ರಾತ್ರಿ ಹೊತ್ತು ಹಣ ಜಾಸ್ತಿ ಕೇಳಿದ್ದಕ್ಕೆ ಆಟೋ ಚಾಲಕನ ಹತ್ಯೆಗೈದ್ರು!

Public TV
1 Min Read
AUTO 1

ನವದೆಹಲಿ: ಹೆಚ್ಚುವರಿ ಪ್ರಯಾಣಿಕರು ಅಲ್ಲದೇ ರಾತ್ರಿ ಹೊತ್ತು ಕರೆದುಕೊಂಡು ಹೋಗಿದ್ದರಿಂದ ಹೆಚ್ಚಿನ ದರ ಕೇಳಿದ್ದಕ್ಕೆ ಪ್ರಯಾಣಿಕರೇ ಆಟೋ ಚಾಲಕನನ್ನು ಕೊಲೆಗೈದ ಆಘಾತಕಾರಿ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ.

ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಮೃತ ದುರ್ದೈವಿ ಆಟೋ ಚಾಲಕನನ್ನು 26 ವರ್ಷದ ಜಹಾಂಗೀರ್ ಅಲಂ ಎಂದು ಗುರುತಿಸಲಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಅವರಿಂದ ರಕ್ತದ ಕಲೆಗಳಿರುವ ಚಾಕುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

AUTO

ಘಟನೆಯಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಟೋ ಚಾಲಕನನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಚಾಲಕ, ಪ್ರಯಾಣಿಕರು ನನಗೆ ಚಾಕುವಿನಿಂದ ಇರಿದ್ರು ಅಂತ ಸಾರ್ವಜನಿಕರಲ್ಲಿ ಹೇಳಿದ್ದಾರೆ. ತಕ್ಷಣವೇ ಚಾಲಕನನ್ನು ಘಟನೆ ನಡೆದ ಸ್ಥಳದಿಂದ 2 ಕಿಮೀ ದೂರವಿರೋ ರಾಮ್ ಮನೋಹರ್ ಲೊಹಿಯಾ ಆಸ್ಪತ್ರೆಗೆ ದಾಖಲಾಯಿಸಿತಾದ್ರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ದೇಹವಿಡೀ ರಕ್ತಸಿಕ್ತವಾಗಿದ್ದ ಚಾಲಕನಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆತನನ್ನು ನೋಡಿ ಗಾಬರಿಗೊಂಡ ನಾನು, ಏನಾಯಿತು ಅಂತ ಕೇಳುವಷ್ಟರಲ್ಲಿಯೇ ಆತ ಅಲ್ಲಿಯೇ ಕುಸಿದು ಬಿದ್ದ. ಅಲ್ಲದೇ ಪ್ರಯಾಣಿಕರು ನನಗೆ ಚಾಕುವಿನಿಂದ ಇರಿದ್ರು. ಆದ್ರೆ ಚಾಕು ಇರಿದ ಪ್ರಯಾಣಿಕರು ಯಾರು ಅಂತ ಆತನಿಗೂ ಗೊತ್ತಿಲ್ಲ ಅಂತ ಪ್ರತ್ಯಕ್ಷದರ್ಶಿ ರತನ್ ಸಿಂಗ್ ಚೌಹಾಣ್ ಪೊಲೀಸರಿಗೆ ತಿಳಿಸಿದ್ದಾರೆ.

ಜನನಿಬಿಡ ಪ್ರದೇಶದಲ್ಲಿಯೇ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಬಂಧಿತರನ್ನು ದಕ್ಷಿಣ್ ಪುರಿ ನಿವಾಸಿಗಳು ಎನ್ನಲಾಗಿದೆ.

ವಿಚಾರಣೆಯ ವೇಳೆ, ಕನ್ನಾಟ್ ಎಂಬಲ್ಲಿಗೆ ತೆರಳಲೆಂದು ದಕ್ಷಿಣ ದೆಹಲಿಯ ಖಾನ್ ಪುರದಲ್ಲಿ ನಾಲ್ವರು ಆಟೋ ಹತ್ತಿದ್ದಾರೆ. ಹೀಗೆ ಹೋಗುತ್ತಿರುವಾಗಲೇ ಚಾಲಕ ಹಾಗೂ ನಾಲ್ವರ ಮಧ್ಯೆ ಹೆಚ್ಚಿನ ದರ ಕೇಳಿದ್ದಾರೆ. ರಾತ್ರಿ ಹೊತ್ತು ಅಲ್ಲದೇ ಹೆಚ್ಚುವರಿ ಜನ ಪ್ರಯಾಣಿಸುತ್ತಿದ್ದುದರಿಂದ ಚಾಲಕ ಹೆಚ್ಚಿನ ದರ ನೀಡುವಂತೆ ಹೇಳಿದ್ದಾರೆ. ಈ ವೇಳೆ ಪ್ರಯಾಣಿಕರು ಹಾಗೂ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಿಣಾಮ ಜಗಳ ತಾರಕಕ್ಕೇರಿದ್ದು, ಚಾಲಕನಿಗೆ ಚಾಕುವಿನಿಂದ ಇರಿದಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಅಂತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *