ನವದೆಹಲಿ: ದೆಹಲಿ ಸಿಎಂ ಅತಿಶಿ (CM Atishi) ಇಂದು (ಅ.14) ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಭೇಟಿ ಮಾಡಿದ್ದಾರೆ.
ಸೋಮವಾರ ಸಿಎಂ ಅತಿಶಿ ಪ್ರಧಾನಿಯನ್ನು ಭೇಟಿಯಾಗಿ ರಾಷ್ಟ್ರ ರಾಜಧಾನಿಯ ಅಭಿವೃದ್ಧಿಯ ಕುರಿತು ಚರ್ಚಿಸಿ, ಕೇಂದ್ರದ ಸಂಪೂರ್ಣ ಸಹಕಾರ ಕೋರಿದರು.ಇದನ್ನೂ ಓದಿ:ದರ್ಶನ್, ಪವಿತ್ರಾಗೆ ಜೈಲೇಗತಿ – ಜಾಮೀನು ಅರ್ಜಿ ವಜಾ
ಪ್ರಧಾನಿ ಮೋದಿಯವರ ಭೇಟಿಯ ಕುರಿತು ದೆಹಲಿ ಸಿಎಂ ಅತಿಶಿ ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ಇಂದು ನರೇಂದ್ರ ಮೋದಿಜಿಯವರನ್ನು ಭೇಟಿಯಾಗಿದ್ದೆ. ರಾಷ್ಟ್ರ ರಾಜಧಾನಿಯ ಕಲ್ಯಾಣ ಮತ್ತು ಪ್ರಗತಿಗಾಗಿ ಕೇಂದ್ರ ಸರ್ಕಾರತದ ಸಂಪೂರ್ಣ ಸಹಕಾರದ ನಿರೀಕ್ಷೆಯಿದ್ದು, ದೊರೆಯುತ್ತದೆ ಎಂದು ಭಾವಿಸುತ್ತೇನೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
Called on Hon’ble Prime Minister @narendramodi ji today. I look forward to full cooperation between the Centre and the Delhi government for the welfare and progress of our capital. https://t.co/eNzGsQQSHw
— Atishi (@AtishiAAP) October 14, 2024
ದೆಹಲಿ ಅಬಕಾರಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಜೈಲುವಾಸ ಅನುಭವಿಸಿದ್ದರು. ಬಿಡುಗಡೆಯ ನಂತರ ಕೇಜ್ರಿವಾಲ್ ರಾಜೀನಾಮೆ ಘೋಷಿಸಿದ್ದರು. ಬಳಿಕ ಸೆಪ್ಟೆಂಬರ್‌ನಲ್ಲಿ ಅತಿಶಿ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸುಷ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ನಂತರ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಅತಿಶಿ ಅಧಿಕಾರ ಸ್ವೀಕರಿಸಿದ್ದಾರೆ.ಇದನ್ನೂ ಓದಿ:ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ – ಮೂವರು ಆರೋಪಿಗಳಿಗೆ ಜಾಮೀನು