ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ (Delhi Excise Policy Scam) ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ ಸಂಸದ ಸಂಜಯ್ ಸಿಂಗ್ (Sanjay Singh) ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು (ಬುಧವಾರ) ಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಶೋಧ ನಡೆಸಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್ ಸಿಂಗ್ ಆಪ್ತ ಸಿಬ್ಬಂದಿ ಮತ್ತು ಅವರೊಂದಿಗೆ ಸಂಬಂಧ ಹೊಂದಿರುವವರನ್ನು ಈ ಹಿಂದೆ ಇಡಿ ವಿಚಾರಣೆ ನಡೆಸಿತ್ತು. ದಾಳಿ ಬಗ್ಗೆ ಮಾತನಾಡಿರುವ ಆಪ್ ವಕ್ತಾರೆ ರೀನಾ ಗುಪ್ತಾ, ಸಂಜಯ್ ಸಿಂಗ್ ಅವರು ಪ್ರಧಾನಿ ಮೋದಿ ಮತ್ತು ಅದಾನಿ ವಿಷಯದ ಬಗ್ಗೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದರಿಂದ ಅವರ ನಿವಾಸದ ಮೇಲೆ ದಾಳಿ ನಡೆಸಲಾಗುತ್ತಿದೆ. ಹಿಂದೆಯೂ ಏನೂ ಸಿಗಲಿಲ್ಲ, ಇಂದು ಏನೂ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೀನಾದಿಂದ ಅಕ್ರಮ ಹೂಡಿಕೆ – ನ್ಯೂಸ್ಕ್ಲಿಕ್ ಸಂಪಾದಕ, HR 7 ದಿನ ಪೊಲೀಸ್ ಕಸ್ಟಡಿಗೆ – ಏನಿದು ಪ್ರಕರಣ?
Advertisement
Advertisement
ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರ ಲಂಚವನ್ನು ಪಡೆದಿದೆ. ಹಣ ಪಾವತಿಸಿದ ಕೆಲವು ಡೀಲರ್ಗಳಿಗೆ ಅದ್ಯತೆ ನೀಡಿದೆ ಎಂದು ಆರೋಪಿಸಲಾಗಿದೆ. ಆದರೆ ಇದನ್ನು ಆಪ್ ಬಲವಾಗಿ ನಿರಾಕರಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಮನೀಶ್ ಸಿಸೋಡಿಯ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ – ಲಾಲು ಕುಟುಂಬಕ್ಕೆ ಜಾಮೀನು
Advertisement
Web Stories