ನವದೆಹಲಿ: 27 ವರ್ಷದ ಬಳಿಕ ದೆಹಲಿಯಲ್ಲಿ (Delhi Election) ಅರಳುತ್ತಾ ಬಿಜೆಪಿ? ಈ ಪ್ರಶ್ನೆಗೆ ಈಗಾಗಲೇ ಮತಗಟ್ಟೆ ಸಮೀಕ್ಷೆಗಳಲ್ಲಿ ಉತ್ತರ ಸಿಕ್ಕಿದೆ. ಆದರೆ ಮತದಾರರು ಬರೆದ ಅಧಿಕೃತ ಉತ್ತರ ಇಂದು ಪ್ರಕಟವಾಗಲಿದೆ.
ದೆಹಲಿ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು ಇಲ್ಲಿಯವರೆಗೆ ಪ್ರಕಟವಾದ 12 ಸಮೀಕ್ಷೆಗಳಲ್ಲಿ 10 ಸಮೀಕ್ಷೆಗಳು ಬಿಜೆಪಿ (BJP) ಗೆಲ್ಲಲಿದೆ ಎಂದು ಹೇಳಿದರೆ 2 ಸಮೀಕ್ಷೆಗಳು ಆಪ್ ಜಯಗಳಿಸಲಿದೆ ಎಂದು ತಿಳಿಸಿದೆ.
ಆಪ್ ಮತಗಳನ್ನು ಕಾಂಗ್ರೆಸ್ (Congress) ತನ್ನ ಬುಟ್ಟಿಗೆ ಹಾಕಿದ್ದರಿಂದ ದೆಹಲಿಯಲ್ಲಿ ಆಪ್ (AAP) ಹ್ಯಾಟ್ರಿಕ್ ಸಾಧನೆ ಭಗ್ನವಾಗಲಿದೆ. ದಲಿತರು, ಮುಸ್ಲಿಮರು ಕಾಂಗ್ರೆಸ್ ಬೆಂಬಲಿಸಿದ್ದು ಬಿಜೆಪಿ ವರವಾಗಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಅಬಕಾರಿ ಹಗರಣ, ಶೀಷ್‌ಮಹಲ್ ಬಂಗಲೆ ವಿವಾದ, ಕೇಜ್ರಿವಾಲ್, ಸಿಸೋಡಿಯಾ ಸೇರಿದಂತೆ ಸಚಿವರ ವಿರುದ್ಧ ಸಾಲು ಸಾಲು ಭ್ರಷ್ಟಾಚಾರ ಆರೋಪಗಳು ಆಪ್‌ಗೆ ಹಿನ್ನಡೆ ತರಬಹುದು ಎಂದು ವಿಶ್ಲೇಷಿಸಲಾಗಿದೆ.
ಒಟ್ಟು 70 ಕ್ಷೇತ್ರಗಳಿಗೆ 699 ಅಭ್ಯರ್ಥಿಗಳು ಕಣದಲ್ಲಿದ್ದು ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಸರಳ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿದೆ. ಇದನ್ನೂ ಓದಿ: ಬಿಜೆಪಿಯಿಂದ ಆಪ್ ಅಭ್ಯರ್ಥಿಗಳಿಗೆ 15 ಕೋಟಿ ಆಫರ್ – ಕೇಜ್ರಿವಾಲ್ ನಿವಾಸಕ್ಕೆ ಎಸಿಬಿ ಭೇಟಿ, ನೋಟಿಸ್
ಕಳೆದ 25 ವರ್ಷಗಳಿಂದ ಮರೀಚಿಕೆಯಾಗಿರುವ ಅಧಿಕಾರವನ್ನು ದಕ್ಕಿಸಿಕೊಳ್ಳಲು ಬಿಜೆಪಿ (BJP) ಸರ್ವ ಶಕ್ತಿಗಳನ್ನು ಪಣಕ್ಕೊಡಿದೆ. ದಶಕದಿಂದ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಹಿಂದೆಂದಿಗಿಂತಲೂ ಹೆಚ್ಚು ಉಚಿತ ಯೋಜನೆಗಳನ್ನು ಆಪ್ (AAP) ಘೋಷಿಸಿದೆ. ಒಂದಿಷ್ಟು ಸೀಟ್‌ಗಳನ್ನಾದರೂ ಗೆದ್ದು ಮಾನ ಉಳಿಸಿಕೊಳ್ಳಲು ಕಾಂಗ್ರೆಸ್ (Congress) ಸಹ ಭರವಸೆಗಳ ಮೇಲೆ ಭರವಸೆ ನೀಡಿದೆ.