ಪ್ರಿಯತಮೆಯರಿಗಾಗಿ ಕಳ್ಳತನಕ್ಕೆ ಕೈಹಾಕಿ ಸಿಕ್ಕಿಬಿದ್ದ ಡಾನ್ಸರ್..!

Public TV
1 Min Read
delhi police

ನವದೆಹಲಿ: ಪ್ರಿಯತಮೆಯರಿಗಾಗಿ ದೆಹಲಿಯ ಡ್ಯಾನ್ಸರ್ ಒಬ್ಬ ಆಟೋ ಚಾಲಕನಿಂದ ಹಣ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಗೋವಿಂದಪುರಿ ನಿವಾಸಿ ರೋಹನ್ ಗಿಲ್ಲಿ(21) ಅಲಿಯಾಸ್ ಸನ್ನಿ ಬಂಧಿತ ಡ್ಯಾನ್ಸರ್. ರಾಹುಲ್ ಹಣ ಕಳೆದುಕೊಂಡಿದ್ದ ಆಟೋ ಚಾಲಕ. ಹಣ ಕಿತ್ತುಕೊಂಡು ಪರಾರಿಯಾಗುತ್ತಿದ್ದಾಗಲೇ ರೋಹನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಗೋವಿಂದ ಪುರಿ ಆಟೋ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಾ ನಿಂತಿದ್ದೆ. ಈ ವೇಳೆ ನನ್ನ ಬಳಿಯಿದ್ದ ಹಣವನ್ನು ಎಣಿಕೆ ಮಾಡಿ, ಪರ್ಸ್ ನಲ್ಲಿ ಇಟ್ಟುಕೊಂಡಿದ್ದಾಗ ನನ್ನ ಬಳಿಗೆ ಬಂದಿದ್ದ ರೋಹನ್, ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದನು ಎಂದು ರಾಹುಲ್ ದೂರಿದ್ದಾನೆ.

delhi Crime

ಹಣ ಕಿತ್ತುಕೊಂಡು ಓಡುತ್ತಿದ್ದಂತೆ ರಾಹುಲ್ ಕಿರುಚಲು ಪ್ರಾರಂಭಿಸಿದ್ದಾನೆ. ಬಳಿಕ ರೋಹನ್‍ನ ಹಿಂದೆ ಓಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು, ರೋಹನ್‍ನನ್ನು ಹಿಡಿದು ವಿಚಾರಿಸಿದಾಗ ಕಳ್ಳತನ ಬಯಲಿಗೆ ಬಂದಿದೆ. ಬಳಿಕ ಆರೋಪಿಯನ್ನು ಬಂಧಿಸಿ ದೆಹಲಿಯ ಆಗ್ನೇಯ ಪೊಲೀಸ್ ಠಾಣೆಗೆ ತರಲಾಗಿತ್ತು. ರೋಹನ್‍ನನ್ನು ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿದಾಗ, ಆತನಿಗೆ ಮೂವರು ಪ್ರಿಯತಮೆಯರಿದ್ದು, ಅವರಿಗಾಗಿ ತಾನು ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರೋಹನ್‍ನಿಂದ 1,900 ರೂಪಾಯಿ ಇದ್ದ ಪರ್ಸ್, ಒಂದು ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೋಹನ್ ನನ್ನು 2017 ಡಿಸೆಂಬರ್ ನಿಂದ ಇಲ್ಲಿಯವರೆಗೆ ಒಟ್ಟು ನಾಲ್ಕು ಬಾರಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *