– 20ಕ್ಕೂ ಹೆಚ್ಚು ಮಂದಿಗೆ ಗಾಯ; ದೆಹಲಿಯಾದ್ಯಂತ ಹೈಅಲರ್ಟ್
– ಉಗ್ರ ಕೃತ್ಯ, ಸಿಎನ್‌ಜಿ ಸ್ಪೋಟದ ಶಂಕೆ; ಎಲ್ಲಾ ಆಯಾಮದಲ್ಲೂ ತನಿಖೆ
ನವದೆಹಲಿ: ಕೆಂಪು ಕೋಟೆ ಸಮೀಪದ ಲಾಲ್ ಕಿಲಾ ಮೆಟ್ರೋ ನಿಲ್ದಾಣ (Red Fort Metro Station) ಗೇಟ್ ಸಂಖ್ಯೆ-1ರ ಬಳಿ ಇಂದು ಸಂಜೆ ಸಂಭವಿಸಿದ ಸ್ಫೋಟದಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಗಳಿಂದ ತಿಳಿದುಬಂದಿದೆ.
#WATCH | Delhi: Car parts seen strewn around due to the force of the blast
Multiple casualties have been brought to the LNJP hospital due to the blast near Gate No 1 of Red Fort Metro Station. Several people have been injured in the incident, sources tell ANI pic.twitter.com/UA8KDHqDTN
— ANI (@ANI) November 10, 2025
ಇಂದು ಸಂಜೆ 6:45 ರಿಂದ 7 ಗಂಟೆ ಅವಧಿಯಲ್ಲಿ ಸ್ಫೋಟ ಸಂಭವಿಸಿದ್ದು, ಉಗ್ರ ಕೃತ್ಯದ ಶಂಕೆಯೂ ವ್ಯಕ್ತವಾಗಿದೆ. ಸಿಎನ್‌ಜಿ ಸ್ಫೋಟಿಸಿರುವ ಶಂಕೆಯೂ ಕಂಡುಬಂದಿದೆ. ಈಗಾಗಲೇ 7ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಸ್ಥಳದಲ್ಲಿ ಬೀಡುಬಿಟ್ಟಿವೆ. ದೆಹಲಿ ಪೊಲೀಸ್ ವಿಶೇಷ ಘಟಕ, ಬಾಂಬ್ ನಿಷ್ಕ್ರಿಯ ದಳಗಳೂ ಸ್ಥಳಕ್ಕೆ ತೆರಳಿದ್ದು ಸ್ಫೋಟಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ನಡೆಸುತ್ತಿವೆ. ಈ ಬೆನ್ನಲ್ಲೇ ದೆಹಲಿ ಪೊಲೀಸರು ಇಡೀ ರಾಜ್ಯಾದ್ಯಂತ ಹೈಅಲರ್ಟ್ ಘೋಷಣೆ ಮಾಡಿದ್ದಾರೆ.
ಮೃತದೇಹ ಹೊರಕ್ಕೆ
ಭಯಾನಕ ಸ್ಫೋಟದ ತೀವ್ರತೆಗೆ ಮೃತ ದೇಹಗಳು ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ಧಾವಿಸಿರುವ ಭದ್ರತಾ ಪಡೆಗಳು ಮೃತದೇಹಗಳನ್ನು ಹೊರ ತೆಗೆಯುವ ಕಾರ್ಯಾಚರಣೆಯಲ್ಲಿ ತೊಡಗಿವೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಂದು ದೆಹಲಿ ಸಮೀಪ ವಿವಿಧೆಡೆ 2,900 ಕೆಜಿ ಸ್ಫೋಟಕ ವಸ್ತುಗಳನ್ನ ಪತ್ತೆಹಚ್ಚಿ ಜಪ್ತಿ ಮಾಡಿದ್ದರು. ಈ ಬೆಳವಣಿಗೆ ನಡೆದ ಕೆಲವೇ ಗಂಟೆಗಳಲ್ಲಿ ಭೀಕರ ಸ್ಫೋಟ ಸಂಭವಿಸಿರುವುದು ಜನರನ್ನ ಆತಂಕಕ್ಕೆ ಕಾರಣವಾಗಿದೆ.
#WATCH | Delhi: Blast near Red Fort | Kishor Prasad, DIG CRPF reaches the spot.
He says, “It is too early to say anything. I am just going to the site…” pic.twitter.com/JCpKlWZqu5
— ANI (@ANI) November 10, 2025
ಇಷ್ಟು ದೊಡ್ಡ ಶಬ್ಧ ಕೇಳೇ ಇಲ್ಲ: ಪ್ರತ್ಯಕ್ಷದರ್ಶಿ
ಇನ್ನೂ ದೆಹಲಿ ಸ್ಫೋಟದ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಮಾತನಾಡಿದ್ದಾರೆ. ಹಿಂದೆಂದೂ ಇಷ್ಟು ದೊಡ್ಡಮಟ್ಟದ ಶಬ್ಧ ಕೇಳಿರಲಿಲ್ಲ. ಭಾರೀ ಪ್ರಮಾಣದ ಬೆಂಕಿ ಹೊತ್ತಿಕೊಂಡಿದ್ದನ್ನ ನೋಡಿದೆ. ನಾವೂ ಕೂಡ ಸಾಯುತ್ತೇವೆನೋ ಅಂದುಕೊಂಡೆ. ತಪ್ಪಿಸಿಕೊಳ್ಳಲು ಹೋಗಿ ಮೂರು ಸಲ ಬಿದ್ದೆ ಎಂದು ಪ್ರತ್ಯಕ್ಷದರ್ಶಿ ಸ್ಥಳೀಯ ನಿವಾಸಿ ರಾಜಧರ್ ಪಾಂಡೆ ಹೇಳಿದ್ದಾರೆ.


