Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಲೇಜಿನಲ್ಲಿ ಟಾಪರ್‌, ಪತಿಗೆ ತಲಾಖ್‌, ಪ್ರೊಫೆಸರ್‌ ಹುದ್ದೆಗೆ ಚಕ್ಕರ್‌ – ಟೆರರ್‌ ಡಾಕ್ಟರ್‌ ಶಾಹೀನ್‌ ಬದುಕೇ ನಿಗೂಢ ರಹಸ್ಯ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕಾಲೇಜಿನಲ್ಲಿ ಟಾಪರ್‌, ಪತಿಗೆ ತಲಾಖ್‌, ಪ್ರೊಫೆಸರ್‌ ಹುದ್ದೆಗೆ ಚಕ್ಕರ್‌ – ಟೆರರ್‌ ಡಾಕ್ಟರ್‌ ಶಾಹೀನ್‌ ಬದುಕೇ ನಿಗೂಢ ರಹಸ್ಯ

Latest

ಕಾಲೇಜಿನಲ್ಲಿ ಟಾಪರ್‌, ಪತಿಗೆ ತಲಾಖ್‌, ಪ್ರೊಫೆಸರ್‌ ಹುದ್ದೆಗೆ ಚಕ್ಕರ್‌ – ಟೆರರ್‌ ಡಾಕ್ಟರ್‌ ಶಾಹೀನ್‌ ಬದುಕೇ ನಿಗೂಢ ರಹಸ್ಯ

Public TV
Last updated: November 12, 2025 7:57 am
Public TV
Share
2 Min Read
Dr Shaheen Shahid
SHARE

ನವದೆಹಲಿ: ಕೆಂಪುಕೋಟೆ ಬಳಿ ಕಾರ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಂಕಿತರ ಹಿನ್ನೆಲೆ ಜಾಲಾಡುವ ವೇಳೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಭಾರತದಲ್ಲಿ ಪಾಕಿಸ್ತಾನದ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮಹಿಳಾ ವಿಭಾಗ ಸ್ಥಾಪನೆಯ ಹೊಣೆ ಹೊತ್ತಿದ್ದ ವೈದ್ಯೆ ಶಾಹೀನ್ ಶಾಹಿದ್(46) ಬದುಕೇ ನಿಗೂಢ ರಹಸ್ಯವಾಗಿ ಉಳಿದಿದೆ.

ಹೌದು. ಹರಿಯಾಣದ ಫರಿದಾಬಾದ್‌ನಲ್ಲಿ(Faridabad) ಬೃಹತ್ ಸ್ಫೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಲಕ್ನೋದ ಕೈಸರ್‌ಬಾಗ್‌ ನಿವಾಸಿಯಾದ ಶಾಹೀನ್‌ಳನ್ನು (Dr Shaheen Shahid) ಬಂಧಿಸಲಾಗಿದೆ. ರಷ್ಯಾದ ಅಸಾಲ್ಟ್ ರೈಫಲ್ ಮತ್ತು ಲೈವ್ ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಲಕ್ನೋ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಓದಿದ್ದ ಶಾಹೀನ್ ಶಾಹಿದ್ 10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಟಾಪರ್‌ ಆಗಿದ್ದಳು. ಉತ್ತರ ಪ್ರದೇಶದ (Uttar Pradesh) ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಶಾಹೀನ್‌ ಪ್ರಯಾಗ್‌ರಾಜ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದಾಳೆ. ಇದನ್ನೂ ಓದಿ:  ನನ್ನ ಮಗಳು ಇಂತಹ ಕೃತ್ಯದಲ್ಲಿ ತೊಡಗಿದ್ದಾಳೆ ಅಂತ ನಂಬೋಕಾಗ್ತಿಲ್ಲ: ಸ್ಫೋಟಕ ಸಾಗಣೆಯಲ್ಲಿ ಅರೆಸ್ಟ್‌ ಆದ ಪುತ್ರಿ ಬಗ್ಗೆ ತಂದೆ ಪ್ರತಿಕ್ರಿಯೆ

ಓದಿದ ನಂತರ 2009 ರಲ್ಲಿ ಕಾನ್ಪುರದ ಗಣೇಶ ಶಂಕರ ವಿದ್ಯಾರ್ಥಿ ಮೆಡಿಕಲ್ ಕಾಲೇಜಿನಲ್ಲಿ (GSVM) ಔಷಧಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಕರ್ತವ್ಯಕ್ಕೆ ಹಾಜರಾಗುತ್ತಾಳೆ.  ಆರು ತಿಂಗಳ‌ ನಂತರ ಕನೌಜ್‌ ಮೆಡಿಕಲ್‌ ಕಾಲೇಜಿಗೆ ಆಕೆಯನ್ನು ವರ್ಗಾವಣೆ ಮಾಡಲಾಗುತ್ತದೆ ಮತ್ತು 2010 ರಲ್ಲಿ ಮರಳಿ ಕಾನ್ಪುರಕ್ಕೆ ಬರುತ್ತಾಳೆ. ಜಿಎಸ್‌ವಿಎಂ ಕಾಲೇಜಿನಲ್ಲಿ 2013 ರವರೆಗೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಶಾಹೀನ್‌ ಉದ್ಯೋಗ ಮಾಡಿದ್ದಾಳೆ. ಈ ವೇಳೆ ನೇತ್ರಶಾಸ್ತ್ರಜ್ಞ ಜಾಫರ್ ಸಯೀದ್ ಅವರನ್ನು ಮದುವೆಯಾಗುತ್ತಾಳೆ.

ಮದುವೆಯಾದ ನಂತರ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿರುತ್ತದೆ. ಹೀಗಾಗಿ ಪತಿಗೆ 2015 ರಲ್ಲಿ ತಲಾಖ್‌ ನೀಡಿ ಲಕ್ನೋದಲ್ಲಿ ಶಾಹೀನ್‌ ವಾಸಿಸುತ್ತಿದ್ದಳು. ಪತಿಗೆ ವಿಚ್ಚೇದನ ನೀಡಿದ ಬಳಿಕ ಉಗ್ರ ಮುಜಮ್ಮಿಲ್ ಜೊತೆ ನಂಟು ಬೆಳೆಸಿದ್ದಾಳೆ. ಇದನ್ನೂ ಓದಿ:  ದೆಹಲಿ ಸ್ಫೋಟಕ್ಕೆ ಛಿದ್ರಗೊಂಡ ಕುಟುಂಬಗಳ ಕನಸು – ಸಂತ್ರಸ್ತರ ಮನೆಯ ಕಣ್ಣೀರ ಕತೆ

ಕಾಲೇಜು ದಾಖಲೆಗಳ ಪ್ರಕಾರ ಶಾಹೀನ್‌ 2013 ರಲ್ಲಿ ಯಾವುದೇ ಅಧಿಕೃತ ರಜೆ ಅಥವಾ ಸೂಚನೆ ನೀಡದೇ ಕರ್ತವ್ಯಕ್ಕೆ ಗೈರು ಹಾಜರಿ ಹಾಕಿದ್ದಳು. ಕಾಲೇಜು ಆಡಳಿತ ಹಲವಾರು ಸೂಚನೆಗಳನ್ನು ನೀಡಿದ್ದರೂ ಆಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಹೋದ್ಯೋಗಿಗಳು ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ಅವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಂತಿಮವಾಗಿ 2021 ರಲ್ಲಿ ಸರ್ಕಾರ ಆಕೆಯನ್ನು ಸೇವೆಯಿಂದ ಮುಕ್ತಗೊಳಿಸಿತ್ತು.

ಜಿಎಸ್‌ವಿಎಂ ತೊರೆದ ಬಳಿಕ ಶಾಹೀನ್ ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಬೆಳೆಸಿ ಅಲ್ಲಿ ಮುಜಮ್ಮಿಲ್‌ನನ್ನು ಭೇಟಿಯಾಗಿದ್ದಾಳೆ. ಶಾಹೀನ್ ಜೈಶ್ ಮಹಿಳಾ ವಿಂಗ್‌ಗೆ ಭಾರತದ ನಾಯಕಿಯಾಗಿದ್ದು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಳು.

TAGGED:delhi blastpakistanShaheen Shahidಜೈಶ್-ಎ-ಮೊಹಮ್ಮದ್ದೆಹಲಿ ಸ್ಫೋಟಪಾಕಿಸ್ತಾನಶಾಹೀನ್ ಶಾಹಿದ್ಹರಿಯಾಣ
Share This Article
Facebook Whatsapp Whatsapp Telegram

Cinema news

First Salary Movie
ಪವನ್ ವೆಂಕಟೇಶ್ ನಿರ್ದೇಶನದಲ್ಲಿ ಮೂಡಿಬಂತು ಫಸ್ಟ್ ಸ್ಯಾಲರಿ
Cinema Latest Sandalwood Top Stories
Samudra Manthana
ಸಮುದ್ರ ಮಂಥನ ಶೂಟಿಂಗ್ ಮುಕ್ತಾಯ: ಸಚಿನ್ ಶೆಟ್ಟಿ ನಿರ್ದೇಶನದ ಚಿತ್ರ
Cinema Latest Sandalwood
Ranveer Singh
ರಿಷಬ್ ಅದ್ಭುತ ಅಭಿನಯ ತೋರಿಸೋದು ಉದ್ದೇಶವಾಗಿತ್ತು, ನೋವಾಗಿದ್ದರೆ ಕ್ಷಮಿಸಿ – ರಣವೀರ್ ಸಿಂಗ್
Bollywood Cinema Latest Sandalwood Top Stories
Kavya Rakshita Shetty
ಕಾವ್ಯ, ರಕ್ಷಿತಾ ಮಧ್ಯೆ ಭಾರೀ ಕಿತ್ತಾಟ – ಬೆನ್ನಿಗೆ ಚೂರಿ
Cinema Karnataka Latest Top Stories TV Shows

You Might Also Like

KSRTC BUS
Crime

ಕೆಎಸ್‌ಆರ್‌ಟಿಸಿ ಬಸ್ ಚಕ್ರಕ್ಕೆ ಸಿಲುಕಿ ನಾಡಬಾಂಬ್ ಸ್ಫೋಟ – ನಿಯಂತ್ರಣ ತಪ್ಪಿ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ

Public TV
By Public TV
3 minutes ago
jnanabharathi police 2
Bengaluru City

ಲೈಂಗಿಕ ಸಮಸ್ಯೆ ಪರಿಹರಿಸೋದಾಗಿ ಟೆಕ್ಕಿಗೆ 48 ಲಕ್ಷ ವಂಚನೆ – ವಿಜಯ್ ಗುರೂಜಿ ಅರೆಸ್ಟ್

Public TV
By Public TV
10 minutes ago
supreme Court 1
Court

ಭಾರತೀಯ ನಾಗರಿಕರ ಅಗತ್ಯಗಳನ್ನು ಬಲಿಕೊಟ್ಟು ವಲಸಿಗರಿಗೆ ದೇಶದ ಸಂಪನ್ಮೂಲ ಬಳಸಿಕೊಳ್ಳಲು ಅವಕಾಶ ನೀಡಬೇಕೇ: ಸುಪ್ರೀಂ ಪ್ರಶ್ನೆ

Public TV
By Public TV
11 minutes ago
ಬೆಂಗಳೂರು ವಿಮಾನ ನಿಲ್ದಾಣ
Bengaluru City

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ನಿಯಮ ಜಾರಿ

Public TV
By Public TV
49 minutes ago
Jyotiraditya Scindia
Latest

ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ, ಡಿಲೀಟ್‌ ಮಾಡಬಹುದು: ಸಿಂಧಿಯಾ ಸ್ಪಷ್ಟನೆ

Public TV
By Public TV
2 hours ago
Yediyurappa
Court

ಪೋಕ್ಸೋ ಕೇಸ್‌ – ಬಿಎಸ್‌ವೈಗೆ ಸುಪ್ರೀಂನಿಂದ ಬಿಗ್‌ ರಿಲೀಫ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?