ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಾಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನೋಬಾಲ್ ಕೇಳುವಂತೆ ಒತ್ತಾಯಿಸಿ ಬ್ಯಾಟರ್‌ಗಳನ್ನು ಕರೆಯಲು ಕರೆದು ಹೈಡ್ರಾಮ ಮಾಡಿದ ಡೆಲ್ಲಿ ತಂಡದ ನಾಯಕ ರಿಷಭ್‌ಪಂತ್‌ಗೆ ಐಪಿಎಲ್ ಮಂಡಳಿ ದಂಡದ ವಿಧಿಸುವ ಮೂಲಕ ಪಂಚ್‌ಕೊಟ್ಟಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ತಮ್ಮ ತಂಡದ ಪಂದ್ಯದ ವೇಳೆ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್‌ಪಂತ್ ಅವರಿಗೆ ಪಂದ್ಯದ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Advertisement
Watched the match live in stadium!!!!
Crowd goes absolute bonkers over “no ball” and chanted “cheater cheater” in Wankhede!!
The clip of Rishabh Pant post match anger with Umpires#DCvsRR #cheater #RishabhPant #IPL2022 #ipl #noball #RR #wankhede #HallaBol #bcci # pic.twitter.com/RcrBlxVgxE
— Aman Jain (@amanj0104) April 22, 2022
Advertisement
IPL ನೀತಿ ಸಂಹಿತೆಯ ನಿಯಮ 2.7 ಅಡಿಯಲ್ಲಿ 2ನೇ ಹಂತದ ಅಪರಾಧಕ್ಕೆ ಪಂತ್ ಗುರಿಯಾಗಿದ್ದಾರೆ. ಆದ್ದರಿಂದ ಪಂತ್‌ಗೆ ಶೇ.100ರಷ್ಟು ದಂಡಶುಲ್ಕ ವಿಧಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೂ ಪಂದ್ಯದ ಶುಲ್ಕದ ಶೇ.50ರಷ್ಟು ದಂಡ ವಿಧಿಸಲಾಗಿದೆ. ಇನ್ನೂ ಪಂದ್ಯದ ವೇಳೆ ಅಂಗಳಕ್ಕೆ ಇಳಿದು 3ನೇ ಅಂಪೈರ್‌ಗೆ ಮನವಿ ಮಾಡುವಂತೆ ಒತ್ತಾಯಿಸಿದಕ್ಕಾಗಿ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರಿಗೂ 2.2ರ ನಿಯಮದ ಪ್ರಕಾರ ಶೇ.100 ದಂಡ ವಿಧಿಸುವ ಜೊತೆಗೆ ಮುಂದಿನ ಒಂದು ಪಂದ್ಯದಲ್ಲಿ ಸಹಾಯ ಕೋಚ್ ಆಗಿ ನಿರ್ವಹಿಸುವುದನ್ನು ಬ್ಯಾನ್ ಮಾಡಿದೆ.
Advertisement
Advertisement
ಏನಿದು ಆರ್ಟಿಕಲ್ 2.7, 2.2 ನಿಯಮ?: ಐಪಿಎಲ್ ನಿಯಮದ ಪ್ರಕಾರ ಪಂದ್ಯದ ಅವಧಿ ಮುಗಿಯುವವೆರೆಗೆ ಯಾವುದೇ ನಿರ್ಧಾರಗಳನ್ನು ಕ್ರೀಸ್‌ನಲ್ಲಿರುವವರೇ ಬಗೆಹರಿಸಿಕೊಳ್ಳಬೇಕು. ಅಂಪೈರ್ ತೀರ್ಪು ಪರಿಶೀಲನೆ ಮಾಡುವುದಿದ್ದರೂ ಬ್ಯಾಟರ್‌ಗಳೇ ಮನವಿ ಮಾಡಬೇಕು. ಒಂದು ವೇಳೆ ಪಂದ್ಯ ನಡೆಯುವ ವೇಳೆ ಉಳಿದವರು ಅಪೀಲ್ ಮಾಡುವಂತೆ ಒತ್ತಾಯಿಸುವುದು, ಅವರನ್ನು ಹೊರಬರುವಂತೆ ಸೂಚನೆ ನೀಡುವುದು ಅವರ ಪರವಾಗಿ ಅಪೀಲ್ ಮಾಡಲು ಕ್ರೀಡಾಂಗಣಕ್ಕೆ ಬರುವಂತಿಲ್ಲ.