ನವದೆಹಲಿ: ವಾಯುವ್ಯ ದೆಹಲಿಯ ಪ್ರೇಮ್‌ನಗರ ಪ್ರದೇಶದಲ್ಲಿ ಪಿಟ್ ಬುಲ್ ದಾಳಿಯಿಂದ ಬಾಲಕ ತನ್ನ ಕಿವಿಯನ್ನೇ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ.
ಪ್ರಕರಣ ಸಂಬಂಧ ನಾಯಿ ಮಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದ. ಪಿಟ್ ಬುಲ್ ನಾಯಿ ಇದ್ದಕ್ಕಿದ್ದಂತೆ ಪಕ್ಕದ ಮನೆಯೊಂದರಿಂದ ಹೊರಬಂದು ಹುಡುಗನ ಮೇಲೆ ದಾಳಿ ಮಾಡಿತು.
ನಾಯಿಯನ್ನು ವಾಕಿಂಗ್ ಕರೆದುಕೊಂಡು ಬಂದಿದ್ದ ಮಹಿಳೆ, ಪಿಟ್ ಬುಲ್ ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ, ಆಕೆ ಕೈಗೆ ಸಿಗದೇ ಪಿಟ್ ಬುಲ್ ಹೋಗಿ ಬಾಲಕನ ಮೇಲೆ ದಾಳಿ ನಡೆಸಿದೆ. ದಾಳಿ ಪರಿಣಾಮ ಬಾಲಕ ತನ್ನ ಕಿವಿ ಕಳೆದುಕೊಂಡಿದ್ದಾನೆ. ತೀವ್ರ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಯಿ ಮಾಲೀಕ ರಾಜೇಶ್ ಪಾಲ್ ಟೈಲರ್ ಆಗಿದ್ದಾರೆ. ಅವರ ಮಗ ಸಚಿನ್ ಪಾಲ್ ಸುಮಾರು ಒಂದೂವರೆ ವರ್ಷಗಳ ಹಿಂದೆ ಪಿಟ್ ಬುಲ್ ಅನ್ನು ಮನೆಗೆ ಕರೆತಂದಿದ್ದರು. ಪ್ರಸ್ತುತ ಕೊಲೆ ಯತ್ನ ಪ್ರಕರಣದಲ್ಲಿ ರಾಜೇಶ್ ಪಾಲ್ ಜೈಲಿನಲ್ಲಿದ್ದಾರೆ.

