ನವದೆಹಲಿ: ರಾಜಧಾನಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ಟ್ರಾಮ್ ಸೆಂಟರ್ ನ ಆಪರೇಷನ್ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಟ್ರಾಮ್ ಸೆಂಟರ್ ನ ಗ್ರೌಂಡ್ ಫ್ಲೋರ್ ನ ಕೊಠಡಿಯಲ್ಲಿ ಶಾಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಅವಘಡದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ 4 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿ ನಂದಿಸಿವೆ. ಆಸ್ಪತ್ರೆಯಲ್ಲಿಯ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
Advertisement
ಬೆಂಕಿ ಕಾಣಿಸಿಕೊಂಡ ವೇಳೆ ಕೊಠಡಿಯಲ್ಲಿ ಯಾರು ಇರಲಿಲ್ಲ. ಹಾಗಾಗಿ ಯಾವುದೇ ಅಪಾಯವಾಗಿಲ್ಲ. ಟ್ರಾಮ್ ಸೆಂಟರ್ ನ ಬೇಸ್ ಮೆಂಟ್‍ನಲ್ಲಿ ಸಂಜೆ ಸುಮಾರು 6ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಹೊಗೆ ಮೇಲಿನ ಮಹಡಿಗಳಿಗೂ ವ್ಯಾಪಿಸಿದ್ದರಿಂದ ಮುನ್ನೇಚ್ಚರಿಕೆ ಕ್ರಮವಾಗಿ ಎಲ್ಲರನ್ನು ಸ್ಥಳಾಂತರಿಸಲಾಗಿದೆ ಎಂದು ಅಗ್ನಿ ಶಾಮಕದಳ ಸಿಬ್ಬಂದಿ ತಿಳಿಸಿದ್ದಾರೆ.
Advertisement
#VISUALS Delhi: Fire breaks out at an operation theatre in AIIMS (All India Institute of Medical Sciences) Trauma Center, fire tenders present; more details awaited. pic.twitter.com/PGGmZduX5p
— ANI (@ANI) March 24, 2019
Advertisement
Delhi Fire Department: Fire broke out on ground floor at AIIMS (All India Institute of Medical Sciences) Trauma Center. No one is stranded. https://t.co/TXp453sDaQ
— ANI (@ANI) March 24, 2019