ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ತಮ್ಮ ಪತ್ನಿ ಸುನೀತಾ ಮತ್ತು ಪಕ್ಷದ ನಾಯಕರೊಂದಿಗೆ ತಿಹಾರ್ ಜೈಲಿನತ್ತ ಹೊರಟಿದ್ದಾರೆ.
ಮನೆಯಿಂದ ಹೊರಡಕ್ಕೂ ಮುನ್ನ ಕೇಜ್ರಿವಾಲ್ ಅವರು ತಮ್ಮ ತಂದೆ-ತಾಯಿಯ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಪತ್ನಿ ಸುನೀತಾ ಕೇಜ್ರಿವಾಲ್, ದೆಹಲಿ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್, ಕೈಲಾಶ್ ಗಹ್ಲೋಟ್ ಮತ್ತು ಇತರ ಎಎಪಿ ನಾಯಕರ ಜೊತೆ ಕೇಜ್ರಿವಾಲ್ ಅವರು ರಾಜ್‌ಘಾಟ್‌ಗೆ ತೆರಳಿದ್ದಾರೆ. ಅಲ್ಲಿ ಮಹಾತ್ಮ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
Advertisement
Advertisement
ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಇಡಿಯು ದೆಹಲಿ ಮುಖ್ಯಮಂತ್ರಿಯನ್ನು ವಿಚಾರಣೆ ನಡೆಸುತ್ತಿದೆ. ಮೇ 10 ರಂದು ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿತ್ತು. ಈ ಜಾಮೀನು ಅವಧಿ ಇಂದಿಗೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರು ತಿಹಾರ್ ಜೈಲಿಗೆ ಇಂದು ಶರಣಾಗಲಿದ್ದಾರೆ.
Advertisement
#WATCH | Delhi CM and AAP national convener Arvind Kejriwal, his wife Sunita Kejriwal, Delhi ministers Atishi, Saurabh Bharadwaj, Kailash Gahlot and other AAP leaders leave from Rajghat.
Arvind Kejriwal will surrender at the Tihar Jail later today at the end of his interim… pic.twitter.com/MjfLxqtr5d
— ANI (@ANI) June 2, 2024
Advertisement
ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಆರೋಪಿಯಾಗಿದ್ದಾರೆ. ಅವರನ್ನು ವಿಚಾರಣೆಗಾಗಿ ಮಾತ್ರ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಇದನ್ನೂ ಓದಿ: Sikkim Assembly Election Results: 2ನೇ ಬಾರಿಗೆ ಅಧಿಕಾರಕ್ಕೇರಿದ ಎಸ್‌ಕೆಎಂ