ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆಗೆ (Assembly Elections) ಸಿದ್ಧವಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ (DK Shivakumar) ಬಂಧನ ಭೀತಿ ಶುರುವಾಗಿದೆ. ಇಡಿ (ED) ಅಧಿಕಾರಿಗಳು ತಮ್ಮ ವಿರುದ್ಧ ಎರಡನೇ ದೂರು ದಾಖಲಿಸಿಕೊಂಡ ಬಳಿಕ ಅವರನ್ನು ಬಂಧಿಸುವ ಸಾಧ್ಯತೆ ಇರುವ ಹಿನ್ನೆಲೆ ಮಧ್ಯಂತರ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
Advertisement
ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಡಿ.ಕೆ ಶಿವಕುಮಾರ್ ಪರ ವಾದ ಮಂಡಿಸಿದ ವಕೀಲ ಮಯಾಂಕ್ ಜೈನ್, ಡಿ.ಕೆ ಶಿವಕುಮಾರ್‌ಗೆ ವಿಚಾರಣೆ ಹೆಸರಲ್ಲಿ ಸಮನ್ಸ್ ನೀಡಿ ಚುನಾವಣಾ ಹೊತ್ತಲ್ಲಿ ಕಿರುಕುಳ ನೀಡಬಾರದು ಮತ್ತು ಏಕಾಏಕಿ ಬಂಧಿಸಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: Breaking-ಭಾರತ್ ಜೋಡೋ ಯಾತ್ರೆಗೆ ಕೆಜಿಎಫ್ ಮ್ಯೂಸಿಕ್ ಬಳಕೆ : ರಾಹುಲ್ ವಿರುದ್ಧ ಎಫ್ಐಆರ್
Advertisement
Advertisement
ವಾದ ಆಲಿಸಿದ ಕೋರ್ಟ್ ಇಡಿ ಪರ ವಕೀಲರನ್ನು ತನಿಖೆ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಡಿ ಪರ ವಕೀಲರು ಸದ್ಯ ಡಿ.ಕೆ ಶಿವಕುಮಾರ್‌ಗೆ ಸಮನ್ಸ್ ನೀಡುವ ಯಾವುದೇ ಉದ್ದೇಶಗಳನ್ನು ಇಡಿ ಹೊಂದಿಲ್ಲ ಎಂದು ತಿಳಿಸಿದರು. ಈ ಹಿನ್ನೆಲೆ ಮಧ್ಯಂತರ ಆದೇಶ ನೀಡದೆ, ಪ್ರಕರಣದ ವಿಸ್ತೃತ ವಿಚಾರಣೆಗಾಗಿ ನವೆಂಬರ್ 23ಕ್ಕೆ ಮುಂದೂಡಲಾಯಿತು. ಇದನ್ನೂ ಓದಿ: ಟಿಕೆಟ್ ಆಕಾಂಕ್ಷಿಗಳಿಂದ ಡಿಕೆಶಿ ಲಕ್ಷ-ಲಕ್ಷ ಲೂಟಿ; BJP
Advertisement
ಇದಕ್ಕೂ ಮುನ್ನ ಡಿ.ಕೆ ಶಿವಕುಮಾರ್ ತಮ್ಮ ಮೇಲಿನ ಇಡಿ ಪ್ರಕರಣಗಳನ್ನು ರದ್ದು ಮಾಡುವಂತೆ ಮನವಿ ಮಾಡಿದ್ದರು. ಈ ಪ್ರಕರಣ ವಿಚಾರಣೆ ನಡೆಸಿ ಇಡಿಗೆ ನೋಟಿಸ್ ನೀಡಿದ್ದ ಕೋರ್ಟ್, ಡಿಸೆಂಬರ್ 15ಕ್ಕೆ ವಿಚಾರಣೆ ಮುಂದೂಡಿತ್ತು.