ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ನಾಲ್ಕು ತಿಂಗಳಲ್ಲಿ ಮೂರನೇ ಬಾರಿಗೆ ಸಚಿವ ಸಂಪುಟ (Cabinet) ಪುನರ್ ರಚನೆ ಮಾಡಿದ್ದಾರೆ. ಇತ್ತಿಚೆಗೆ ಸಂಪುಟ ಸೇರಿದ್ದ ಸಚಿವೆ ಅತಿಶಿಗೆ ಹೆಚ್ಚುವರಿ ಮೂರು ಖಾತೆಗಳನ್ನು ನೀಡಿದ್ದು, ಅವರೀಗ ಸರ್ಕಾರದ ಎರಡನೇ ಪ್ರಭಾವಿ ಸಚಿವೆಯಾಗಿದ್ದಾರೆ.
ಅತಿಶಿಗೆ (Atishi Marlena) ಹಣಕಾಸು, ಯೋಜನೆ ಮತ್ತು ಆದಾಯದಂತಹ ಮಹತ್ವದ ಖಾತೆಗಳನ್ನು ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿದ್ದರು. ಅವರ ಶಿಫಾರಸ್ಸನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೆನಾ (Vinai Kumar Saxena) ಅನುಮೋದಿಸಿದ್ದಾರೆ. ಈ ಬೆಳವಣಿಗೆ ಬಳಿಕ ಅತಿಶಿ ನಾಲ್ಕು ತಿಂಗಳಲ್ಲಿ ಸಚಿವ ಸಂಪುಟದಲ್ಲಿ ಎರಡನೇ ಪ್ರಮುಖ ಸ್ಥಾನಕ್ಕೆ ಏರಿದ್ದಾರೆ.
ಶಿಕ್ಷಣ ಸುಧಾರಣೆಗಳಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (DCM Manish Sisodia) ಜೊತೆಗೆ ನಿಕಟವಾಗಿ ಕೆಲಸ ಮಾಡಿದ ಅತಿಶಿ ಅವರು ಸದ್ಯ ಮುಖ್ಯಮಂತ್ರಿ ಸೇರಿದಂತೆ 7 ಸಚಿವರ ದೆಹಲಿ ಸಂಪುಟದಲ್ಲಿ ಏಕೈಕ ಮಹಿಳೆಯಾಗಿದ್ದಾರೆ. ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಪ್ರವಾಸೋದ್ಯಮ, ಕಲೆ, ಭಾಷೆ ಮತ್ತು ಸಂಸ್ಕೃತಿ, ಪಿಡಬ್ಲ್ಯುಡಿ ಮತ್ತು ಪವರ್ ಸೇರಿ ಆರು ಸಚಿವಾಲಯಗಳ ಉಸ್ತುವಾರಿ ನೀಡಲಾಗಿತ್ತು.
ಕೆಲ ದಿನಗಳ ಹಿಂದಷ್ಟೆ ಸಾರ್ವಜನಿಕ ಸಂಪರ್ಕ ಉಸ್ತುವಾರಿಯನ್ನು ನೀಡಲಾಯಿತು. ಈಗ ಹಣಕಾಸು ಮತ್ತು ಆದಾಯದ ಹೆಚ್ಚುವರಿ ಶುಲ್ಕಗಳ ಜವಬ್ದಾರಿ ನೀಡಿದೆ. ಈ ಮೂಲಕ ಅತಿಶಿ ನಿರ್ವಹಿಸುತ್ತಿರುವ ಇಲಾಖೆಗಳ ಸಂಖ್ಯೆ 6 ರಿಂದ 10ಕ್ಕೆ ಏರಿದೆ. ಇದನ್ನೂ ಓದಿ: 500 ರೂ. ಕಂತೆ ಕಂತೆ ನೋಟುಗಳ ಜೊತೆ ಪತ್ನಿ, ಮಕ್ಕಳ ಸೆಲ್ಫಿ- ಪೊಲೀಸಪ್ಪನಿಗೆ ಸಂಕಷ್ಟ
ಅತಿಶಿಗೆ ನೀಡಿರುವ 3 ಹೆಚ್ಚುವರಿ ಖಾತೆಗಳನ್ನು ಈ ಮೊದಲು ಕೈಲಾಶ್ ಗಹ್ಲೋಟ್ ನಿಭಾಯಿಸುತ್ತಿದ್ದರು. ಮೂರು ಖಾತೆಗಳು ಕೈ ತಪ್ಪಿದ ಬಳಿಕ ಸದ್ಯ ಅವರು ಗೃಹ, ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳು, ಸಾರಿಗೆ, ಆಡಳಿತ ಸುಧಾರಣೆಗಳು ಮತ್ತು ಮಾಹಿತಿ ತಂತ್ರಜ್ಞಾನವನ್ನು ಇಲಾಖೆಗಳ ಜವಬ್ದಾರಿ ಹೊಂದಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]