ನವದೆಹಲಿ: ಬಡ ವ್ಯಾಪಾರಿಗಳ ತಳ್ಳುಗಾಡಿಗಳ ಮೇಲೆ ಕೇಸರಿ ಧ್ವಜ ನೆಟ್ಟು ಹಿಂದೂ-ಮುಸ್ಲಿಮರೆಂದು ವಿಭಜಿಸುವ ಮೂಲಕ ದೆಹಲಿಯ ಬಿಜೆಪಿ ಕೌನ್ಸಿಲರ್ ರವಿಂದರ್ ಸಿಂಗ್ ನೇಗಿ (Ravinder Singh Negi) ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ದೆಹಲಿಯ ಪತ್ಪರ್ಗಂಜ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಶ್ಚಿಮ ವಿಂದೋರ್ ನಗರ ವಾರ್ಡ್ ಕೌನ್ಸಿಲರ್ ಆಗಿರುವ ನೇಗಿ, ಬೀದಿ ಬದಿ ವ್ಯಾಪಾರಿಗಳ ತಳ್ಳುಗಾಡಿಗಳ ಬಳಿ ತೆರಳಿ ಹೆಸರು ಕೇಳಿ, ಹಿಂದೂ ವ್ಯಾಪಾರಿಗಳ ಗಾಡಿಗಳ ಮೇಲೆ ಕೇಸರಿ ಧ್ವಜ (Saffron Flags) ನೆಟ್ಟಿದ್ದಾರೆ. ಇದನ್ನೂ ಓದಿ: ದೆಹಲಿ | 40ಕ್ಕೂ ಅಧಿಕ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ – 30 ಸಾವಿರ ಡಾಲರ್‌ಗೆ ಬೇಡಿಕೆ
ಅಲ್ಲದೇ, ‘ಮತ್ತೊಂದು ಧರ್ಮೀಯರು’ ಎಂದು ಉಲ್ಲೇಖಿಸಿ ಮುಸ್ಲಿಂ ವ್ಯಾಪಾರಿಗಳ ಕುರಿತು ಕೆಟ್ಟ ಭಾವನೆ ಮೂಡಿಸುವ ಮಾತುಗಳನ್ನಾಡಿದ್ದಾರೆ. ಈ ಕುರಿತು ವಿಡಿಯೋಗಳನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತನ್ನ ಕೋಮುವಾದಿ ಕೃತ್ಯವನ್ನು ಸಮರ್ಥಿಸಿಕೊಂಡಿರುವ ನೇಗಿ, ಕೇಸರಿ ಧ್ವಜ ನೆಟ್ಟಿರುವುದು ಹಿಂದೂಗಳಿಗೆ ಹಿಂದೂ ವ್ಯಾಪಾರಿಗಳನ್ನು ಗುರುತಿಸಲು ಸಹಾಯವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರತ ವಿರೋಧಿ ಸೊರೊಸ್ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್ ರಿಜಿಜು
ಮುಸ್ಲಿಮರು ಆಹಾರಕ್ಕೆ ಉಗುಳುತ್ತಾರೆ ಎಂಬ ಸುಳ್ಳನ್ನು ಉಲ್ಲೇಖಿಸಿದ್ದಾರೆ. ವೈರಲ್ ವಿಡಿಯೋಗಳಲ್ಲಿ ರವಿಂದರ್ ಸಿಂಗ್ ನೇಗಿ ಮುಸ್ಲಿಂ ವ್ಯಾಪಾರಿಗಳಿಗೆ ತಮ್ಮ ಗಾಡಿಗಳಲ್ಲಿ ದೊಡ್ಡದಾಗಿ ಮುಸ್ಲಿಂ ಹೆಸರು ಹಾಕುವಂತೆ ಸೂಚಿಸಿ ಮತ್ತು ಇತರ ವಿಷಯಗಳನ್ನು ಮುಂದಿಟ್ಟುಕೊಂಡು ಬೆದರಿಸುವುದನ್ನು ನೋಡಬಹುದು. ರವಿಂದರ್ ನೇಗಿ ಧರ್ಮದ ಹೆಸರಲ್ಲಿ ಬಡ ವ್ಯಾಪಾರಿಗಳನ್ನು ವಿಭಜಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ರೀತಿಯ ದುಷ್ಕೃತ್ಯಗಳನ್ನು ಬಹಿರಂಗವಾಗಿ ಮಾಡಿದ್ದಾರೆ. ಆದರೆ, ಪೊಲೀಸರು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ – 45 ದಿನಗಳಲ್ಲಿ 13,000 ರೈಲುಗಳ ಸಂಚಾರ