ದೆಹಲಿ ಮಹಾನಗರ ಪಾಲಿಕೆ ಮತ ಎಣಿಕೆ ಆರಂಭ – ಗೆಲುವಿನ ಭರವಸೆಯಲ್ಲಿ ಆಪ್

Public TV
1 Min Read
Delhi MCD Election Result

ದೆಹಲಿ: ಮುನ್ಸಿಪಲ್ ಕಾರ್ಪೊರೇಶನ್‍ನ ಚುನಾವಣೆಯ (Delhi MCD Election) ಫಲಿತಾಂಶ (Result) ಇಂದು ಪ್ರಕಟಗೊಳ್ಳಲಿದೆ. ಕಳೆದ ಭಾನುವಾರ 250 ವಾರ್ಡ್‍ಗಳಿಗೆ ಚುನಾವಣೆ ನಡೆದಿತ್ತು. ಇಂದು 42 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

Delhi MCD Election Result 1

ಮತ ಎಣಿಕೆಗಾಗಿ ಸಕಲ ಸಿದ್ಧತೆಗಳು ನಡೆದಿವೆ. 56,000 ಇವಿಎಂಗಳಲ್ಲಿನ (EVM) ಮತ ಎಣಿಕೆ ಕಾರ್ಯ ಆರಂಭಗೊಂಡಿದೆ. 1,249 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮೊದಲ ಅಂಚೆ ಮತ ಪತ್ರಗಳ ಎಣಿಕೆ ನಡೆಯುತ್ತಿದ್ದು, ಬಳಿಕ ಇವಿಎಂ ಮತ ಎಣಿಕೆ ನಡೆಯಲಿದೆ. ಈಗಾಗಲೇ ಚುನಾವಣಾ ಸಮೀಕ್ಷೆಗಳು ಪ್ರಕಟಗೊಂಡಿದ್ದು ಹದಿನೈದು ವರ್ಷಗಳ ಬಿಜೆಪಿ (BJP) ಆಡಳಿತ ಅಂತ್ಯವಾಗಲಿದ್ದು ಪಾಲಿಕೆಯಲ್ಲಿ ಆಪ್ (AAP) ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ. ಇದನ್ನೂ ಓದಿ: ನಾರಾಯಣಗೌಡ ಬಣದ 12 ಮಂದಿ ಕರವೇ ಕಾರ್ಯಕರ್ತರ ವಿರುದ್ಧ ಎಫ್‍ಐಆರ್

AAP

ಇಂಡಿಯಾ ಟುಡೆ ಸಮೀಕ್ಷೆಯ ಪ್ರಕಾರ 250 ಸ್ಥಾನಗಳಲ್ಲಿ ಬಿಜೆಪಿ 69-91, ಎಎಪಿ 149-171, ಕಾಂಗ್ರೆಸ್ 3-7, ಇತರೆ 5-9 ಪಡೆಯಲಿದೆ. ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಎಎಪಿ 146-156, ಬಿಜೆಪಿ 84 -94, ಕಾಂಗ್ರೆಸ್ 6-10 ಇತರೆ 4 ಸ್ಥಾನಗಳನ್ನು ಪಡೆಯಲಿದ್ದಾರೆ. ಚುನಾವಣೆ ಗೆಲುವಿನ ಉತ್ಸಾದಲ್ಲಿರುವ ಆಪ್ ನಾಯಕರು ಇನ್ನು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲ್ಲಿದ್ದೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಗನ ಹತ್ಯೆಗೆ ತಂದೆಯಿಂದ್ಲೇ 10 ಲಕ್ಷ ಸುಪಾರಿ- ವಾಟ್ಸಪ್ ಫೋಟೋದಿಂದ ತಗ್ಲಾಕ್ಕೊಂಡ ಅಪ್ಪ

ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್‍ಗಳಿಗೆ ಡಿ.4 ರಂದು ಮತದಾನ ನಡೆದಿತ್ತು. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ, ಆಮ್ ಆದ್ಮಿ ಹಾಗೂ ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆಗೆ ಏರ್ಪಟ್ಟಿದೆ. ಈ ಪೈಕಿ ಯಾರಿಗೆ ಮತದಾರ ಪ್ರಭುಗಳು ಮಣೆ ಹಾಕಿದ್ದಾರೆ ಎಂಬುದು ಇಂದು ಸಂಜೆಯೊಳಗೆ ಸ್ಪಷ್ಟವಾಗಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *