– ಸಲಹೆ ಕಳುಹಿಸಲು ಇಮೇಲ್ ಐಡಿ, ವಾಟ್ಸಪ್ ಸಂಖ್ಯೆ ಬಿಡುಗಡೆ
ನವದೆಹಲಿ: ದೆಹಲಿ ಬಜೆಟ್ ಅಧಿವೇಶನ ಮಾರ್ಚ್ 24 ರಿಂದ 26 ರವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ (Rekha Gupta) ಸೋಮವಾರ ತಿಳಿಸಿದರು.
Advertisement
ಬಜೆಟ್‌ಗೆ ಸಂಬಂಧಿಸಿದಂತೆ ಸಿಎಂ ರೇಖಾ ಗುಪ್ತಾ ಸುದ್ದಿಗೋಷ್ಠಿ ನಡೆಸಿ, ಬಜೆಟ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತಮ್ಮ ಸಲಹೆಗಳನ್ನು ಕಳುಹಿಸಲು ಇಮೇಲ್ ಐಡಿ ಮತ್ತು ವಾಟ್ಸಾಪ್ ಸಂಖ್ಯೆಯನ್ನು ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಚಿವರಾದ ಪರ್ವೇಶ್ ಸಾಹಿಬ್ ಸಿಂಗ್, ಆಶಿಶ್ ಸೂದ್ ಮತ್ತು ಮಂಜಿಂದರ್ ಸಿಂಗ್ ಸಿರ್ಸಾ ಕೂಡ ಉಪಸ್ಥಿತರಿದ್ದರು.ಇದನ್ನೂ ಓದಿ: Oscars Award 2025: 97ನೇ ಸಾಲಿನ ಆಸ್ಕರ್ ಪ್ರಶಸ್ತಿ ಗೆದ್ದವರ ಲಿಸ್ಟ್ ಇಲ್ಲಿದೆ
Advertisement
Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಂಬರುವ ಬಜೆಟ್ `ವಿಕ್ಷಿತ್ ದೆಹಲಿ’ಯ ದೃಷ್ಟಿಕೋನದಲ್ಲಿ ಸಮಗ್ರ ಬೆಳವಣಿಗೆ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಮಾಜದ ವಿವಿಧ ವರ್ಗಗಳ ಒಳ ಮಾಹಿತಿಗಳಿಂದ ರೂಪಿಸಲ್ಪಡುತ್ತದೆ. ಸಮಾಜದ ಎಲ್ಲಾ ವರ್ಗಗಳ ಸಲಹೆಗಳನ್ನು ಸೇರಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು.
Advertisement
ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಮಾರ್ಚ್ 5 ರಂದು ದೆಹಲಿಯಾದ್ಯಂತ ಮಹಿಳಾ ಸಂಘಟನೆಗಳನ್ನು ಬಜೆಟ್‌ಗಾಗಿ ಸಲಹೆಗಳನ್ನು ಪಡೆಯಲು ಆಹ್ವಾನಿಸಿದ್ದೇವೆ. ಅದೇ ದಿನ, ಶಿಕ್ಷಣ ತಜ್ಞರನ್ನು ಸಲಹೆಗಳಿಗಾಗಿ ಆಹ್ವಾನಿಸಲಾಗಿದೆ. ಮಾರ್ಚ್ 6 ರಂದು, ಅವರ ಕಾಳಜಿಗಳನ್ನು ಅರ್ಥಮಾಡಿಕೊಳ್ಳಲು ನಾವು ಕಾರ್ಮಿಕ ಸಂಘಗಳನ್ನು ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.
ಮಹಿಳೆಯರಿಗೆ ಆರ್ಥಿಕ ನೆರವು, ಆರೋಗ್ಯ ಸೇವೆಗಳ ವಿಸ್ತರಣೆ, ಸಾರ್ವಜನಿಕ ಸಾರಿಗೆ ಉತ್ತೇಜನ, ಮಾಲಿನ್ಯ ನಿಯಂತ್ರಣ, ಉದ್ಯೋಗ ಸೃಷ್ಟಿ, ಉತ್ತಮ ಶಿಕ್ಷಣ ಸೌಲಭ್ಯಗಳು, ಹಿಂದುಳಿದವರಿಗೆ ಸಬ್ಸಿಡಿ ದರದ ಪೌಷ್ಟಿಕ ಆಹಾರ, ಹಿರಿಯ ನಾಗರಿಕರ ಕಲ್ಯಾಣ ಮತ್ತು ಯಮುನಾ ನದಿಯ ಶುಚಿಗೊಳಿಸುವಿಕೆ ಸೇರಿದಂತೆ ಹಲವು ವಿಷಯಗಳು ಬಜೆಟ್‌ನಲ್ಲಿ ಇರಲಿವೆ ಎಂದರು.
ಸಿಎಜಿ ವರದಿ ಬಗ್ಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಮಂಡಿಸಲಾದ ಎರಡು ವರದಿಗಳು ಈಗಾಗಲೇ ಹಿಂದಿನ ಎಎಪಿ ಸರ್ಕಾರದ ವಿರುದ್ಧ ಅನೇಕ ಭ್ರಷ್ಟಾಚಾರ ಆರೋಪಗಳನ್ನು ಬಹಿರಂಗಪಡಿಸಿವೆ. ಇನ್ನೂ ಹನ್ನೆರಡು ಸಿಎಜಿ ವರದಿಗಳನ್ನು ಮಂಡಿಸಬೇಕಾಗಿದೆ ಮತ್ತು ಹೆಚ್ಚಿನ ಅಕ್ರಮಗಳು ಹೊರಬರುವ ಸಾಧ್ಯತೆಯಿದೆ ಎಂದು ಹೇಳಿದರು.ಇದನ್ನೂ ಓದಿ: ಸಿನಿಮಾದವರು ಬಾಯಿಮುಚ್ಚಿಕೊಂಡು ಇರಬೇಕು – ರಶ್ಮಿಕಾ ವಿರುದ್ಧ ಕೆಂಡ ಕಾರಿದ ಗಣಿಗ ರವಿ