-ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ
-5 ದಿನಗಳ ನಂತ್ರ ಪ್ರಕರಣ ಬೆಳಕಿಗೆ
ನವದೆಹಲಿ: ಈಶಾನ್ಯ ದೆಹಲಿ ಭಜನಾಪುರದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಮನೆಯಿಂದ ದುರ್ನಾತ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
Delhi: Five people found dead at a house in Bhajanpura.More details awaited
— ANI (@ANI) February 12, 2020
ಶಂಭು ಕುಮಾರ್ (45), ಪತ್ನಿ ಸುನಿತಾ (38), ಶಿವಂ (18), ಸಚಿನ್ (16) ಮತ್ತು ಕೋಮಲ್ (12) ಮೃತರು. ಮೃತರು ಕುಟುಂಬ ಸಮೇತರಾಗಿ ಲೇನ್ ನಂಬರ್ 111ರಲ್ಲಿ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಇಂದು ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದಾಗ ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಹಾಗಾಗಿ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ವರದಿಯಾಗಿಲ್ಲ. ಐವರು ಮೃತಪಟ್ಟು ಐದು ದಿನಗಳಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.ಮೃತ ದೇಹಗಳನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.