ನವದೆಹಲಿ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯ ಗೋವಿಂದಪುರಿಯಲ್ಲಿ ನಡೆದಿದೆ.
30 ವರ್ಷದ ಮೋಹಿತ್ ಬಗ್ಗಾ ಹಾಗೂ 28 ವರ್ಷದ ಅರ್ಪಿತಾ ಬಗ್ಗಾ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕೆಲವು ವರ್ಷಗಳ ಹಿಂದಷ್ಟೆ ಇವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಗೋವಿಂದಪುರಿಯಲ್ಲಿರುವ ಫ್ಲಾಟ್ ನಲ್ಲಿ ಇಂದು ಈ ವಿವಾಹಿತ ಜೋಡಿ ಶವವಾಗಿ ಪತ್ತೆಯಾಗಿದ್ದಾರೆ.
Advertisement
ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ಪೊಲೀಸರ ಶಂಕೆ. ಆತ್ಮಹತ್ಯೆಗೂ ಮುನ್ನ ಅರ್ಪಿತಾ ತನ್ನ ಅತ್ತೆಗೆ ಮೆಸೇಜ್ ಕೂಡ ಮಾಡಿದ್ದರು. ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಮೆಸೇಜ್ ನಲ್ಲಿ ಬರೆದಿದ್ದಾರೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದನ್ನು ಮೆಸೇಜ್ ನಲ್ಲಿ ಉಲ್ಲೇಖ ಮಾಡಿಲ್ಲ ಎಂದು ಡಿಸಿಪಿ ಚಿನ್ಮೋಯ್ ಬಿಸ್ವಾಲ್ ಹೇಳಿದ್ದಾರೆ.
Advertisement
Advertisement
ಇಂದು ಬೆಳಗಿನ ಜಾವ 4.45ಕ್ಕೆ ಅರ್ಪಿತಾ ತನ್ನ ಅತ್ತೆಗೆ ಮೆಸೇಜ್ ಕಳಿಸಿದ್ದರು. ಆದರೆ ಕೆಲವು ಗಂಟೆಗಳ ಬಳಿಕ ಆಕೆ ಮೆಸೇಜ್ ನೋಡಿದ್ದಾರೆ. ಕೂಡಲೇ ಅವರ ಫ್ಲಾಟ್ ಸಮೀಪದ ದಂಪತಿಗೆ ತಿಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದಂಪತಿಯ ಮನೆಗೆ ಹೋಗಿ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆದರೆ ಅರ್ಪಿತಾಳ ಶವ ನೆಲದ ಮೇಲೆ ಬಿದ್ದಿದ್ದು, ಮೋಹಿತ್ ಶವ ಸೀಲಿಂಗ್ ಫ್ಯಾನ್ ನಲ್ಲಿ ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
Advertisement
ಅರ್ಪಿತಾ ದೇಹದ ಪಕ್ಕ ದುಪ್ಪಟ್ಟ ಬಿದ್ದಿದ್ದರಿಂದ, ಅಷ್ಟೆ ಅಲ್ಲದೇ ಆಕೆಯ ಗುತ್ತಿಗೆಯ ಸುತ್ತ ಗುರುತುಗಳಿದ್ದು, ಇಬ್ಬರೂ ಒಟ್ಟಿಗೆ ನೇಣು ಹಾಕಿಕೊಂಡಿದ್ದು, ಅರ್ಪಿತಾ ಶವ ನೆಲಕ್ಕೆ ಬಿದ್ದಿರಬಹುದೆಂದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಆಕೆಯ ದೇಹ ನೆಲದ ಮೇಲೆ ಬಿದ್ದಿದ್ದರಿಂದ ಕೊಲೆ ಎಂದು ಅನುಮಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಮೇಲೆ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿಯುತ್ತದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಅರ್ಪಿತಾ ಗೃಹಿಣಿ, ಮೋಹಿತ್ ಮೂರು ತಿಂಗಳುಗಳಿಂದ ಸ್ಪೋರ್ಟ್ಸ್ ಇವೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷವನ್ನು ನ್ಯೂಜಿಲೆಂಡ್ ನಲ್ಲಿ ಕೋರ್ಸ್ ಮಾಡಲು ಕಳೆದಿದ್ದರು. ಇಬ್ಬರು ಪೋಷಕರ ಒಪ್ಪಿಗೆ ಮೇರೆಗೆ ವಿವಾಹ ಮಾಡಿಕೊಂಡಿದ್ದರು. ಮೋಹಿತ್ ಅವರ ತಂದೆ ದಕ್ಷಿಣ ದೆಹಲಿಯ ಮೂಲದ ಆಭರಣದ ಕೆಲಸ ಮಾಡುತ್ತಿದ್ದಾರೆ. ಅರ್ಪಿತಾ ಪೋಷಕರು ಬನಾರಸ್ ನಲ್ಲಿ ವಾಸಿಸುತ್ತಿದ್ದರು. ಈ ದಂಪತಿಗೆ ಮಕ್ಕಳು ಇರಲಿಲ್ಲ ಎಂದು ಪೊಲೀಸ್ ಹೇಳಿದರು.
ಅರ್ಪಿತಾ-ಮೋಹಿತ್ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿರಲಿಲ್ಲ, ಜೊತೆಗೆ ಆರ್ಥಿಕ ಸಮಸ್ಯೆಯೂ ಇರಲಿಲ್ಲ. ಹಾಗಾಗಿ ಈ ಆತ್ಮಹತ್ಯೆಗೆ ಕಾರಣ ಏನು ಅನ್ನೋದು ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.