Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೆಹಲಿಯಲ್ಲಿ ಇಂದು ಮಧ್ಯರಾತ್ರಿವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ ಹಾರಾಟ ರದ್ದು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದೆಹಲಿಯಲ್ಲಿ ಇಂದು ಮಧ್ಯರಾತ್ರಿವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ ಹಾರಾಟ ರದ್ದು

Latest

ದೆಹಲಿಯಲ್ಲಿ ಇಂದು ಮಧ್ಯರಾತ್ರಿವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ ಹಾರಾಟ ರದ್ದು

Public TV
Last updated: December 5, 2025 12:25 pm
Public TV
Share
2 Min Read
IndiGo 5
SHARE

– ದೇಶಾದ್ಯಂತ ವಿವಿಧ ಏರ್‌ಪೋರ್ಟ್‌ಗಳಲ್ಲಿ ಪರಿಸ್ಥಿತಿ ಹೇಗಿದೆ?

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ (IndiGo) ಉಂಟಾಗಿರುವ ಅಡಚಣೆ ಸತತ 5ನೇ ದಿನಕ್ಕೆ ಕಾಲಿಟ್ಟಿದೆ. ಸಿಬ್ಬಂದಿ ರೋಸ್ಟರಿಂಗ್ ನಿಯಮಗಳು (Flight Duty Time Limitations), ತಾಂತ್ರಿಕ ಸಮಸ್ಯೆ ಹಾಗೂ ಕಾರ್ಯಾಚರಣೆ ದೋಷಗಳಿಂದ ಇಂದು ಕೂಡ ನೂರಾರು ವಿಮಾನಗಳ ರದ್ದುಗೊಳಿಸಲಾಗಿದೆ.

Passenger Advisory issued at 11:10 Hours#DelhiAirport #PassengerAdvisory #DELAdvisory pic.twitter.com/dZBdrW5aob

— Delhi Airport (@DelhiAirport) December 5, 2025

ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ (ಇಂದು) ಮಧ್ಯರಾತ್ರಿ ವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ (IndiGo Domestic Flights) ಹಾರಾಟವನ್ನ ಸಂಪೂರ್ಣ ರದ್ದುಗೊಳಿಸಿರುವುದಾಗಿ ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. ಹಠಾತ್ತನೇ ಫ್ಲೈಟ್‌ ರದ್ದಾದ ವಿಷಯ ತಿಳಿದ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪ್ರಯಾಣಿಕರು ಹಾಗೂ ಏರ್‌ಪೋರ್ಟ್‌ ಸಿಬ್ಬಂದಿ ನಡುವೆ ವಾಗ್ವಾದ ಉಂಟಾದವೂ ಉಂಟಾಗಿದೆ. ಇದನ್ನೂ ಓದಿ: ಇಂಡಿಗೋಗೆ ಮಾತ್ರ ಯಾಕೆ ಸಮಸ್ಯೆ? ಹೊಸ ನಿಯಮಗಳು ಏನು?

IndiGo 3

ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್‌ಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮಧ್ಯರಾತ್ರಿ 11:59ರ ವರೆಗೆ ಎಲ್ಲಾ ಇಂಡಿಗೋ ದೇಶಿಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ (IndiGo Flights Cancels). ಅದಕ್ಕೆ ಮುಂಚಿತವಾಗಿ ಇಲ್ಲಿಂದ ನಿರ್ಗಮಿಸಬೇಕಿರುವ ಪ್ರಯಾಣಿಕರು ಏರ್‌ಪೋರ್ಟ್‌ಗೆ ಬಾರದಂತೆ ಮನವಿ ಮಾಡಿದ್ದಾರೆ.

ಒಂದೇ ದಿನ 700 ವಿಮಾನಗಳ ಹಾರಾಟ ರದ್ದು
ಇಂಡಿಗೋ ಇಂದು ಒಂದೇ ದಿನ ಬೆಂಗಳೂರು, ದೆಹಲಿ, ಹೈದರಾಬಾದ್‌ ಹಾಗೂ ಇತರ ಏರ್‌ಪೋರ್ಟ್‌ಗಳಿಂದ ಒಟ್ಟು 700 ವಿಮಾನಗಳ ಹಾರಾಟವನ್ನ ರದ್ದುಗೊಳಿಸಿದೆ. ಇದನ್ನೂ ಓದಿ: 1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು – ಫೆಬ್ರವರಿ ವೇಳೆಗೆ ಸಮಸ್ಯೆಗೆ ಪರಿಹಾರ ಎಂದ ಇಂಡಿಗೋ

IndiGo 4

ಇಂದು ದೇಶಾದ್ಯಂತ ವಿವಿಧ ಏರ್‌ಪೋರ್ಟ್‌ಗಳಲ್ಲಿ ಪರಿಸ್ಥಿತಿ ಹೇಗಿದೆ?
* ಮುಂಬೈ ವಿಮಾನ ನಿಲ್ದಾಣದಲ್ಲಿ 53 ನಿರ್ಗಮನ ಮತ್ತು 51 ಆಗಮನ ವಿಮಾನಗಳು ಸೇರಿದಂತೆ ಒಟ್ಟು 104 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
* ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟು 52 ಆಗಮನ ಮತ್ತು 50 ನಿರ್ಗಮನ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
* ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಒಟ್ಟು 43 ಆಗಮನ ಮತ್ತು 49 ನಿರ್ಗಮನ ವಿಮಾನಗಳನ್ನ ರದ್ದುಗೊಳಿಸಲಾಗಿದೆ.
* ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆ ವರೆಗೆ ಪುಣೆ ವಿಮಾನ ನಿಲ್ದಾಣದಲ್ಲಿ ಒಟ್ಟು 16 ಆಗಮನ ಮತ್ತು 16 ನಿರ್ಗಮನ ವಿಮಾನಗಳನ್ನ ರದ್ದುಗೊಳಿಸಲಾಗಿದೆ.
* ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ 3 ಆಗಮನ ಮತ್ತು 3 ನಿರ್ಗಮನ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದ್ದು, 2 ಆಗಮನ ಮತ್ತು 2 ನಿರ್ಗಮನ ವಿಮಾನಗಳ ಹಾರಾಟವನ್ನ ರದ್ದುಗೊಳಿಸಲಾಗಿದೆ.
* ಅಷ್ಟೇ ಅಲ್ಲದೇ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 468ಕ್ಕೂ ಹೆಚ್ಚು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. ಒಟ್ಟು 320 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದ್ರೆ, 92 ವಿಮಾನಗಳ ಹಾರಾಟ ರದ್ದಾಗಿದೆ ಎಂದು ವರದಿಗಳು ತಿಳಿಸಿವೆ.

TAGGED:bengaluru airportDelhi AirportIndiGo Domestic FlightsIndiGo Flights Cancelsಇಂಡಿಗೋ ವಿಮಾನದೆಹಲಿ ಏರ್‌ಪೋರ್ಟ್ಬೆಂಗಳೂರು ಏರ್‌ಪೋರ್ಟ್‌
Share This Article
Facebook Whatsapp Whatsapp Telegram

Cinema news

Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post

You Might Also Like

Cocaine Seized in kempegowda airport
Bengaluru City

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 23.8 ಕೋಟಿ ಮೌಲ್ಯದ ಕೊಕೇನ್ ಜಪ್ತಿ

Public TV
By Public TV
5 minutes ago
DK Shivakumar priyanka kharge in kamakhya temple
Latest

ಸಂಸದೆ ಪ್ರಿಯಾಂಕಾ ಗಾಂಧಿ ಜೊತೆ ಕಾಮಾಕ್ಯ ದೇಗುಲಕ್ಕೆ ಡಿಕೆಶಿ ಭೇಟಿ

Public TV
By Public TV
20 minutes ago
Priyank kharge 1
Karnataka

AI Impact ಶೃಂಗಸಭೆಯಲ್ಲಿ ರಾಜ್ಯದ ಸಾಧನೆ ಪ್ರದರ್ಶನ – ಎಐ ಕ್ಷೇತ್ರ, ನವೋದ್ಯಮಗಳ ಮುಖ್ಯಸ್ಥರ ಜೊತೆ ಪ್ರಿಯಾಂಕ್ ಖರ್ಗೆ ಸಮಾಲೋಚನೆ

Public TV
By Public TV
38 minutes ago
India AI Impact Summit Guinness World Record
Latest

ಇಂಡಿಯಾ ಎಐ ಶೃಂಗದಲ್ಲಿ ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ – ಜವಾಬ್ದಾರಿಯುತವಾಗಿ AI ಬಳಸುವ ಪ್ರತಿಜ್ಞೆ ಮಾಡಿದ 2.5 ಲಕ್ಷ ಜನರು

Public TV
By Public TV
60 minutes ago
Nelamangala Crime 1
Bengaluru Rural

ವೃದ್ಧೆಯ ಹತ್ಯೆಗೈದು ದರೋಡೆ – ಸಾಲ ತೀರಿಸೋಕೆ ಚಿನ್ನಾಭರಣ ಎಗರಿಸಿ ಪಕ್ಕದ ಮನೆಯವನಿಂದ್ಲೇ ಕೊಲೆ

Public TV
By Public TV
1 hour ago
Anil Ambani
Court

ಅನುಮತಿ ಇಲ್ಲದೆ ಭಾರತ ತೊರೆಯುವುದಿಲ್ಲ – ಸುಪ್ರೀಂಗೆ ಅನಿಲ್ ಅಂಬಾನಿ ಮುಚ್ಚಳಿಕೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?