ನವದೆಹಲಿ: ವೈದ್ಯೆಯೊಬ್ಬರ (Woman Doctor) ಜೊತೆ ಅನುಚಿತವಾಗಿ ವರ್ತಿಸಿದ ಆಪ್ (AAP) ಶಾಸಕಿ ರಾಖಿ ಬಿರ್ಲಾ (Rakhi Birla) ಅವರ ತಂದೆ ಭೂಪೇಂದ್ರ ಸಿಂಗ್ ಬಿದ್ಲಾನ್ (72) ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಯ ಮಹಿಳಾ ವೈದ್ಯರೊಬ್ಬರು ಶಾಸಕರ ತಂದೆ ವಿರುದ್ಧ ದೂರು ದಾಖಲಿಸಿದ್ದಾರೆ.
ಬುಧವಾರ ಬಿರ್ಲಾ ಅವರ ತಂದೆ ಸಂಜಯ್ ಗಾಂಧಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಅವರು ಮಹಿಳಾ ವೈದ್ಯರೊಂದಿಗೆ ಜಗಳವಾಡಿದ್ದಾರೆ. ಈ ಬಗ್ಗೆ ಎಫ್‍ಐಆರ್ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆದ ಅಹಿತಕರ ಘಟನೆಯ ನಂತರ ರಾಖಿ ಬಿರ್ಲಾ ಮತ್ತು ವೈದ್ಯರನ್ನು ಖುದ್ದಾಗಿ ಭೇಟಿ ಮಾಡಿ ಸಭೆ ನಡೆಸಿದರು.
ವೈದ್ಯಾಧಿಕಾರಿಗಳ ರಕ್ಷಣೆಗಾಗಿ ಕಠಿಣ ಕಾನೂನಿಗಾಗಿ ವೈದ್ಯರು ಪ್ರತಿಭಟನೆ ನಡೆಸುತ್ತಿರುವ ಈ ಸಮಯದಲ್ಲಿ ಈ ಬೆಳವಣಿಗೆ ನಡೆದಿದೆ.