ನವದೆಹಲಿ: ಬಜೆಟ್ (Budget 2025) ಡೇ ಸೂಪರ್ ಓವರ್‌ನಲ್ಲಿ ನಿರ್ಮಲಾ ಸೀತಾರಾಮನ್ (Nirmala sitharaman) ʻಸೂಪರ್ ಸಿಕ್ಸ್ʼ ಸಿಡಿಸಿದ ಪರಿಣಾಮ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿದೆ ಎಂಬ ವಿಶ್ಲೇಷಣೆ ಈಗ ಕೇಳಿ ಬಂದಿದೆ.
ಫೆಬ್ರವರಿ ಕೊನೆಯವರೆಗೂ ಆಪ್ ಮತ್ತು ಬಿಜೆಪಿ ಮಧ್ಯೆ ನೆಕ್ ಟು ನೆಕ್ ಪೈಪೋಟಿ ಇತ್ತು. ಈ ಸಂದರ್ಭದಲ್ಲಿ ಕೇಂದ್ರ ಬಜೆಟ್ ಬಂದಿತ್ತು. ಮಧ್ಯಮ ವರ್ಗದವರನ್ನು ಗುರಿಯಾಗಿಸಿ ನಿರ್ಮಲಾ ಸೀತಾರಾಮನ್ ಘೋಷಿಸಿದ ತೆರಿಗೆ ವಿನಾಯಿತಿ ಈ ಚುನಾವಣೆಯಲ್ಲಿ ಬೂಸ್ಟ್ ನೀಡಿದ ಪರಿಣಾಮ ಈಗ ದೆಹಲಿಯಲ್ಲಿ (Delhi) 27 ವರ್ಷದ ಬಳಿಕ ಬಿಜೆಪಿ ಅಧಿಕಾರಕ್ಕೆ ಏರಿದೆ.
ಇದೇ ತಿಂಗಳು ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ 12 ಲಕ್ಷ ರೂ. ವರೆಗೂ ತೆರಿಗೆ ವಿನಾಯಿತಿ ಘೋಷಿಸಿದರು. ಇದು ರಾಷ್ಟ್ರ ರಾಜಧಾನಿಯಲ್ಲಿರುವ ಮಧ್ಯಮ ವರ್ಗದ 45% ಮತದಾರರ ಮೇಲೆ ಪರಿಣಾಮ ಬೀರಿತ್ತು. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿ ಗೆಲುವು, ರಾಜ್ಯದ ಮುಂದಿನ ಚುನಾವಣೆಗೆ ದಿಕ್ಸೂಚಿ – ಆರ್.ಅಶೋಕ್
ದೆಹಲಿ ಚುನಾವಣೆಯ (Delhi Election) ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಜೆಟ್‌ನಲ್ಲಿ ಯಾವುದೇ ದೆಹಲಿ ಸಂಬಂಧ ಯೋಜನೆಗಳನ್ನು ಪ್ರಕಟಿಸಬಾರದು ಎಂದು ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಹೀಗಿದ್ದರೂ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಬಿಜೆಪಿ ಮಧ್ಯಮ ವರ್ಗದ ಜನ ಹೆಚ್ಚಾಗಿರುವ ದೆಹಲಿಯನ್ನ ಕೇಂದ್ರೀಕರಿಸಿ ತೆರಿಗೆಯಲ್ಲಿ ವಿನಾಯತಿ ನೀಡಿತ್ತು. ಇದು ಕೇಸರಿ ಪಡೆಗೆ ದೊಡ್ಡ ಶಕ್ತಿ ತಂದುಕೊಟ್ಟಿತು. 2020ರಲ್ಲಿ ಮಧ್ಯಮ ವರ್ಗದ ಬೆಂಬಲದಿಂದಲೇ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದುಗೆ ಹಿಡಿದಿತ್ತು.
2024ರಲ್ಲಿ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಇದೇ ಮಧ್ಯಮ ವರ್ಗ ಸಂಪೂರ್ಣ ಬೆಂಬಲ ನೀಡಿತ್ತು. ಈ ಬಜೆಟ್‌ನಲ್ಲೂ ಪ್ರಧಾನಿ ಮೋದಿ ಮಧ್ಯಮ ವರ್ಗವನ್ನು ಕೇಂದ್ರೀಕರಿಸಿ ಆದಾಯ ತೆರಿಗೆ ಮಿತಿ ಸಡಿಲಿಕೆ ನೀಡಿದ್ದರಿಂದಲೇ ದೆಹಲಿ ಜನರ ಒಲವು ಬಿಜೆಪಿಯತ್ತ ವಾಲಿತು.
ಮಧ್ಯಮ ವರ್ಗದವರ ಆಕ್ರೋಶ ತಣ್ಣಗೆ ಮಾಡಲು ನಿರ್ಮಲಾ ಸೀತಾರಾಮನ್ 2024 ಜುಲೈನಲ್ಲೇ 12 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಘೋಷಿಸಬಹುದಿತ್ತು. ಆದ್ರೆ ಆ ಸಂದರ್ಭದಲ್ಲಿ ಯಾವುದೇ ಮಹತ್ವದ ತೆರಿಗೆ ವಿನಾಯಿತಿ ಘೋಷಣೆ ಮಾಡದ ಸೀತಾರಾಮನ್ ಈ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು. ಚುನಾವಣೆಯ ಹತ್ತಿರ ಇರುವಾಗಲೇ ಈ ಐತಿಹಾಸಿಕ ಘೋಷಣೆ ಪ್ರಕಟವಾದ್ದರಿಂದ ದೆಹಲಿಯ ಮತದಾರರು ಈ ಬಾರಿ ಬಿಜೆಪಿ ಕೈ ಹಿಡಿದಿದ್ದಾರೆ.
ದೆಹಲಿಯ 70 ಕ್ಷೇತ್ರಗಳಿಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ 60.42% ರಷ್ಟು ಮತದಾನ ನಡೆದಿತ್ತು. ಇದನ್ನೂ ಓದಿ: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣಗೆ ಮದುವೆ ಆಮಂತ್ರಣ ನೀಡಿದ ಡಾಲಿ
ಇನ್ನೂ ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿತ್ತು. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿತ್ತು. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿತ್ತು. ಆದ್ರೆ ಒಂದೂ ಖಾತೆ ತೆರೆಯದೆ ಕಾಂಗ್ರೆಸ್ ಮಕಾಡೆ ಮಲಗಿತು.