ನವದೆಹಲಿ: ದೇಶದಲ್ಲೀಗ ಎಲೆಕ್ಟ್ರಿಕ್ ವಾಹನಗಳ (ವಿದ್ಯುತ್ ಚಾಲಿತ ವಾಹನ) ಭರಾಟೆಯೇ ಜೋರಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂಬರ್ 1 ಸ್ಥಾನಕ್ಕೇರಲಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ. ಇದರ ಮಧ್ಯೆ, ಹೊಸ ತಂತ್ರಜ್ಞಾನಗನ್ನು ಪರಿಚಯಿಸುವ ಎಲೆಕ್ಟ್ರಿಕ್ ಸೈಕಲ್ಗಳೂ ರಸ್ತೆಗಳಿಗೆ ಇಳಿಯುತ್ತಿವೆ.
Advertisement
ಹೌದು… ಎಲೆಕ್ಟ್ರಿಕ್ ಸೈಕಲ್ಗಳ ಬಗ್ಗೆ ಆಸಕ್ತಿಯೂ ಹೆಚ್ಚಾಗುತ್ತಿದೆ. ಪ್ರತಿಷ್ಟಿತ ಕಂಪೆನಿಗಳೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಸೈಕಲ್ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡುತ್ತಿವೆ. ಒಮ್ಮೆ ಚಾರ್ಜ್ ಮಾಡಿದರೆ 100 ಕಿ.ಮೀ. ವರೆಗೂ ಓಡಿಸಬಹುದಾದ ಸೈಕಲ್ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರಗಳೂ ಇದನ್ನು ಪ್ರೋತ್ಸಾಹಿಸುತ್ತಿವೆ. ಇದನ್ನೂ ಓದಿ: ಸ್ಪೇಸ್ ಎಕ್ಸ್ ರಾಕೆಟ್ ಮೂಲಕ ಕಾಫಿನಾಡು ಯುವಕನ ಶಕುಂತಲಾ ಉಪಗ್ರಹ ಉಡಾವಣೆ
Advertisement
ಹಾಗೆಯೇ ದೆಹಲಿಯಲ್ಲಿ E-ಸೈಕಲ್ (ಎಲೆಕ್ಟ್ರಿಕ್ ಬೈಸಿಕಲ್) ಖರೀದಿಸುವ ಮೊದಲ 10,000 ಜನರಿಗೆ ದೆಹಲಿ ಸರ್ಕಾರ ತಲಾ 5,500 ರೂ. ಸಹಾಯಧನ ನೀಡಲು ಮುಂದಾಗಿದೆ. ಅದರಲ್ಲಿ ಮೊದಲ 1 ಸಾವಿರ ಖರೀದಿದಾರರಿಗೆ 2 ಸಾವಿರ ಹೆಚ್ಚುವರಿ ಸಹಾಯಧನ ನೀಡಲಾಗುವುದು ಎಂದು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಹೇಳಿದ್ದಾರೆ.
Advertisement
Advertisement
ವಾಣಿಜ್ಯ ಬಳಕೆಗಾಗಿ ಕಾರ್ಗೋ ಇ-ಸೈಕಲ್ ಹಾಗೂ ಇ-ಕಾರ್ಟ್ಗಳ ಖರೀದಿಗೆ ಸರ್ಕಾರವು ಸಹಾಯಧನ ನೀಡುತ್ತದೆ. ಮೊದಲ 5 ಸಾವಿರ ಕಾರ್ಗೋ ಇ-ಸೈಕಲ್ಗಳ ಖರೀದಿದಾರರಿಗೆ ತಲಾ 15,000 ಸಾವಿರ ಸಹಾಯಧನ ಇರಲಿದ್ದು, ದೆಹಲಿಯ ನಿವಾಸಿಗಳು ಮಾತ್ರ ಈ ಸಹಾಯಧನ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಗಹ್ಲೋಟ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಎಲ್ಸಿ ಮೀಡಿಯಾ ಪ್ಲೇಯರ್ ಬಳಸಿ ಚೀನಾ ಸೈಬರ್ ದಾಳಿ
ಪ್ರಸ್ತುತ ನಗರದ ರಸ್ತೆಗಳಲ್ಲಿ 45,900 ಎಲೆಕ್ಟ್ರಿಕ್ ವಾಹನಗಳು ಸಂಚರಿಸುತ್ತಿದ್ದು, ಈ ಪೈಕಿ ಶೇ.36 ರಷ್ಟು ದ್ವಿಚಕ್ರ ವಾಹನಗಳಿವೆ. ಈ ನಡುವೆ ದೆಹಲಿಯಲ್ಲಿ ಒಟ್ಟು ನೋಂದಾಯಿತ ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರಮಾಣವು ಶೇ.12ರ ಗಡಿಯನ್ನು ದಾಟಿದೆ ಎಂದು ಮಾಹಿತಿ ನೀಡಿದ್ದಾರೆ.