ನವದೆಹಲಿ: ಚುನಾವಣೆ (Delhi Election Counting) ಮತ ಎಣಿಕೆ ನಡೆಯುತ್ತಿದ್ದಂತೆ ಆಪ್ (AAP) ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಬಿಜೆಪಿ (BJP) ಮತ್ತು ಆಪ್ ಮಧ್ಯೆ ನೇರಾನೇರ ಸ್ಪರ್ಧೆಯಿದೆ. 18 ಕ್ಷೇತ್ರಗಳಲ್ಲಿ ಎರಡು ಪಕ್ಷಗಳ ನಡುವಿನ ಅಂತರ 2 ಸಾವಿರಕ್ಕೂ ಕಡಿಮೆಯಿದೆ. ಹೀಗಾಗಿ ಚುನಾವಣ ಮತ ಎಣಿಕೆ ಈಗ ರೋಚಕ ಘಟ್ಟಕ್ಕೆ ತಿರುಗಿದೆ.
Advertisement
ಬೆಳಗ್ಗೆ 9:30ರ ಟ್ರೆಂಡ್ ಪ್ರಕಾರ ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ಬೆಳಗ್ಗೆ 11 ಗಂಟೆಯ ವೇಳೆಗೆ ಬಿಜೆಪಿ 41 ಆಪ್ 29 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಮುನ್ನಡೆ ಪಡೆಯಲು ವಿಫಲವಾಗಿದೆ.
Advertisement
VIDEO | Delhi Election Results 2025: Visuals of AAP workers celebrating at party office amid counting of votes.#DelhiElectionResults #DelhiElectionResultsWithPTI
(Full video is available on PTI Videos – https://t.co/n147TvrpG7) pic.twitter.com/UtWZfXc99C
— Press Trust of India (@PTI_News) February 8, 2025
Advertisement
699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರ ಸೇರಿತ್ತು. ಬಹುತೇಕ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿಗೆ (BJP) ಅಧಿಕಾರ ದಕ್ಕಲಿದೆ ಎಂದು ಹೇಳಿವೆ. ಈ ಸಮೀಕ್ಷೆಗಳನ್ನು ಒಪ್ಪದ ಆಮ್ ಆದ್ಮಿ ಪಕ್ಷ ಬಿಜೆಪಿ ವಿರುದ್ಧವೇ ಆಪರೇಷನ್ ಕಮಲದ ಆರೋಪ ಮಾಡಿದೆ.
Advertisement
2013 ರ ಚುನಾವಣೆಯಲ್ಲಿ ಬಿಜೆಪಿ 31, ಆಪ್ 28, ಕಾಂಗ್ರೆಸ್ 08 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಇತರರು ಮೂರು ಸ್ಥಾನ ಗೆದ್ದಿದ್ದರು. ಆಪ್‌ಗೆ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಕೇಜ್ರಿವಾಲ್ (Arvind Kejriwal) ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದರು.
ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.