ನವದೆಹಲಿ: ಕಣ್ಣಲ್ಲೇ ರೇಪ್ ಮಾಡಿದರು ಎಂದು ಆರೋಪಿಸಿದ್ದ ಬಾಲಿವುಡ್ ಬೆಡಗಿ ಇಶಾ ಗುಪ್ತಾ ವಿರುದ್ಧ ದೆಹಲಿಯ ಉದ್ಯಮಿಯೊಬ್ಬರು ಮಾನಹಾನಿ ಕೇಸ್ ದಾಖಲಿಸಿದ್ದಾರೆ.
ಹೋಟೆಲ್ ಉದ್ಯಮಿ ರೋಹಿತ್ ವಿಗ್ ಅವರು ತಮ್ಮ ವಕೀಲ ವಿಕಾಸ್ ಪಹ್ವಾರ್ ಅವರ ಮೂಲಕ ಸಾಕೇತ್ ಕೋರ್ಟ್ ನಲ್ಲಿ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಈ ಮೂಲಕ ಇಶಾ ಗುಪ್ತಾ ಅವರ ವಿರುದ್ಧ ಐಪಿಸಿ ಸೆಕ್ಷನ್ 499 (ಮಾನಹಾನಿ) ಹಾಗೂ 500 (ಮಾನಹಾನಿಗಾಗಿ ದಂಡನೆ) ಅಡಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯವು ಆಗಸ್ಟ್ 28ರಂದು ವಿಚಾರಣೆಯನ್ನು ನಿಗದಿಪಡಿಸಿದೆ.
ಇಶಾ ಗುಪ್ತಾ ಆರೋಪದಿಂದ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ನಿತ್ಯ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ನಟಿಯ ಹೇಳಿಕೆ ನನ್ನ ಮತ್ತು ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡಿದೆ. ಹೀಗಾಗಿ ಅವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಉದ್ಯಮಿ ರೋಹಿತ್ ವಿಗ್ ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.
ಇಶಾ ಗುಪ್ತಾ ಅಭಿನಯದ ‘ಒನ್ ಡೇ: ಜಸ್ಟೀಸ್ ಡೆಲಿವೆರ್ಡ್’ ಚಿತ್ರ ಜುಲೈ 5ರಂದು ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಅನುಪಮ್ ಖೇರ್ ಸಹ ನಟಿಸಿದ್ದಾರೆ. ಚಿತ್ರ ಬಿಡುಗಡೆ ಸಂಭ್ರಮದಲ್ಲಿದ್ದ ಇಶಾ, ಸ್ನೇಹಿತರ ಜೊತೆ ಪಾರ್ಟಿ ಮಾಡಲು ಹೋಗಿದ್ದರು. ಎಂಜಾಯ್ ಮಾಡಲು ನಾನು ಪಾರ್ಟಿಗೆ ಹೋಗಿದ್ದೆ, ಆದರೆ ಆ ಅನುಭವ ತುಂಬಾ ಕೆಟ್ಟದಾಗಿತ್ತು ಎಂದು ಟ್ವೀಟ್ ಮೂಲಕ ಅಳಲು ತೋಡಿಕೊಂಡಿದ್ದರು.
https://twitter.com/eshagupta2811/status/1147396866570620928
ಜುಲೈ 6ರಂದು ಸರಣಿ ಟ್ವೀಟ್ ಮಾಡಿದ್ದ ಇಶಾ ಗುಪ್ತಾ, ಪಾರ್ಟಿಗೆ ಹೋದ ವೇಳೆ ಹೊಟೇಲ್ ಉದ್ಯಮಿ ರೋಹಿತ್ ವಿಗ್ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ರೋಹಿತ್ ಕಣ್ಣುಗಳಲ್ಲಿಯೇ ನನ್ನನ್ನು ಅತ್ಯಾಚಾರವೆಸಗಿದ್ದಾನೆ. ಅಂತಹ ಕೆಟ್ಟ ಅನುಭವ ನನಗೆ ಆಗಿದೆ. ಇದನ್ನು ನಾನು ರೇಪ್ ಎಂದೇ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದರು.
https://twitter.com/eshagupta2811/status/1147270556447924224
ನನ್ನಂತಹ ಮಹಿಳೆಯೇ ಭಯಪಟ್ಟುಕೊಂಡೆ ಎಂದರೆ ಇನ್ನುಳಿದವರ ಕಥೆ ಏನು? ರೋಹಿತ್ ವಿಗ್ ಅವರಂತ ವ್ಯಕ್ತಿ ಇದ್ದರೆ ಮಹಿಳೆಯರು ಎಲ್ಲಿಯಾದರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಅವರು ನನ್ನನ್ನೇ ದುರುಗಿಟ್ಟಿ ನೋಡುತ್ತಿದ್ದರು. ಜೊತೆ ಅಸಭ್ಯವಾಗಿ ನಡೆದುಕೊಂಡರು ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದರು.
https://twitter.com/eshagupta2811/status/1147282233742544896