ನವದೆಹಲಿ: 3 ಅಥವಾ ಅದಕ್ಕಿಂತ ಹೆಚ್ಚು ತಿಂಗಳ ಗರ್ಭಿಣಿಯಾಗಿರುವ ಮಹಿಳೆಯನ್ನು ಸೇವೆಗೆ ಸೇರಲು ಅಸಮರ್ಥರೆಂಬ ಹೊಸ ನೇಮಕಾತಿ ಮಾರ್ಗಸೂಚಿಗಳನ್ನು ಹಿಂಪಡೆಯುವಂತೆ ಇಂಡಿಯನ್ ಬ್ಯಾಂಕ್‍ಗೆ ದೆಹಲಿ ಮಹಿಳಾ ಆಯೋಗವು ನೋಟಿಸ್ ನೀಡಿದೆ.
3 ತಿಂಗಳಿಗಿಂತ ಹೆಚ್ಚು ಗರ್ಭಿಣಿಯರಾಗಿರುವ ಮಹಿಳಾ ಅಭ್ಯರ್ಥಿಯನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಪರಿಗಣಿಸಲಾಗುತ್ತದೆ. ಆದರೆ ಅವರು ಹೆರಿಗೆಯ ನಂತರ 4 ತಿಂಗಳೊಳಗೆ ಬ್ಯಾಂಕ್‍ಗೆ ಸೇರಬಹುದು ಎಂಬ ಬ್ಯಾಂಕ್‍ನ ಹೊಸ ನಿಯಮಕ್ಕೆ ವಿವಿಧ ವಲಯಗಳಿಂದ ಟೀಕೆಗಳು ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಈ ನಿಯಮವನ್ನು ವಿರೋಧಿಸಿ ಬ್ಯಾಂಕ್‍ಗೆ ಮಹಿಳಾ ಆಯೋಗವು ನೋಟಿಸ್ ನೀಡಿದೆ.
Advertisement
Advertisement
ಇಂಡಿಯನ್ ಬ್ಯಾಂಕ್‍ನ ಈ ಕ್ರಮವು ಸಾಮಾಜಿಕ ಭದ್ರತೆ ಸಂಹಿತೆ, 2020 ಅಡಿಯಲ್ಲಿ ಒದಗಿಸಲಾದ ಹೆರಿಗೆ ಪ್ರಯೋಜನಗಳಿಗೆ ವಿರುದ್ಧಗಿದೆ. ಈ ಹಿನ್ನೆಲೆಯಲ್ಲಿ ತಾರತಮ್ಯ ಮತ್ತು ಕಾನೂನುಬಾಹಿರ ಸೂಚನೆಯಲ್ಲಿ ನೋಟಿಸ್ ನೀಡಿದೆ. ಅಷ್ಟೇ ಅಲ್ಲದೇ, ಇದು ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದು, ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡಿದಂತಾಗುತ್ತದೆ ಎಂದು ಕಿಡಿಕಾರಿದೆ. ಇದನ್ನೂ ಓದಿ: ನನ್ನ ಜೀವಕ್ಕೆ ಅಪಾಯವಿದೆ, 4 ವಾರ ಕಾಲಾವಕಾಶ ನೀಡಿ: ಪೊಲೀಸರಿಗೆ ನೂಪುರ್ ಮೇಲ್
Advertisement
ಹುದ್ದೆಗೆ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನು ವಿತರಿಸಿದ 6 ವಾರಗಳ ನಂತರ ಮರು-ಪರೀಕ್ಷೆ ಮಾಡಲಾಗುತ್ತದೆ. 12 ವಾರಗಳಲ್ಲಿ ಆ ಮಹಿಳೆಯು ಗರ್ಭಿಣಿ ಎಂದು ಕಂಡುಬಂದರೆ ಅವರನ್ನು ತಾತ್ಕಾಲಿಕವಾಗಿ ಅನರ್ಹ ಎಂದು ಘೋಷಿಸಬೇಕು ಎಂದು ಇಂಡಿಯನ್ ಬ್ಯಾಂಕ್ ಇತ್ತೀಚೆಗೆ ತಿಳಿಸಿತ್ತು. ಇದನ್ನೂ ಓದಿ: ಬಿಜೆಪಿ ಕಚೇರಿಯ ಬಾಗಿಲು ಕಾಯಲು ಯುವಕರು ಸೈನ್ಯ ಸೇರಬೇಕೆ?: ದಿನೇಶ್ ಗುಂಡೂರಾವ್