ನವದೆಹಲಿ: ಆರ್ಮಿ ಮೇಜರ್ ಒಬ್ಬ ಮನೆಕೆಲಸ ಮಾಡುವ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಈಗ ಆರೋಪಿಯ ವಿರುದ್ಧ ಅತ್ಯಾಚಾರ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ ಇತ್ತ ಸಂತ್ರಸ್ತೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಸಂತ್ರಸ್ತೆ ದೂರು ನೀಡಿದ್ದು, ಜುಲೈ 12ರಂದು ಮೇಜರ್ ಗೌರವ್ ನನ್ನ ಪತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಂದು ತನ್ನ ರೂಮಿಗೆ ಹೋಗುವಂತೆ ಹೇಳಿದನು. ಆದರೆ ನಾನು ಅದನ್ನು ವಿರೋಧಿಸಿದೆ. ಆಗ ಮೇಜರ್ ನನ್ನ ಮೇಲೆ ಹಲ್ಲೆ ಮಾಡಿ ರೂಮಿನೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
Advertisement
Advertisement
ಪತಿ ಮನೆಗೆ ಹಿಂದಿರುಗಿ ಬಂದಾಗ ಈ ಬಗ್ಗೆ ನಾನು ಹೇಳಿದೆ. ನಂತರ ನನ್ನ ಪತಿ ಮೇಜರ್ ಬಳಿ ಮಾತನಾಡಲು ಹೋದಾಗ ಅವರ ಮೇಲೆ ಹಲ್ಲೆ ಮಾಡಿ ಬೆದರಿಕೆ ಒಡ್ಡಿದ್ದಾನೆ. ಅಷ್ಟೇ ಅಲ್ಲದೇ ಅನೇಕ ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಇದರಿಂದ ನಾನು ಪತಿಯ ತವರು ಮನೆಗೆ ಹೋಗಿದ್ದೆ. ನನ್ನ ಪತಿ ಮಾತ್ರ ಇಲ್ಲೆ ಉಳಿದುಕೊಂಡಿದ್ದರು. ಬಳಿಕ ಒಂದು ತಿಂಗಳು ನಂತರ ನನಗೆ ಕರೆ ಮಾಡಿ ನಿನ್ನ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದನು ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
ನನ್ನ ಪತಿ ಆತ್ಮಹತ್ಯೆ ಬಗ್ಗೆಯೂ ನನಗೆ ಸಂಶಯ ಇದೆ. ಮೇಜರ್ ಗೌರವ್ ಕೊಲೆ ಮಾಡಿ ನೇಣು ಹಾಕಿದ್ದಾನೆ. ಇಷ್ಟುದಿನ ನನ್ನ ಮತ್ತು ಮಗನ ಮೇಲಿನ ಜೀವ ಬೆದರಿಕೆಯಿಂದ ದೂರು ಕೊಡಲು ಭಯಪಡುತ್ತಿದ್ದೆ ಎಂದು ಮಹಿಳೆ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
Advertisement
ಮಹಿಳೆ ಮೇಜರ್ ವಿರುದ್ಧ ದೆಹಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ನೀಡಿದ ದೂರಿನ್ವಯ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 354 (ಕಿರುಕುಳ), 323 (ಹಾನಿ) ಮತ್ತು 506 (ಬೆದರಿಕೆ) ಅಡಿಯಲ್ಲಿ ಮೇಜರ್ ವಿರುದ್ಧ ದಾಖಲಿಸಲಾಗಿದೆ. ನಾವು ಆರೋಪಿಗೆ ಕರೆ ಮಾಡಿ ತನಿಖೆಗೆ ಸಹಕರಿಸುವಂತೆ ಹೇಳಿದ್ದೇವೆ. ಸದ್ಯಕ್ಕೆ ಈ ಸಂಬಂಧ ಯಾವುದೇ ಬಂಧನವಾಗಿಲ್ಲ ಎಂದು ಡಿಸಿಪಿ ದೇವೇಂದರ್ ಆರ್ಯ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv