ನವದೆಹಲಿ: ಮದ್ಯದ ಮೇಲೆ ಶೇ.70 ರಷ್ಟು ‘ವಿಶೇಷ ಕೊರೊನಾ ದರ’ ತೆರಿಗೆ ವಿಧಿಸಿದ ದೆಹಲಿಯ ಕೇಜ್ರಿವಾಲ್ ಸರ್ಕಾರ ಈಗ ಪೆಟ್ರೋಲ್ ಮತ್ತು ಡೀಸೆಲ್ ವ್ಯಾಟ್ ತೆರಿಗೆಯನ್ನು ಏರಿಕೆ ಮಾಡಿದೆ.
ಪೆಟ್ರೋಲ್ ಮೇಲೆ ಶೇ.27 ಡೀಸೆಲ್ ಮೇಲೆ ಶೇ.16.75 ವ್ಯಾಟ್ ನಿಗದಿಯಾಗಿತ್ತು. ಆದರೆ ಈಗ ಪಟ್ರೋಲ್ ಮೇಲೆ ಶೇ.30, ಡೀಸೆಲ್ ಮೇಲೆ ಶೇ.30ರಷ್ಟು ವ್ಯಾಟ್ ಏರಿಕೆ ಮಾಡಲಾಗಿದೆ.
Advertisement
Advertisement
ವ್ಯಾಟ್ ಏರಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.67 ರೂ., ಡೀಸೆಲ್ ಬೆಲೆ 7.10 ರೂ. ಏರಿಕೆಯಾಗಿದೆ. ಪರಿಣಾಮ ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71.26 ರೂ.(ಹಿಂದಿನ ದರ 69.59) ಏರಿಕೆಯಾಗಿದ್ದರೆ ಪ್ರತಿ ಲೀಟರ್ ಡೀಸೆಲ್ ದರ 69.39 ರೂ.(62.29 ರೂ.) ಏರಿಕೆಯಾಗಿದೆ.
Advertisement
Advertisement
ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗಿದ್ದರೂ ರಾಜ್ಯಗಳಿಗೆ ಹೆಚ್ಚಿನ ಆದಾಯ ತಂದುಕೊಡುವ ಪೆಟ್ರೋಲ್, ಡೀಸೆಲ್, ಮದ್ಯವನ್ನು ಪಟ್ಟಿಯಲ್ಲಿ ಕೈ ಬಿಡಲಾಗಿತ್ತು. ಪರಿಣಾಮ ಈ ವಸ್ತುಗಳ ಮೇಲೆ ರಾಜ್ಯಗಳಿಗೆ ತೆರಿಗೆ ವಿಧಿಸುವ ಅಧಿಕಾರವಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಇಳಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ತೈಲ ಬೆಲೆ ಇಳಿಕೆಯಾಗಬೇಕಿತ್ತು. ಆದರೆ ರಾಜ್ಯ ಸರ್ಕಾರಗಳು ಲಾಕ್‍ಡೌನ್ ನಿಂದ ಆಗಿರುವ ನಷ್ಟವನ್ನು ಸರಿಪಡಿಸಲು ಪೆಟ್ರೋಲ್, ಡೀಸೆಲ್, ಮದ್ಯದ ಮೇಲೆ ತೆರಿಗೆ ವಿಧಿಸುತ್ತಿವೆ.
ಹರ್ಯಾಣ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅನುಕ್ರಮವಾಗಿ 1 ರೂ., 1.1 ರೂ. ಏರಿಕೆ ಮಾಡಿತ್ತು. ತಮಿಳುನಾಡು ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3.25 ರೂ., ಡೀಸೆಲ್ ಮೇಲೆ 2.50 ರೂ. ಏರಿಕೆ ಮಾಡಿದೆ.