ದೆಹಲಿ ಸಿಎಂ ಅತಿಶಿಗೆ ರಿಲೀಫ್ – ಬಿಜೆಪಿಯ ಮಾನನಷ್ಟ ಕೇಸ್ ವಜಾಗೊಳಿಸಿದ ಕೋರ್ಟ್

Public TV
1 Min Read
ATISHI 1

ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಮುಖ್ಯಮಂತ್ರಿ ಅತಿಶಿ ಮರ್ಲೇನಾ (Atishi) ಅವರಿಗೆ ಜಾರಿ ಮಾಡಲಾದ ಸಮನ್ಸ್ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಪುರಸ್ಕರಿಸಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಹೊರಡಿಸಿದ ಸಮನ್ಸ್ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ನ್ಯಾಯಾಧೀಶ ವಿಶಾಲ್ ಗೋಗ್ನೆ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಕೂಡ ಗಂಗಾ ಸ್ನಾನ ಮಾಡಬೇಕಾಗುತ್ತೆ – ಯೋಗಿ ಆದಿತ್ಯನಾಥ್‌

COURT

ಎಎಪಿ ನಾಯಕರ ಹೇಳಿಕೆಯು ಸಂಘಟನೆಯ ಯಾವುದೇ ಒಬ್ಬ ಸದಸ್ಯರ ವಿರುದ್ಧ ಇಲ್ಲ. ಒಟ್ಟಾರೆಯಾಗಿ ವಿರೋಧ ಪಕ್ಷದ ವಿರುದ್ಧವಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ರಾಜಕೀಯ ಮಾನನಷ್ಟ ಮೊಕದ್ದಮೆಯಲ್ಲಿ ಸಾಕ್ಷ್ಯಾಧಾರದ ಮಿತಿ ಯಾವಾಗಲೂ ಹೆಚ್ಚಾಗಿರುತ್ತದೆ. ಏಕೆಂದರೆ ಅದು ವಾಕ್ ಸ್ವಾತಂತ್ರ್ಯವನ್ನು ಒಳಗೊಂಡಿರುತ್ತದೆ. ಆದ್ದರಿಂದ, ಸಮನ್ಸ್‌ನಲ್ಲಿ ಗಣನೀಯ ದೋಷ ಮತ್ತು ದೌರ್ಬಲ್ಯ ಇರುವುದರಿಂದ ಅದನ್ನು ರದ್ದುಗೊಳಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಇದನ್ನೂ ಓದಿ: Maha Kumbhamela | ಜ.29 ರಂದು 10 ಕೋಟಿ ಜನರಿಂದ ಅಮೃತ ಸ್ನಾನ – ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳ ಓಡಾಟ

ಕಳೆದ ವರ್ಷ ಏಪ್ರಿಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಪುಟದಲ್ಲಿ ಸಚಿವರಾಗಿದ್ದಾಗ ಅತಿಶಿ, ‘ಬಿಜೆಪಿಗೆ ಸಂಬಂಧಿಸಿದ ನಾಯಕರು ನನ್ನ ಮತ್ತು ಇತರ ಎಎಪಿ ನಾಯಕರನ್ನು ಸಂಪರ್ಕಿಸಿ, ಪಕ್ಷಕ್ಕೆ ಸೇರಬೇಕೆಂದು ಒತ್ತಾಯಿಸಿದ್ದರು. ಇಲ್ಲದಿದ್ದರೆ ಒಂದು ತಿಂಗಳೊಳಗೆ ಜಾರಿ ನಿರ್ದೇಶನಾಲಯದಿಂದ ಬಂಧನ ಎದುರಿಸಬೇಕಾಗುತ್ತದೆ ಎಂದಿದ್ದರೆಂದು ಆರೋಪಿಸಿದ್ದರು.

Share This Article