ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಬೆಳಗ್ಗೆ 12.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿ ದಟ್ಟ ಮಂಜು ಕವಿದ ಪರಿಣಾಮ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಇಂದು ಬೆಳಗ್ಗೆ ದಟ್ಟವಾದ ಮಂಜು ಆವರಿಸಿಕೊಂಡಿದರಿಂದ 69 ರೈಲುಗಳು ವಿಳಂಬವಾಗಿದ್ದು 22 ಬಾರಿ ಸಮಯವನ್ನು ಬದಲಾವಣೆ ಮಾಡಲಾಗಿದ್ದು ಹಾಗೂ 8 ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
Advertisement
ಬೆಳಗ್ಗೆ 8.30 ಹೊತ್ತಿಗೆ ಶೇ. 93 ತೇವಾಂಶವಿತ್ತು. 400 ಮೀಟರ್ ದೂರದಲ್ಲಿರುವ ವಸ್ತುಗಳು ಮಾತ್ರ ಕಾಣುತ್ತಿತ್ತು. ರಾಜೇಂದ್ರ ನಗರ ಟರ್ಮಿನಲ್ – ನ್ಯೂ ಡೆಲ್ಲಿ ಸಂಪೂರ್ಣ ಕ್ರಾಂತಿ ಎಕ್ಸ್ ಪ್ರೆಸ್ 24 ಗಂಟೆ ವಿಳಂಬವಾಗಿದ್ದರೆ, ಸೀತಾಮರ್ಹಿ – ಆನಂದ್ ವಿಹಾರ್ ಲಿಚಾವಿ 25 ಗಂಟೆಗಳ ಕಾಲ ವಿಳಂಬವಾಗಿತ್ತು.
Advertisement
#Smog continues to shroud the national capital: Visuals from #Delhi's Connaught Place pic.twitter.com/X2BtqGnj2f
— ANI (@ANI) November 13, 2017
Advertisement
ನ್ಯೂ ದೆಹಲಿ- ವಾರಣಾಸಿ ಮಹಾನಮ ಎಕ್ಸ್ ಪ್ರೆಸ್, ದೆಹಲಿ- ಅಜಾಮ್‍ಘಡ ಕೈಫಿಯತ್ ಎಕ್ಸ್ ಪ್ರೆಸ್, ಆನಂದ್ ವಿಹಾರ್- ಮೌ ಎಕ್ಸ್ ಪ್ರೆಸ್, ಶ್ರೀಗಂಗಾನಗರ- ದೆಹಲಿ ಇಂಟರ್ ಸಿಟಿ, ದೆಹಲಿ- ಫಜಿಲ್ಕಾ ಇಂಟರ್ ಸಿಟಿ, ದೆಹಲಿ- ಅಲಿಪುರ್‍ದ್ವರ್ ಮಹಾನಂದ ಎಕ್ಸ್ ಪ್ರಸ್ ಹಾಗೂ ರಾಕ್ಸೂಲ್ – ದೆಹಲಿ ಸದ್ಭಾವನ ಎಕ್ಸ್ ಪ್ರೆಸ್ ಗಳು ಭಾರಿ ಮಂಜಿದ್ದ ಕಾರಣ ರದ್ದಾಗಿದೆ.
Advertisement
ಮಂಜಿನಿಂದಾಗಿ ಯಾವುದೇ ವಿಮಾನವನ್ನು ರದ್ದುಗೊಳಿಸಿಲ್ಲ ಎಂದು ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.