ನವದೆಹಲಿ: ಕೋವಿಡ್-19 ಸೋಂಕು ತಗುಲಿ ಹೋಮ್ ಐಸೋಲೇಶನ್‍ನಲ್ಲಿ ಇರುವವರಿಗೆ ಆನ್‍ಲೈನ್‍ನಲ್ಲಿ ಯೋಗ ಕ್ಲಾಸ್ ಪ್ರಾರಂಭಿಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
ಕೋವಿಡ್-19 ನಿಂದ ಮಾನಸಿಕ ಆರೋಗ್ಯವನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಮುಖ್ಯ ಎಂದು ವಿವರಿಸಿದ ಅವರು, ದೆಹಲಿಯಲ್ಲಿ ಕೋವಿಡ್ ಸಂಖ್ಯೆ ಏರುತ್ತಿದೆ. ಪರಿಣಾಮ ಹೆಚ್ಚು ಜನರು ಹೋಮ್ ಐಸೋಲೇಶನ್‍ನಲ್ಲಿ ಇದ್ದಾರೆ. ಅದಕ್ಕೆ ಅವರಿಗೆ ಮಾನಸಿಕ ನೆಮ್ಮದಿ ಮತ್ತು ಶಾಂತಿಗಾಗಿ ಬುಧವಾರದಿಂದ ಆನ್‍ಲೈನ್ ಯೋಗ ಮತ್ತು ಧ್ಯಾನ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ
Advertisement
Advertisement
ಈ ಯೋಗ ಕ್ಲಾಸ್ ಗೆ ಭಾಗವಹಿಸಲು ಇಚ್ಚಿಸುವವರು ನೋಂದಾಯಿಕೊಳ್ಳಬೇಕು. ಅದಕ್ಕೆ ಲಿಂಕ್ ಅನ್ನು ಸೋಂಕಿತರಿಗೆ ಕಳುಹಿಸಲಾಗುತ್ತದೆ. ಬುಧವಾರದಿಂದ ತರಬೇತಿ ಪ್ರಾರಂಭವಾಗುತ್ತೆ. ಕ್ಲಾಸ್ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆ ಇರುತ್ತದೆ. ಪ್ರತಿ ತರಗತಿಯು 15 ರೋಗಿಗಳನ್ನು ಒಳಗೊಂಡಿರುತ್ತದೆ. ಈ ಕ್ಲಾಸ್ ನಲ್ಲಿ ಭಾಗವಹಿಸುವವರು ತಮ್ಮ ಬೋಧಕರೊಂದಿಗೆ ಸಂವಹನ ನಡೆಸಬಹುದು ಎಂದು ತಿಳಿಸಿದರು.
Advertisement
Advertisement
ಯೋಗವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದ ಅವರು, ದೆಹಲಿ ಸರ್ಕಾರವು 40,000 ರೋಗಿಗಳಿಗೆ ಹೋಮ್ ಐಸೊಲೇಟಿಯಲ್ಲಿ ಆನ್‍ಲೈನ್ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ