮಾಡಿದ್ದರು.

Qutub Minar

ಶುಕ್ರವಾರ ಹಂಗಾಮಿ ಮುಖ್ಯ ನ್ಯಾಯಮೂರ್ತಿ (ACJ) ವಿಪಿನ್ ಸಾಂಘಿ ಅವರಿದ್ದ ಪೀಠದೆದುರು ಅರ್ಜಿಯನ್ನು ಪ್ರಸ್ತಾಪಿಸಿದಾಗ ರಜೆಕಾಲೀನ ಪೀಠದೆದುರು ಮನವಿ ಸಲ್ಲಿಸುವಂತೆ ಪೀಠ ತಿಳಿಸಿತ್ತು.

ನಂತರ ಮೊಘಲ್ ಮಸೀದಿಯು ದೆಹಲಿಯ ಮೊಘಲ್ ಉದ್ಯಾನದ ಎದುರು ಕುತುಬ್ ಸಂಕೀರ್ಣದ ಪ್ರವೇಶದ್ವಾರದಲ್ಲಿದೆ. ಕುತುಬ್ ಮಿನಾರ್ ಆವರಣದಲ್ಲಿರುವ ವಿವಾದಿತ ಕುವ್ವಾತ್-ಉಲ್-ಇಸ್ಲಾಂ ಮಸೀದಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಪೀಠ ಹೇಳಿ ವಿಚಾರಣೆ ನಿರಾಕರಿಸಿತು. ಇದನ್ನೂ ಓದಿ: 21ನೇ ಶತಮಾನದ ಭಾರತವು ಜನಕೇಂದ್ರಿತ ಆಡಳಿತದೊಂದಿಗೆ ಮುನ್ನಡೆಯುತ್ತಿದೆ: ಮೋದಿ

Qutub Minar

ಹಿನ್ನೆಲೆ ಏನು?
ಕುವ್ವಾತ್- ಉಲ್- ಇಸ್ಲಾಂ ಮಸೀದಿಯಲ್ಲಿ ಹಲವು ಹಿಂದೂ ದೇವತೆಗಳ ಪ್ರತಿಮೆಗಳಿವೆ ಎಂದು ವಿವಿಧ ಹಿಂದುತ್ವವಾದಿ ಗುಂಪುಗಳು ವಾದಿಸಿದ್ದು ಹಿಂದೂ ಮತ್ತು ಜೈನ ದೇಗುಲಗಳನ್ನು ಧ್ವಂಸಗೊಳಿಸಿ ಇದನ್ನು ನಿರ್ಮಿಸಲಾಗಿದೆ. ಹೀಗಾಗಿ ಅಲ್ಲಿ ತಮಗೆ ಪ್ರಾರ್ಥನೆ ಸಲ್ಲಿಸುವ ಹಕ್ಕು ನೀಡಬೇಕು ಎಂದು ಆಗ್ರಹಿಸಿದ್ದವು.

Share This Article
Leave a Comment

Leave a Reply

Your email address will not be published. Required fields are marked *