ನವದೆಹಲಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ IPL ಟೂರ್ನಿಯ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ದೆಹಲಿ ಕ್ಯಾಪಿಟಲ್ಸ್ ಸೋಲು ಕಂಡಿತು. ಕಳಪೆ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿದ್ದ ಮುಂಬೈ ತನ್ನ ಜೊತೆಗೆ ದೆಹಲಿಯನ್ನೂ ಸೀಸನ್‌ನಿಂದ ಹೊರಗೆಳೆಯಿತು.
ಐಪಿಎಲ್ 15ನೇ ಆವೃತ್ತಿಯಲ್ಲಿ ತನ್ನ 14ನೇ ಪಂದ್ಯವನ್ನಾಡಿದ ಮುಂಬೈ ಇಂಡಿಯನ್ಸ್ ತಂಡ ಗೆದ್ದು ಆವೃತ್ತಿಗೆ ಗುಡ್‌ಬೈ ಹೇಳಿತು. 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ರೋಹಿತ್ ಶರ್ಮಾ ಪಡೆಯಿಂದ RCB ತಂಡವು ಪ್ಲೇ ಆಫ್ ಪ್ರವೇಶಿಸಲು ಸಹಕಾರಿಯಾಯಿತು. ಇದನ್ನೂ ಓದಿ: ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ
Advertisement
Advertisement
ಕೊನೆಯ ಪಂದ್ಯವನ್ನು ಗೆದ್ದಿದ್ದರೆ ದೆಹಲಿಗೆ ಪ್ಲೇ ಆಫ್ ಪ್ರವೇಶಿಸುವ ಉತ್ತಮ ಅವಕಾಶವಿತ್ತು. ಮುಂಬೈ ವಿರುದ್ಧ ರಿಷಭ್ ಪಂತ್ ಪಡೆಯ ಗೆಲುವಿಗೆ ಉತ್ತಮ ಅವಕಾಶವಿತ್ತು. ಆದರೆ ಸುಲಭವಾಗಿ ಗೆಲ್ಲುವ ಪಂದ್ಯದಲ್ಲಿ ದೆಹಲಿ ಸೋಲಬೇಕಾಯಿತು. ಮ್ಯಾಚ್ ಮುಗಿದ ಬಳಿಕ ತಮ್ಮ ತಂಡದ ಸೋಲಿಗೆ ಕಾರಣವೇನೆಂಬುದನ್ನು ನಾಯಕ ರಿಷಭ್ ಪಂತ್ ಹೇಳಿದ್ದಾರೆ. ಇದನ್ನೂ ಓದಿ: ಡೆಲ್ಲಿ ವಿರುದ್ಧದ ಪಂದ್ಯದ ಮೂಲಕ ಅರ್ಜುನ್ ತೆಂಡೂಲ್ಕರ್ ಐಪಿಎಲ್‍ಗೆ ಪದಾರ್ಪಣೆ?
Advertisement
.@mipaltan end their #TATAIPL 2022 campaign on a winning note! ???? ????
The @ImRo45-led unit beat #DC by 5 wickets & with it, @RCBTweets qualify for the Playoffs. ???? ???? #MIvDC
Scorecard ▶️ https://t.co/sN8zo9RIV4 pic.twitter.com/kzO12DXq7w
— IndianPremierLeague (@IPL) May 21, 2022
Advertisement
ಈ ಕುರಿತು ಮಾತನಾಡಿದ ರಿಷಭ್ ಪಂತ್, ನಾವು ಉತ್ತಮವಾಗಿಯೇ ಆಡಿದ್ದೆವು. ಆದರೆ ಕೆಲವು ತಪ್ಪುಗಳಿಂದಾಗಿ ಸೋಲಬೇಕಾಯಿತು. ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಫೇಲ್ ಆಗಿದ್ದರಿಂದ ಸೋಲಾಗಿದೆ. ಟೂರ್ನಿಯುದ್ದಕ್ಕೂ ನಾವು ಇದೇ ತೊಂದರೆಯನ್ನು ಎದುರಿಸಿದ್ದೇವೆ. ನಾವು ನಮ್ಮ ತಪ್ಪುಗಳಿಂದ ಪಾಠ ಕಲಿತಿದ್ದೇವೆ. ಮುಂದಿನ ಸೀಸನ್‌ನಲ್ಲಿ ಬಲಿಷ್ಠ ತಂಡವಾಗಿ ಮರಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
.@imShard picks his first wicket of the match. ???? ????#MI lose Dewald Brevis in the chase.
Follow the match ▶️ https://t.co/sN8zo9RIV4#TATAIPL | #MIvDC | @DelhiCapitals pic.twitter.com/lxxY0jM79w
— IndianPremierLeague (@IPL) May 21, 2022
ಮುಂಬೈ ಇಂಡಿಯನ್ಸ್ ತಂಡದ ಈ ಗೆಲುವಿನಲ್ಲಿ ಟಿಮ್ ಡೇವಿಡ್ ಪಾತ್ರ ಬಹುಮುಖ್ಯವಾಗಿದೆ. ಕೇವಲ 11 ಎಸೆತಗಳಲ್ಲಿ ಅವರು 34 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಒಂದು ಬಾರಿ ಟಿಮ್ ಡೇವಿಡ್ ಕ್ಲೀನ್ ಔಟ್ ಆಗಿದ್ದರು. ಆದರೆ ಅಂಪೈರ್ ಔಟ್ ನೀಡಲಿಲ್ಲ. ಈ ವೇಳೆ ರಿಷಭ್ ಪಂತ್ ಡಿಆರ್‌ಎಸ್ ರಿವ್ಯೂ ತೆಗೆದುಕೊಳ್ಳಲಿಲ್ಲ. ಆದರೆ ಟಿಮ್ ಡೇವಿಡ್ ಸ್ಪಷ್ಟವಾಗಿ ಔಟಾಗಿರುವುದು ಬಳಿಕ ಗೊತ್ತಾಯಿತು. ಇದರಿಂದಾಗಿ ದೆಹಲಿಗೆ ದೊಡ್ಡ ಹೊಡೆತ ಬಿದ್ದಂತಾಯಿತು. ಒಂದು ವೇಳೆ ರಿವ್ಯೂ ತೆಗೆದುಕೊಂಡಿದ್ದರೆ ಟಿಮ್ ಡೇವಿಡ್ ಸ್ಫೋಟಕ ಆಟಕ್ಕೆ ಬ್ರೇಕ್ ಬೀಳುತ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧ್ಯವೂ ಆಗುತ್ತಿತ್ತು.
ಕ್ಯಾಚ್ ಕೈಚೆಲ್ಲಿದ್ದೇ ಎಡವಟ್ಟಾಯ್ತು: ರಿಷಭ್ ಪಂತ್ ಸೇರಿದಂತೆ ದೆಹಲಿಯ ಕೆಲ ಆಟಗಾರರು ಕೆಲವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ತಂಡಕ್ಕೆ ಭಾರೀ ಪೆಟ್ಟು ನೀಡಿತು. ಉತ್ತಮ ಫೀಲ್ಡಿಂಗ್ ಮಾಡಿದ್ದರೆ ಮುಂಬೈ ವಿರುದ್ಧ ದೆಹಲಿ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳು ಇದ್ದವು. ಆದರೆ ಕೈಚೆಲ್ಲಿದ ಕ್ಯಾಚ್‌ಗಳಿಂದ ದೆಹಲಿ ಸೋಲು ಕಾಣಬೇಕಾಯಿತು.