ನವದೆಹಲಿ: ದೆಹಲಿ ಸರ್ಕಾರವು ಉಚಿತ ಪಡಿತರ ಯೋಜನೆಯನ್ನು ಸೆಪ್ಟೆಂಬರ್ 30ರವರೆಗೆ ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ.
ಬುಧವಾರ ನಡೆದ ಕ್ಯಾಬಿನೆಟ್ ಸಭೆಯ ನಂತರ ಆನ್‍ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವುದಾಗಿ ತಿಳಿಸಿದರು. ಕೊರೊನಾ ವೈರಸ್ ಹಿನ್ನೆಲೆ ತಮ್ಮ ಸರ್ಕಾರವು 2020ರ ಏಪ್ರಿಲ್‍ನಿಂದ ಸುಮಾರು 73 ಲಕ್ಷ ನಾಗರಿಕರಿಗೆ ಉಚಿತವಾಗಿ ಪಡಿತರವನ್ನು ಪೂರೈಸುತ್ತಿದೆ. ಇದರ ಪ್ರಯೋಜನವನ್ನು 73 ಲಕ್ಷ ಮಂದಿ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್ – ಯಾವುದೇ ಫೀಸ್ ಕಟ್ಟುವ ಅಗತ್ಯವಿಲ್ಲ
Advertisement
Advertisement
ದೆಹಲಿ ಸರ್ಕಾರವು ಕಳೆದೆರಡು ವರ್ಷಗಳಿಂದ ಜನರಿಗೆ ಉಚಿತವಾಗಿ ಪಡಿತರವನ್ನು ನೀಡುತ್ತಿದೆ. ಸರ್ಕಾರ ಪಡಿತರ ಅಂಗಡಿಗಳ ಮೂಲಕ ಅತೀ ಕಡಿಮೆ ಬೆಲೆಗೆ ಪಡಿತರವನ್ನು ನೀಡುತ್ತಿದೆ. ಕಳೆದೆರಡು ವರ್ಷಗಳಿಂದ ನಾವು ಉಚಿತವಾಗಿ ಪಡಿತರವನ್ನು ನೀಡುತ್ತಿದ್ದೇವೆ. ಇದೀಗ ಈ ಯೋಜನೆಯನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಿಸಿದ್ದೇವೆ ಮತ್ತು ಮುಂಬರುವ ತಿಂಗಳುಗಳಲ್ಲಿ ಉಚಿತವಾಗಿ ಪಡಿತರ ನೀಡುವುದನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಗುಡ್‍ನ್ಯೂಸ್- 2,500 ರೂ. ಗೌರವ ಧನ ಹೆಚ್ಚಿಸಿ ಆದೇಶ
Advertisement
ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‍ಎಫ್‍ಎಸ್‍ಎ), 2013 ರ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಪಡಿತರವನ್ನು ವಿತರಿಸುತ್ತಿದೆ. ಎನ್‍ಎಫ್‍ಎಸ್‍ಸಿ ವರ್ಗವು ವಲಸೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗೃಹ ಸಹಾಯಕರು ಮತ್ತು ಪಡಿತರ ಚೀಟಿಗಳನ್ನು ಹೊಂದಿರದವರಿಗೂ ರೇಷನ್ ನೀಡಲಾಗುತ್ತಿದೆ.
Advertisement
ಈ ಯೋಜನೆಯಡಿಯಲ್ಲಿ ಎನ್‍ಎಫ್‍ಎಸ್ ಕಾಯಿದೆ 2013ರ ಅಡಿಯಲ್ಲಿ ಸೂಚಿಸಲಾದ ಅರ್ಹತೆಯ ಪ್ರಕಾರ ಪ್ರತಿ ತಿಂಗಳು ಐದು ಕೆಜಿ ಆಹಾರ ಧಾನ್ಯಗಳು ಮತ್ತು ನಾಲ್ಕು ಕೆಜಿ ಗೋಧಿ ಮತ್ತು ಒಂದು ಕೆಜಿ ಅಕ್ಕಿಯನ್ನು ಅಗತ್ಯವಿರುವವರಿಗೆ ಉಚಿತವಾಗಿ ನೀಡಲಾಗುತ್ತದೆ. ದೆಹಲಿ ಸರ್ಕಾರವು ಈ ಹಿಂದೆ ಉಚಿತ ಪಡಿತರ ಯೋಜನೆಯನ್ನು 2021ರ ಡಿಸೆಂಬರ್‌ನಿಂದ 2022ರ ಮೇವರೆಗೆ ವಿಸ್ತರಿಸಿತ್ತು.