ನವದೆಹಲಿ: ದೆಹಲಿಯ ತಾಂತ್ರಿಕ ವಿಶ್ವವಿದ್ಯಾಲಯದ(ಡಿಟಿಯು) ಅಂತಿಮ ವರ್ಷದ ವಿದ್ಯಾರ್ಥಿಗೆ ಭಾರೀ ಮೊತ್ತದ ಸಂಬಳದ ಆಫರ್ ನೀಡಿ ಅಮೆರಿಕ ಮೂಲದ ಉಬರ್ ಸಂಸ್ಥೆ ಉದ್ಯೋಗ ನೀಡಿದೆ.
ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಓದುತ್ತಿರುವ ಸಿದ್ದಾರ್ಥ್ ಅವರನ್ನು ಉಬರ್ ಆಯ್ಕೆ ಮಾಡಿದ್ದು ಅವರಿಗೆ ವಾರ್ಷಿಕ 1,10,000 ಡಾಲರ್(ಅಂದಾಜು 71 ಲಕ್ಷ ರೂ.) ಸಂಬಳದ ಪ್ಯಾಕೆಜ್ ಘೋಷಿಸಿದೆ.
Advertisement
ದೆಹಲಿ ಪಬ್ಲಿಕ್ ಸ್ಕೂಲ್ ಹಳೆಯ ವಿದ್ಯಾರ್ಥಿಯಾಗಿರುವ ಸಿದ್ದಾರ್ಥ್ ತಂದೆ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
Advertisement
ಕ್ಯಾಂಪಸ್ ಸಂದರ್ಶನದ ವೇಳೆ ಈ ಹಿಂದೆ ಡಿಟಿಯು ವಿದ್ಯಾರ್ಥಿಯೊಬ್ಬರು ವಾರ್ಷಿಕ 1.25 ಕೋಟಿ ರೂ. ಪ್ಯಾಕೇಜ್ ಸಂಬಳದ ಉದ್ಯೋಗ ಗಿಟ್ಟಿಸಿಕೊಂಡಿದ್ದರು. 2015ರಲ್ಲಿ ಚೇತನ್ ಕಕ್ಕರ್ ಎಂಬವರಿಗೆ ಗೂಗಲ್ ಈ ಮೊತ್ತದ ಸಂಬಳದ ಆಫರ್ ನೀಡಿ ಉದ್ಯೋಗ ನೀಡಿತ್ತು.