ನವದೆಹಲಿ: ದೆಹಲಿ ಕೆಂಪು ಕೋಟೆ ಬಳಿ (Delhi Car Blast) ಕಾರು ಸ್ಫೋಟ ಪ್ರಕರಣದಲ್ಲಿ ಫರಿದಾಬಾದ್‌ನ ಅಲ್ ಫಲಾಹ್ ಯೂನಿವರ್ಸಿಟಿಯ ಸಂಸ್ಥಾಪಕನ ಹೆಸರು ತಳಕು ಹಾಕಿಕೊಂಡಿದೆ.
ಅಲ್ ಫಲಾಹ್ (Al Falah) ಸಂಸ್ಥಾಪಕ ಮತ್ತು ವ್ಯವಸ್ಥಾಪಕ ಟ್ರಸ್ಟಿ ಜಾವೇದ್ ಅಹ್ಮದ್ ಸಿದ್ದಿಕಿ, ತನ್ನ ವಿವಿಯಲ್ಲಿ ಶಂಕಿತ ಭಯೋತ್ಪಾದಕರಿಗೆ ಕೆಲಸ ಕೊಟ್ಟಿದ್ದ. ದೆಹಲಿ ಸ್ಫೋಟ ಕೇಸಲ್ಲಿ ಪ್ರಮುಖ ಶಂಕಿತರಾಗಿರುವ ಡಾ. ಶಾಹೀನ್ ಸಯೀದ್ ಮತ್ತು ಡಾ. ಮುಜಮ್ಮಿಲ್ ಶಕೀಲ್‌ಗೆ ಕೆಲಸ ನೀಡಿದ್ದ. ಇದನ್ನೂ ಓದಿ: ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಉಮರ್ ಫಾರೂಕ್ ಪತ್ನಿ ಜೊತೆ ಶಾಹೀನ ಲಿಂಕ್
ಈ ವಿಶ್ವವಿದ್ಯಾನಿಲಯವು ತನ್ನ ನಿಧಿಯ ಕುರಿತು ಪ್ರತ್ಯೇಕ ಜಾರಿ ನಿರ್ದೇಶನಾಲಯದ ತನಿಖೆಯನ್ನು ಎದುರಿಸುತ್ತಿದೆ. ಅಲ್ ಫಲಾಹ್ ಸಂಸ್ಥಾಪಕ ಸಿದ್ದಿಕಿ 7.50 ಕೋಟಿ ರೂ. ವಂಚನೆ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.
ವಿಶ್ವವಿದ್ಯಾನಿಲಯದ ಕಾನೂನು ಸಲಹೆಗಾರ ಮೊಹಮ್ಮದ್ ರಾಜಿ, ಸಿದ್ದಿಕಿ ವಿರುದ್ಧದ 7.5 ಕೋಟಿ ರೂ. ವಂಚನೆ ಆರೋಪ ಸೇರಿದಂತೆ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಶಕೀಲ್ ನೇಮಕಾತಿ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶದ ಮ್ಹೋದಲ್ಲಿ ಜನಿಸಿದ ಸಿದ್ದಿಕಿ, ಒಂಬತ್ತು ಕಂಪನಿಗಳ ಮಂಡಳಿಯಲ್ಲಿದ್ದಾನೆ. ಇವೆಲ್ಲವೂ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡುವ ಸಂಸ್ಥೆಯಾದ ಅಲ್ ಫಲಾಹ್ ಚಾರಿಟಬಲ್ ಟ್ರಸ್ಟ್ ಮೂಲಕ ಸಂಪರ್ಕ ಹೊಂದಿವೆ. ಈ ಒಂಬತ್ತು ಸಂಸ್ಥೆಗಳು ಶಿಕ್ಷಣ, ಸಾಫ್ಟ್‌ವೇರ್, ಹಣಕಾಸು ಸೇವೆಗಳು ಮತ್ತು ಇಂಧನ ವಲಯಗಳನ್ನು ವ್ಯಾಪಿಸಿವೆ. ಈ ಸಂಸ್ಥೆಗಳಲ್ಲಿ ಹೆಚ್ಚಿನವು 2019 ರವರೆಗೆ ಸಕ್ರಿಯವಾಗಿದ್ದವು. ನಂತರ ಅವುಗಳನ್ನು ಮುಚ್ಚಲಾಯಿತು. ಇದನ್ನೂ ಓದಿ: ಡಾಕ್ಟರ್ ಐಪಿಎಸ್ ಆಗಿ… ಟೆರರ್ ಡಾಕ್ಟರ್‌ಗಳನ್ನ ಹಿಡಿದ ಸ್ಟೋರಿ
ಅಲ್ ಫಲಾಹ್ ವೈದ್ಯಕೀಯ ಸಂಶೋಧನಾ ಪ್ರತಿಷ್ಠಾನವು 1997 ರಲ್ಲಿ ಎಂಜಿನಿಯರಿಂಗ್ ಕಾಲೇಜಾಗಿ ಪ್ರಾರಂಭವಾಯಿತು. ಈಗ 78 ಎಕರೆ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಈಗ ಅದು NAAC ಯಿಂದ ವಿಚಾರಣೆಯನ್ನು ಎದುರಿಸುತ್ತಿದೆ.


