ಜನ ಶಕ್ತಿಯೇ ಸರ್ವಶ್ರೇಷ್ಠ: ಮೋದಿ
ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ನೀಡಿದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಜನಶಕ್ತಿಯೇ ಸರ್ವಶ್ರೇಷ್ಠ. ಅಭಿವೃದ್ಧಿ ಗೆಲ್ಲುತ್ತದೆ, ಉತ್ತಮ ಆಡಳಿತ ಗೆಲ್ಲುತ್ತದೆ. ಬಿಜೆಪಿಗೆ ಈ ಅದ್ಭುತ ಮತ್ತು ಐತಿಹಾಸಿಕ ಜನಾದೇಶಕ್ಕಾಗಿ ದೆಹಲಿಯ ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ನಾನು ನಮಸ್ಕರಿಸುತ್ತೇನೆ. ಈ ಆಶೀರ್ವಾದಗಳನ್ನು ಪಡೆಯಲು ನಮಗೆ ವಿನಮ್ರತೆ ಮತ್ತು ಗೌರವವಿದೆ. ದೆಹಲಿಯನ್ನು ಅಭಿವೃದ್ಧಿಪಡಿಸುವಲ್ಲಿ, ಜನರ ಒಟ್ಟಾರೆ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವಲ್ಲಿ ದೆಹಲಿಗೆ ಪ್ರಮುಖ ಪಾತ್ರವಿದೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ನಾವು ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಜನರ ತೀರ್ಪನ್ನು ಸ್ವೀಕರಿಸುತ್ತೇವೆ
ದೆಹಲಿ ಚುನಾವಣೆ ಫಲಿತಾಂಶದ ಕುರಿತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. ದೆಹಲಿ ಚುನಾವಣೆಯ ಫಲಿತಾಂಶಗಳನ್ನು ಇಂದು ಘೋಷಿಸಲಾಗಿದೆ. ನಾವು ಜನರ ತೀರ್ಪನ್ನು ಸ್ವೀಕರಿಸುತ್ತೇವೆ. ಜನರ ನಿರ್ಧಾರವೇ ಅಂತಿಮ. ಬಿಜೆಪಿಯ ಗೆಲುವಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ತಮಗೆ ಬಹುಮತ ನೀಡಿದ ಜನರ ಆಶಯಗಳು ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಬಿಜೆಪಿ ಆಡಳಿತ ನಡೆಸುತ್ತದೆಂದು ನಾನು ಭಾವಿಸುತ್ತೇನೆ ಎಂದು ಕೇಜ್ರಿವಾಲ್ ಮಾತನಾಡಿದ್ದಾರೆ.
ಬಿಜೆಪಿಯನ್ನು ಗೆಲ್ಲಿಸಿದ್ದಕ್ಕೆ ರಾಹುಲ್‌ಗೆ ಅಭಿನಂದನೆ
“ರಾಹುಲ್ ಗಾಂಧಿ ಬಿಜೆಪಿಯನ್ನು ಸೋಲಿಸಲು ಅಸಮರ್ಥರು ಎಂಬುದನ್ನು ದೆಹಲಿ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ. ಅವರಿಗೆ ಸ್ವಂತ ಬಲದಿಂದ ಗೆಲ್ಲಲು ಸಾಧ್ಯವಿಲ್ಲ. ಅವರು ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸುತ್ತಾರೆ. ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡುತ್ತಾರೆ. ಬಿಜೆಪಿಗೆ ಮತ್ತೊಂದು ಗೆಲುವು ಸಿಕ್ಕಿದ್ದಕ್ಕೆ ರಾಹುಲ್ ಗಾಂಧಿಯನ್ನು ಅಭಿನಂದಿಸುತ್ತೇನೆ” – ಕೆಟಿ ರಾಮರಾವ್, ಬಿಆರ್‌ಎಸ್ ಕಾರ್ಯಾಧ್ಯಕ್ಷ
ಕೇಜ್ರಿವಾಲ್ ಶೀಘ್ರವೇ ಜೈಲಿಗೆ
“ಪ್ರಧಾನಿ ಮೋದಿ ಏನು ಹೇಳುತ್ತಾರೋ, ಅದನ್ನು ಜಗತ್ತು ನಂಬುತ್ತದೆ. 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಮರಳುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರ ರಾಜಕೀಯ ಜೀವನ ಈಗ ಮುಗಿದಿದೆ, ಅವರನ್ನು ಶೀಘ್ರದಲ್ಲೇ ಜೈಲಿಗೆ ಕಳುಹಿಸಲಾಗುವುದು” ಮಂಜಿಂದರ್ ಸಿಂಗ್ ಸಿರ್ಸಾ, ರಾಜೌರಿ ಗಾರ್ಡನ್ ಕ್ಷೇತ್ರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ
ದೆಹಲಿ ಸಿಎಂ ಅತಿಶಿಗೆ ಗೆಲುವು – ಕಲ್ಕಾಜಿ ಕ್ಷೇತ್ರ ಉಳಿಸಿಕೊಂಡ ಆಪ್ ನಾಯಕಿ
ನಮ್ಮನ್ನು ಸೋಲಿಸಲು ಮೋದಿಗೆ ಇನ್ನೊಂದು ಜನ್ಮ ಬೇಕು ಎಂದಿದ್ದ ಕೇಜ್ರಿವಾಲ್‌ಗೆ ಸೋಲು
ಸತ್ಯೇಂದ್ರ ಜೈನ್‌ಗೆ ಸೋಲು
ಅಬಕಾರಿ ಹಗರಣದಲ್ಲಿ ಜೈಲಿಗೆ ಹೋಗಿದ್ದ ಸತ್ಯೇಂದ್ರ ಜೈನ್‌ಗೆ ಸೋಲು – ಶಕುರ್ ಬಸ್ತಿ ಕ್ಷೇತ್ರದಲ್ಲಿ ಬಿಜೆಪಿ ಕರ್ನೈಲ್ ಸಿಂಗ್‌ಗೆ ಗೆಲುವು. ಕರ್ನೈಲ್ ಸಿಂಗ್‌ಗೆ 52,313 ಮತಗಳನ್ನು ಪಡೆದರೆ, ಸತ್ಯೇಂದರ್ ಜೈನ್ 32,977 ಮತ ಪಡೆದರು. ಕಾಂಗ್ರೆಸ್‌ನ ಸತೀಶ್ ಕುಮಾರ್ ಲೂತ್ರಾ ಕೇವಲ 5,364 ಮತಗಳನ್ನು ಮಾತ್ರ ಗಳಿಸಿದ್ದಾರೆ.
ಅತಿಶಿಗೆ ಗೆಲುವು
ಕಲ್ಕಾಜಿ ಕ್ಷೇತ್ರದಿಂದ ಅತಿಶಿಗೆ ಗೆಲುವು. ಬಿಜೆಪಿಯ ಬಿಧುರಿ ವಿರುದ್ಧ ಗೆದ್ದ ಅತಿಶಿ. ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆಯಾಗುವ ಸಾಧ್ಯತೆ?
ಅಮಿತ್ ಶಾ ನಿವಾಸಕ್ಕೆ ಪರ್ವೇಶ್ ವರ್ಮಾ
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದ ಪರ್ವೇಶ್ ವರ್ಮಾ ಈಗ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ತೆರಳಿದ್ದಾರೆ.
ಕೇಜ್ರಿವಾಲ್‌ಗೆ ಸೋಲು
ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾಗೆ ಗೆಲುವು. 1800 ಮತಗಳಿಂದ ಗೆದ್ದ ಪರ್ವೇಶ್ ವರ್ಮಾ
ಕೇಜ್ರಿವಾಲ್ ಮದ್ಯದ ಕಡೆ ಹೆಚ್ಚು ಗಮನ ಕೊಟ್ಟಿದ್ರು: ಅಣ್ಣಾ ಹಜಾರೆ
ಕೇಜ್ರಿವಾಲ್ ಮದ್ಯದ ಕಡೆ ಹೆಚ್ಚು ಗಮನಹರಿಸಿದ್ದರು. ಅಲ್ಲದೆ ಹಣದ ಬಲ ಹೊಂದಿದ್ದರು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.
ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಸೋಲು
ಬಿಜೆಪಿ ಅಭ್ಯರ್ಥಿ ತರವಿಂದರ್ ಸಿಂಗ್ ಮಾರ್ವಾ ಅವರು ಜಂಗ್‌ಪುರದಿಂದ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಸೋಲಿಸಿದ್ದಾರೆ. ಈ ಚುನಾವಣೆಯಲ್ಲಿ ಸಿಖ್ ಸಮುದಾಯ ತರವಿಂದರ್ ಸಿಂಗ್ ಕೈ ಹಿಡಿದಿದ್ದರಿಂದ ಗೆದ್ದಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭ
ದೆಹಲಿ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಬರುವುದು ಖಚಿತವಾಗುತ್ತಿದ್ದಂತೆ ದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ.
ರಾಹುಲ್ ಗಾಂಧಿಯ ಸಂವಿಧಾನ ಸೋತಿದೆ, ಅಂಬೇಡ್ಕರ್ ಸಂವಿಧಾನ ಗೆದ್ದಿದೆ
“ರಾಹುಲ್ ಗಾಂಧಿ ಹೋದ ಕಡೆಯೆಲ್ಲ ಸಂವಿಧಾನ ಪುಸ್ತಕವನ್ನು ಪುಸ್ತಕವನ್ನು ಹಿಡಿದುಕೊಂಡು ಪ್ರಚಾರ ಮಾಡಿದ್ದಾರೆ. ರಾಹುಲ್ ಗಾಂಧಿಯ ಸಂವಿಧಾನಕ್ಕೆ ಜನ ಉತ್ತರ ನೀಡಿ ಅಂಬೇಡ್ಕರ್ ಸಂವಿಧಾನವನ್ನು ಗೆಲ್ಲಿಸಿದ್ದಾರೆ. ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಸ್ವಾತಂತ್ರ ಸಿಕ್ಕಿದ ಕೂಡಲೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆ ಮಾಡಬೇಕೆಂದು ಕರೆ ನೀಡಿದ್ದರು. ಆದರೆ ಕಾಂಗ್ರೆಸ್ ವಿಸರ್ಜನೆಯಾಗಿಲ್ಲ. ಈಗ ದೆಹಲಿಯ ಜನ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿದ್ದಾರೆ” – ಸಿಟಿ ರವಿ, ಪರಿಷತ್ ಸದಸ್ಯ
ಕಾಂಗ್ರೆಸ್ ಖಾತೆ ತೆರೆದಿಲ್ಲ. ಕ್ಯಾತೆ ತೆಗೆಯದೇ ಬಿಡಲ್ಲ
“ದೆಹಲಿಯಲ್ಲಿ ಕಾಂಗ್ರೆಸ್ ಖಾತೆ ತೆರೆದಿಲ್ಲ. ಆದರೆ ಕ್ಯಾತೆ ತೆಗೆಯದೇ ಬಿಡುವುದಿಲ್ಲ. ಕಾಂಗ್ರೆಸ್ ಇನ್ನು ಮುಂದೆ ಇವಿಎಂಗಳ ಮೇಲೆ ಮಾತಾಡೋದು ಬಿಡಬೇಕು. ರಾಹುಲ್ ಗಾಂಧಿ ನಿವೃತ್ತಿ ತೆಗೆದುಕೊಂಡರೆ ಎಲ್ಲವೂ ಚೆನ್ನಾಗಿ ಆಗುತ್ತದೆ. ದೆಹಲಿ ಫಲಿತಾಂಶ ನಮಗೆಲ್ಲ ಉತ್ಸಾಹ ತುಂಬಿದೆ” – ಛಲವಾದಿ ನಾರಾಯಣ ಸ್ವಾಮಿ, ಪರಿಷತ್ ವಿಪಕ್ಷ ನಾಯಕ
430 ಮತಗಳಿಂದ ಕೇಜ್ರಿವಾಲ್‌ಗೆ ಹಿನ್ನಡೆ
ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿ. ಬಿಜೆಪಿ ಪರ್ವೇಶ್ ವರ್ಮಾಗೆ ಅಲ್ಪ ಮುನ್ನಡೆ
ರಾಹುಲ್ ಗಾಂಧಿಯೇ ಕೇಜ್ರಿವಾಲರನ್ನು ಕಳ್ಳ ಕಳ್ಳ ಅಂತ ಕರೆದಿದ್ದರು
“INDIA ಒಕ್ಕೂಟವೇ ಸರಿಯಿಲ್ಲ. ರಾಹುಲ್ ಗಾಂಧಿಯೇ ಕಳ್ಳ ಕಳ್ಳ ಅಂತ ಕೇಜ್ರಿವಾಲ್‌ರನ್ನು ಕರೆದಿದ್ದರು . ಶಾಲು ಹಾಕಿಕೊಂಡು ಬಂದವರು ಶೇಷ ಮಹಲ್ ಕಟ್ಟಿಕೊಂಡಿದ್ದಾರೆ. ಯಮುನಾ ನದಿ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಸರ್ಕಾರ ನದಿ ಕ್ಲೀನ್ ಮಾಡದೇ ನದಿ ಮೇಲೆ ಆರೋಪ ಮಾಡಿದ್ದು ಸರಿಯಲ್ಲ. ಆಪ್ ಸರ್ಕಾರದ ಭ್ರಷ್ಟಾಚಾರಕ್ಕೆ ದೆಹಲಿ ಜನ ಪಾಠ ಕಲಿಸಿದ್ದಾರೆ” – ಆರ್ ಅಶೋಕ್, ವಿಪಕ್ಷ ನಾಯಕ
ದಕ್ಷಿಣ ದೆಹಲಿ ಕ್ಷೇತ್ರಗಳಲ್ಲಿ ಎಎಪಿಗೆ ಶಾಕ್
ದಕ್ಷಿಣ ದೆಹಲಿಯ 15 ಕ್ಷೇತ್ರಗಳಲ್ಲಿ 11 ರಲ್ಲಿ ಬಿಜೆಪಿ, 4 ಕ್ಷೇತ್ರಗಳಲ್ಲಿ ಎಎಪಿ ಮುನ್ನಡೆ ಸಾಧಿಸಿವೆ.
2020ರಲ್ಲಿ 15ರ ಪೈಕಿ 14 ಕ್ಷೇತ್ರಗಳಲ್ಲಿ ಎಎಪಿ ಗೆದ್ದಿತ್ತು.
ಕೇಜ್ರಿವಾಲ್, ಸಿಸೋಡಿಯಾಗೆ ಮತ್ತೆ ಹಿನ್ನಡೆ
6ನೇ ಸುತ್ತಿನ ಮತ ಎಣಿಕೆ ನಂತರ ಅರವಿಂದ್ ಕೇಜ್ರಿವಾಲ್ ಮತ್ತೆ ಹಿನ್ನಡೆ
ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ 225 ಮುನ್ನಡೆ
ಜಂಗ್‌ಪುರ ಕ್ಷೇತ್ರದಲ್ಲಿ ಮನೀಶ್ ಸಿಸೋಡಿಯಾ ಮತ್ತೆ ಹಿನ್ನಡೆ
ಓಖ್ಲಾದಿಂದ ಆಪ್ ಅಭ್ಯರ್ಥಿಗೆ ಮುನ್ನಡೆ
ಓಖ್ಲಾದಿಂದ ಆಪ್ ಅಭ್ಯರ್ಥಿ ಅಮಾನುತ್ ಉಲ್ಲಾ ಖಾನ್‌ಗೆ 4475 ಮತಗಳ ಮುನ್ನಡೆ
ಕೇಜ್ರಿವಾಲ್‌ಗೆ 225 ಮತಗಳ ಹಿನ್ನಡೆ
ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಮತ್ತೆ ಮುನ್ನಡೆಯಲ್ಲಿದ್ದಾರೆ. 2345 ಮತಗಳಿಂದ ಮನೀಶ್ ಸಿಸೋಡಿಯಾ ಮುಂದಿದ್ದಾರೆ.
ಶೂನ್ಯಕ್ಕೆ ಕುಸಿದ ಕಾಂಗ್ರೆಸ್
42 ಕ್ಷೇತ್ರಗಳಲ್ಲಿ ಮುಂದಿರುವ ಬಿಜೆಪಿ ಬಹುಮತ ಉಳಿಸಿಕೊಂಡಿದೆ. ಕಾಂಗ್ರೆಸ್ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ.
ಓಖ್ಲಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ (ಮುಸ್ಲಿಂ ಪ್ರಾಬಲ್ಯದ ಕ್ಷೇತ್ರ)
ಎರಡನೇ ಸುತ್ತಿನ ಎಣಿಕೆಯ ನಂತರದ ಅಂಕಿ ಅಂಶಗಳು:
ಮನೀಶ್ ಚೌಧರಿ (ಬಿಜೆಪಿ): 8,111
ಅಮಾನತುಲ್ಲಾ ಖಾನ್ (ಎಎಪಿ): 6,377
ಶಿಫಾ ಉರ್ ರೆಹಮಾನ್ (ಎಐಎಂಐಎಂ): 1,679
ಅರಿಬಾ ಖಾನ್ (ಐಎನ್ಸಿ): 1,240
ಬಿಜೆಪಿ 42, ಎಎಪಿ 27 ಕ್ಷೇತ್ರಗಳಲ್ಲಿ ಮುನ್ನಡೆ
ದೆಹಲಿಯ ಒಟ್ಟು 70 ಸ್ಥಾನಗಳ ಪೈಕಿ 42 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಎಎಪಿಗಿಂತ ಮುಂದಿದೆ ಎಂದು ಆರಂಭಿಕ ಅಧಿಕೃತ ಟ್ರೆಂಡ್ ತಿಳಿಸಿವೆ.
ಮುನ್ನಡೆಯಲ್ಲಿರುವ AAP ನಾಯಕರ ಪಟ್ಟಿ
ಬುರಾರಿ (ಕ್ಷೇತ್ರ) – ಸಂಜೀವ್ ಝಾ
ಬಾಬರ್ಪುರ್ – ಗೋಪಾಲ್ ರೈ
ತಿಮಾರ್ಪುರ್ – ಸುರಿಂದರ್ ಪಾಲ್ ಸಿಂಗ್ (ಬಿಟ್ಟೂ)
ಆದರ್ಶ ನಗರ – ಮುಖೇಶ್ ಕುಮಾರ್ ಗೋಯೆಲ್
ಕಿರಾರಿ – ಅನಿಲ್ ಝಾ
ಸುಲ್ತಾನ್ಪುರ್ ಮಜ್ರಾ – ಮುಖೇಶ್ ಕುಮಾರ್ ಅಹ್ಲಾವತ್
ರೋಹಿಣಿ – ಪರ್ದೀಪ್ ಮಿತ್ತಲ್
ವಜೀರ್ಪುರ್ – ರಾಜೇಶ್ ಗುಪ್ತಾ
ಸದರ್ ಬಜಾರ್ – ಸೋಮ್ ದತ್
ಚಾಂದಿನಿ ಚೌಕ್ – ಪುನರ್ದೀಪ್ ಸಿಂಗ್ ಸಾಹ್ನಿ (ಸಬ್ಬಿ)
ಮತಿಯಾ ಮಹಲ್ – ಆಲೆ ಮೊಹಮ್ಮದ್ ಇಕ್ಬಾಲ್
ಬಲ್ಲಿಮಾರನ್ – ಇಮ್ರಾನ್ ಹುಸೇನ್
ಕರೋಲ್ ಬಾಗ್ – ವಿಶೇಷ ರವಿ
ಪಟೇಲ್ ನಗರ – ಪ್ರವೇಶ್ ರತ್ನ
ತಿಲಕ್ ನಗರ – ಜರ್ನೈಲ್ ಸಿಂಗ್
ನವದೆಹಲಿ – ಅರವಿಂದ್ ಕೇಜ್ರಿವಾಲ್
ಮೆಹ್ರೌಲಿ – ಮಹೇಂದರ್ ಚೌಧರಿ
ಡಿಯೋಲಿ – ಪ್ರೇಮ್ ಚೌಹಾಣ್
ಅಂಬೇಡ್ಕರ್ ನಗರ – ಡಾ. ಅಜಯ್ ದತ್
ಸಂಗಮ್ ವಿಹಾರ್ – ದಿನೇಶ್ ಮೊಹಾನಿಯಾ
ಬದರ್ಪುರ್ – ರಾಮ್ ಸಿಂಗ್ ನೇತಾಜಿ
ತ್ರಿಲೋಕಪುರಿ – ಅಂಜನಾ ಪರ್ಚಾ
ಕೊಂಡ್ಲಿ – ಕುಲದೀಪ್ ಕುಮಾರ್ (ಮೋನು)
ಗಾಂಧಿ ನಗರ – ನವೀನ್ ಚೌಧರಿ (ದೀಪು)
ಸೀಮಾಪುರಿ – ವೀರ್ ಸಿಂಗ್ ದಿಂಗನ್
ಸೀಲಂ ಪುರ್ – ಚೌಧರಿ ಜುಬೈರ್ ಅಹ್ಮದ್
ಮುನ್ನಡೆ ಸಾಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ನೆರೆಲಾ (ಕ್ಷೇತ್ರ) – ರಾಜ್ ಕರಣ್ ಖತ್ರಿ
ಕರವಾಲ್ ನಗರ – ಕಪಿಲ್ ಮಿಶ್ರಾ
ರಿಥಾಲಾ – ಕುಲ್ವಂತ್ ರಾಣಾ
ಬವಾನಾ – ರವೀಂದರ್ ಇಂದ್ರಜ್ ಸಿಂಗ್
ಮುಂಡ್ಕಾ – ಗಜೇಂದರ್ ಡ್ರಾಲ್
ಮಂಗೋಲ್ ಪುರಿ – ರಾಜ್ ಕುಮಾರ್ ಚೌಹಾಣ್
ಶಾಲಿಮಾರ್ ಬಾಗ್ – ರೇಖಾ ಗುಪ್ತಾ
ಶಕುರ್ ಬಸ್ತಿ – ಕರ್ನೈಲ್ ಸಿಂಗ್
ತ್ರಿ ನಗರ – ತಿಲಕ್ ರಾಮ್ ಗುಪ್ತ
ಪಟೇಲ್ ನಗರ – ರಾಜ್ ಕುಮಾರ್ ಆನಂದ್
ಮದಿಪುರ – ಕೈಲಾಶ್ ಗಂಗ್ವಾಲ್
ರಾಜೌರಿ ಗಾರ್ಡನ್ – ಮಂಜಿಂದರ್ ಸಿಂಗ್ ಸಿರ್ಸಾ
ಹರಿ ನಗರ – ಶ್ಯಾಮ್ ಶರ್ಮಾ
ಉತ್ತಮ್ ನಗರ – ಪವನ್ ಶರ್ಮಾ
ದ್ವಾರಕಾ – ಪಾರ್ದುಮ್ನ್ ಸಿಂಗ್ ರಜಪೂತ್
ಮಟಿಯಾಲ – ಸಂದೀಪ್ ಸೆಹ್ರಾವತ್
ನಜಫ್ಗಢ್ – ನೀಲಂ ಪಹಲ್ವಾನ್
ಬಿಜ್ವಾಸನ್ – ಕೈಲಾಶ್ ಗಹ್ಲೋಟ್
ಪಾಲಂ – ಕುಲದೀಪ್ ಸೋಲಂಕಿ
ದೆಹಲಿ ಕ್ಯಾಂಟ್ – ಭುವನ್ ತನ್ವಾರ್
ರಾಜಿಂದರ್ ನಗರ – ಉಮಂಗ್ ಬಜಾಜ್
ಕಸ್ತೂರಬಾ ನಗರ – ನೀರಜ್ ಬಸೋಯ
ಆರ್.ಕೆ.ಪುರಂ – ಅನಿಲ್ ಕುಮಾರ್ ಶರ್ಮಾ
ಛತ್ತರ್ಪುರ್ – ಕರ್ತಾರ್ ಸಿಂಗ್ ತನ್ವಾರ್
ಸಂಗಮ್ ವಿಹಾರ್ – ಚಂದನ್ ಕುಮಾರ್ ಚೌಧರಿ
ಗ್ರೇಟರ್ ಕೈಲಾಶ್ – ಶಿಖಾ ರಾಯ್
ಕಲ್ಕಾಜಿ – ರಮೇಶ್ ಬಿಧುರಿ
ಓಖ್ಲಾ – ಮನೀಶ್ ಚೌಧರಿ
ಕೊಂಡ್ಲಿ – ಪ್ರಿಯಾಂಕಾ ಗೌತಮ್
ಪತ್ಪರ್ಗಂಜ್ – ರವೀಂದರ್ ಸಿಂಗ್ ನೇಗಿ (ರವಿ ನೇಗಿ)
ಲಕ್ಷ್ಮಿ ನಗರ – ಅಭಯ್ ವರ್ಮಾ
ವಿಶ್ವಾಸ್ ನಗರ – ಓಂ ಪ್ರಕಾಶ್ ಶರ್ಮಾ
ಶಹದಾರ – ಸಂಜಯ್ ಗೋಯಲ್
ಸೀಲಂ ಪುರ್ – ಅನಿಲ್ ಕುಮಾರ್ ಶರ್ಮಾ (ಗೌರ್)
ಘೋಂಡಾ – ಅಜಯ್ ಮಹಾವರ್
ಗೋಕಲ್ಪುರ್ – ಪ್ರವೀಣ್ ನಿಮೇಶ್
ಮುಸ್ತಫಾಬಾದ್ – ಮೋಹನ್ ಸಿಂಗ್ ಬಿಶ್ತ್
ದೆಹಲಿ ಸಿಎಂ ಅತಿಶಿಗೆ ಹಿನ್ನಡೆ
ಕೇಜ್ರಿವಾಲ್‌ಗೆ ಮುನ್ನಡೆ
ಸೌರಭ್ ಭಾರದ್ವಾಜ್ ಹಿನ್ನಡೆ. ಆರಂಭದಲ್ಲಿ ಮುನ್ನಡೆಯಲ್ಲಿದ್ದರು.
ಸಿಸೋಡಿಯಾ ಮತಗಳಲ್ಲಿ ಕೂಡಾ ಹೆಚ್ಚಳ
ಸಿಸೋಡಿಯಾ ಮುನ್ನಡೆ
ಮೊದಲ ಬಾರಿಗೆ ಕೇಜ್ರಿವಾಲ್‌ಗೆ ಮುನ್ನಡೆ
ನವದೆಹಲಿ ಕ್ಷೇತ್ರದಲ್ಲಿ ಕೇಜ್ರಿವಾಲ್‌ಗೆ 254 ಮತಗಳ ಮುನ್ನಡೆ
ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಕಮಲ ಕಿಲ ಕಿಲ
ದೆಹಲಿಯ ಮುಸ್ಲಿಂ ಬಾಹುಳ್ಯದ 12 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಕೇಜ್ರಿವಾಲ್‌ಗೆ 7000 ಮತಗಳ ಹಿನ್ನಡೆ
ಅತಿಶಿಗೆ 673 ಮತಗಳ ಹಿನ್ನಡೆ
ದೆಹಲಿಯಲ್ಲಿ ಮ್ಯಾಜಿಕ್ ನಂಬರ್ ತಲುಪಿದ ಬಿಜೆಪಿ
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ತಲುಪಿದೆ. ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ 41, ಆಪ್ 28, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿವೆ.
ಹಲವು ಕ್ಷೇತ್ರಗಳಲ್ಲಿ ಇವಿಎಂ ಎಣಿಕೆ ಶುರು
ಸೌರಭ್ ಭಾರದ್ವಾಜ್, ಸೋಮನಾಥ್ ಭಾರ್ತಿಗೆ ಮುನ್ನಡೆ ಸಿಕ್ಕಿದೆ.
ಬಹುಮತದತ್ತ ಬಿಜೆಪಿ ದಾಪುಗಾಲು
ದೆಹಲಿ ಚುನಾವಣೆ ಮತ ಎಣಿಕೆ ಈಗಿನ ಟ್ರೆಂಡ್ಸ್ ಪ್ರಕಾರ ಬಹುಮತದತ್ತ ದಾಪುಗಾಲಿಟ್ಟಿರುವ ಬಿಜೆಪಿ 36 ಕ್ಷೇತ್ರಗಳಲ್ಲಿ ಮುಂದಿದೆ. ಎಎಪಿ 27, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುಂದಿವೆ.
ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ
ಮುಸ್ಲಿಂ ಬಾಹುಯುಳ್ಳ ಓಖ್ಲಾ ಕ್ಷೇತ್ರದಲ್ಲಿ ಬಿಜೆಪಿ ಮುಂದಿದೆ. ಪಕ್ಷದ ಮನೀಶ್ ಚೌಧರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಆಪ್-ಬಿಜೆಪಿ ನಡುವೆ ಪೈಪೋಟಿ
ಅರ್ಧಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಆಪ್ ಬಿಜೆಪಿ ನಡುವೆ ನೇರಾ ನೇರ ಫೈಟ್
ಪ್ರತಿ ಹಂತದಲ್ಲಿ ಪೈಪೋಟಿ ನೀಡುತ್ತಿರುವ ಆಪ್-ಬಿಜೆಪಿ
ಬಹುಮತ ಸನಿಹಕ್ಕೆ ಬಿಜೆಪಿ
ದೆಹಲಿ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸನಿಹಕ್ಕೆ ಬಂದಿದೆ. ಟ್ರೆಂಡ್ಸ್ ಪ್ರಕಾರ ಬಿಜೆಪಿ 32, ಎಎಪಿ 24, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮುಂದಿವೆ.
ಕೇಜ್ರಿವಾಲ್‌ಗೆ ಶಾಕ್!
ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹಿನ್ನಡೆ ಅನುಭವಿಸಿದ್ದಾರೆ. ಬಿಜೆಪಿಯ ಪರ್ವೇಶ್ ವರ್ಮಾ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಬಿಜೆಪಿ ಮುನ್ನಡೆ, ಎಎಪಿಗೆ ಹಿನ್ನಡೆ
ದೆಹಲಿ ಚುನಾವಣೆ ಮತ ಎಣಿಕೆ ಟ್ರೆಂಡ್ ಪ್ರಕಾರ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 26, ಎಎಪಿ 8, ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಮುಂದಿವೆ.
ಆಪ್ ಪ್ರಮುಖ ನಾಯಕರಿಗೆ ಆರಂಭಿಕ ಹಿನ್ನಡೆ
ಕೇಜ್ರಿವಾಲ್, ಅತಿಶಿ, ಮನೀಶ್ ಸಿಸೋಡಿಯಾಗೆ ಹಿನ್ನಡೆ. ಸತ್ಯೇಂದ್ರ ಜೈನ್, ಪರ್ವೇಶ್ ಶರ್ಮಾ, ಕಪಿಲ್ ಮಿಶ್ರಾಗೆ ಮುನ್ನಡೆ.
ಕೇಜ್ರಿವಾಲ್, ದೆಹಲಿ ಸಿಎಂ ಅತಿಶಿಗೆ ಹಿನ್ನಡೆ
ದೆಹಲಿ ಚುನಾವಣೆಯಲ್ಲಿ ಎಎಪಿಗೆ ಆರಂಭಿಕ ಆಘಾತ ಎದುರಾಗಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ದೆಹಲಿ ಸಿಎಂ ಅತಿಶಿ ಹಿನ್ನಡೆ ಅನುಭವಿಸಿದ್ದಾರೆ.
ಬಿಜೆಪಿಗೆ ಆರಂಭಿಕ ಮುನ್ನಡೆ
ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ. ಬಿಜೆಪಿ-6, ಎಎಪಿ-3 ಮತ್ತು ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಮುಂದಿವೆ.
ಅಂಚೆ ಮತ ಎಣಿಕೆ ಶುರು
ಕೆಲವೇ ಕ್ಷಣಗಳಲ್ಲಿ ಮತೆ ಎಣಿಕೆ ಆರಂಭ
ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಎಎಪಿ ಇದ್ದರೆ, 27 ವರ್ಷಗಳ ಬಳಿಕ ದೆಹಲಿ ಗದ್ದುಗೆ ಏರುವ ತವಕದಲ್ಲಿ ಬಿಜೆಪಿ ಇದೆ. 70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 36 ಬೇಕಿದೆ.