ನವದೆಹಲಿ: ದೆಹಲಿ ಪೊಲೀಸರು (Delhi Police), ಜಾರ್ಖಂಡ್ ಭಯೋತ್ಪಾದನಾ ನಿಗ್ರಹ ದಳ (Jharkhand ATS) ಹಾಗೂ ರಾಂಚಿ ಪೊಲೀಸರು (Ranchi Police) ಜಂಟಿ ಕಾರ್ಯಾಚರಣೆ ನಡೆಸಿದ್ದು, ಇಬ್ಬರು ಶಂಕಿತ ಐಸಿಸ್ ಉಗ್ರರನ್ನು (Suspected ISIS Terrorists) ಬಂಧಿಸಿದ್ದಾರೆ.
ಬೊಕಾರೊ ಮೂಲದ ಆಶರ್ ಡ್ಯಾನಿಶ್ ಎಂದು ಗುರುತಿಸಲಾದ ಪ್ರಮುಖ ಆರೋಪಿಯನ್ನು ರಾಂಚಿಯಲ್ಲಿ ಬಂಧಿಸಲಾಗಿದೆ. ಐಸಿಸ್-ಸಂಬಂಧಿತ ಮಾಡ್ಯೂಲ್‌ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಘಟಕವು ಆಶರ್ ಡ್ಯಾನಿಶ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿತ್ತು. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು – ಬಿಜೆಪಿ ನಿಯೋಗದಿಂದ ಸರ್ವೇ ಕಾರ್ಯ
ಏಕಕಾಲದಲ್ಲಿ ನಡೆಸಿದ ಸಂಘಟಿತ ದಾಳಿಯಲ್ಲಿ ಅಫ್ತಾಬ್ ಎಂಬ ಮತ್ತೊಬ್ಬ ಶಂಕಿತ ಐಸಿಸ್ ಉಗ್ರನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಬಂಧಿತರು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರು. ಅಲ್ಲದೇ ಭಾರತದಲ್ಲಿ ಭ ಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಬಳಿಕ ಇಂಡಿಯಾ, ಪಾಕಿಸ್ತಾನ ಮ್ಯಾಚ್ ಬೇಕಿತ್ತಾ? – ಸಂತೋಷ್ ಲಾಡ್