ನವದೆಹಲಿ: ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಧ್ಯಕ್ಷ ಮೊಯ್ದೀನ್ ಕುಟ್ಟಿ ಕೆ (ಎಂಕೆ ಫೈಜಿ) ಅವರಿಗೆ ದೆಹಲಿ ಹೈಕೋರ್ಟ್ (Delhi High Court) ಜಾಮೀನು ಮಂಜೂರು ಮಾಡಿದೆ.
ನ್ಯಾ.ನೀನಾ ಬನ್ಸಾಲ್ ಕೃಷ್ಣ ಅವರು ಜಾಮೀನು ಆದೇಶ ಹೊರಡಿಸಿದ್ದಾರೆ. 2022ರಲ್ಲಿ ಸರ್ಕಾರವು ಎಸ್‌ಡಿಪಿಐ ಪಕ್ಷವನ್ನು ಪಾಪುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ರಾಜಕೀಯ ಮುಖವಾಣಿ ಎಂದು ತಿಳಿಸಿ ನಿಷೇಧಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಜಿ ಅವರನ್ನು 2025ರ ಇಡಿ ಮಾರ್ಚ್‌ನಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು. ಇದನ್ನೂ ಓದಿ: ಕಾರ್ಮೋಡ ಕವಿದಿತು, ಅಂತರಂಗದ ಪಕ್ಷಿ ಹಾರಿತು, ಕೆರೆ ಕಟ್ಟೆ ತುಂಬಿ ಹರಿದಾವು ಪರಾಕ್ – ಮುಳ್ಳುಗದ್ದುಗೆ ಮೇಲೆ ಕುಣಿದು ಕಾರ್ಣಿಕ!
ಎಸ್‌ಡಿಪಿಐ ಪಕ್ಷ ಪಿಎಫ್‌ಐನ ರಾಜಕೀಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಣಕಾಸು ಮತ್ತು ಕಾರ್ಯಾಚರಣೆಗಾಗಿ ಪಿಎಫ್‌ಐ ಮೇಲೆ ಅವಲಂಬಿತವಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿತ್ತು. ಪಿಎಫ್‌ಐ ಗಳಿಸುತ್ತಿದ್ದ ಕೋಟ್ಯಂತರ ರೂಪಾಯಿ ಅಕ್ರಮ ಹಣವನ್ನು ಎಸ್‌ಡಿಪಿಐಗೆ ವರ್ಗಾಯಿಸಲಾಗುತ್ತಿತ್ತು ಎಂಬುದಾಗಿ ದೂರಿತ್ತು.
ಬಂಧನಕ್ಕೂ ಮುನ್ನ ಫೈಜಿ ಹಲವಾರು ಬಾರಿ ಇಡಿ ಸಮನ್ಸ್‌ಗಳಿಗೆ ಉತ್ತರಿಸಿರಲಿಲ್ಲ. ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು ಎಂದು ಇಡಿ ತಿಳಿಸಿದೆ. ಫೈಜಿ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಅಗರವಾಲ್ ಸೇರಿದಂತೆ ವಕೀಲರ ತಂಡ ಹಾಜರಿತ್ತು. ಇಡಿ ಪರವಾಗಿ ವಿಶೇಷ ವಕೀಲ ಝೋಹೆಬ್ ಹೋಸೈನ್ ಸೇರಿದಂತೆ ವಿವಿಧ ವಕೀಲರು ವಾದ ಮಂಡಿಸಿದರು. ಇದನ್ನೂ ಓದಿ: ಸಾಲು ಸಾಲು ಚಿತ್ರಗಳಲ್ಲಿ ಸಂಹಿತಾ ವಿನ್ಯಾ ಬ್ಯುಸಿ – ‘ಮಿಕ್ಸಿಂಗ್ ಪ್ರೀತಿ’ ಫೆ.20 ರಂದು ತೆರೆಗೆ

