ನವದೆಹಲಿ: ಹಲವು ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ಗಾಳಿಯ ಗುಣಮಟ್ಟದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಹವಾಮಾನ ಸಂಸ್ಥೆ aqicn.org ಪ್ರಕಾರ ದೆಹಲಿಯ ಆನಂದ್ ವಿಹಾರ್‌ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 999 ರಷ್ಟಿದ್ದು, ಹಲವು ಪ್ರದೇಶಗಳಲ್ಲಿ 500 ಅನ್ನು ದಾಟಿದೆ.
ಕೃಷಿ ಬೆಂಕಿ ಮತ್ತು ಪ್ರತಿಕೂಲ ಹವಾಮಾನ, ಗಾಳಿಯ ವೇಗ ಕಡಿಮೆಯಾಗುವ ಹಿನ್ನೆಲೆ ದೆಹಲಿಯಲ್ಲಿ ಮುಂದಿನ 15-20 ದಿನಗಳ ಕಾಲ ತೀವ್ರ ಪ್ರಮಾಣದಲ್ಲಿ ವಾಯು ಮಾಲಿನ್ಯ ಕಂಡು ಬರಲಿದೆ ಎಂದು ಎಚ್ಚರಿಸಲಾಗಿತ್ತು. ವರದಿ ಬೆನ್ನಲ್ಲೇ ದೆಹಲಿಯಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ.
Advertisement
Advertisement
ಬೆಳಗ್ಗೆ 10 ಗಂಟೆಗೆ SAFAR ಡೇಟಾ ಪ್ರಕಾರ ನಗರದ ವಾಯು ಗುಣಮಟ್ಟ ಸೂಚ್ಯಂಕ 351 ದಾಖಲಾಗಿದೆ. 24-ಗಂಟೆಗಳ ಸರಾಸರಿ ಎಕ್ಯುಐ ಬುಧವಾರ 364, ಮಂಗಳವಾರ 359, ಸೋಮವಾರ 347, ಭಾನುವಾರ 325, ಶನಿವಾರ 304, ಮತ್ತು ಶುಕ್ರವಾರ 261 ರಷ್ಟಿತ್ತು. ಇದನ್ನೂ ಓದಿ: ಝಿಕಾ ವೈರಸ್ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಿ- ಸರ್ಕಾರಕ್ಕೆ ಸುಧಾಕರ್ ಆಗ್ರಹ
Advertisement
ಗುರುವಾರ ನೋಯ್ಡಾದ ಸೆಕ್ಟರ್ 62 ರಲ್ಲಿ 469 ದಾಖಲಿಸಿದೆ. ಪಂಜಾಬಿ ಬಾಗ್ (416), ಬವಾನಾ (401), ಮುಂಡ್ಕಾ (420), ಮತ್ತು ಆನಂದ್ ವಿಹಾರ್ (413) ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವು ತೀವ್ರ ಕುಸಿದಿದೆ. ಗಾಳಿಯು ಸೂಕ್ಷ್ಮವಾದ ಕಣಗಳನ್ನು ಒಳಗೊಂಡಿದ್ದು ಮಾಲಿನ್ಯದ ಸ್ಥಳಗಳಲ್ಲಿ ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಂಗಳಷ್ಟಿದೆ. ಸಹಜ ಸುರಕ್ಷಿತ ಮಿತಿಗಿಂತ 6-7 ಪಟ್ಟು ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Advertisement
ಪಂಜಾಬ್ ಸರ್ಕಾರವು ಈ ಚಳಿಗಾಲದಲ್ಲಿ 50% ರಷ್ಟು ಕೃಷಿ ಬೆಂಕಿಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಹೊಶಿಯಾರ್‌ಪುರ, ಮಲೇರ್‌ಕೋಟ್ಲಾ, ಪಠಾಣ್‌ಕೋಟ್, ರೂಪನಗರ, ಎಸ್‌ಎಎಸ್ ನಗರ (ಮೊಹಾಲಿ) ಮತ್ತು ಎಸ್‌ಬಿಎಸ್ ನಗರ ಎಂಬ 6 ಜಿಲ್ಲೆಗಳಲ್ಲಿ ಹುಲ್ಲು ಸುಡುವಿಕೆಯನ್ನು ತೊಡೆದುಹಾಕಲು ಗುರಿಯನ್ನು ಹೊಂದಿದೆ. ಇದನ್ನೂ ಓದಿ: 7ನೇ ತರಗತಿ ವಿದ್ಯಾರ್ಥಿಯಿಂದ ಕೇರಳ ಸಿಎಂಗೆ ಬೆದರಿಕೆ ಕರೆ
ಭತ್ತದ ಹುಲ್ಲು ಸುಡುವುದನ್ನು ತಡೆಯುವ ರಾಜ್ಯದ ಕ್ರಿಯಾ ಯೋಜನೆಯ ಪ್ರಕಾರ ರಾಜ್ಯದಲ್ಲಿ ಸುಮಾರು 31 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇದು ಸುಮಾರು 16 ಮಿಲಿಯನ್ ಟನ್‌ಗಳಷ್ಟು ಭತ್ತದ ಹುಲ್ಲು ಉತ್ಪಾದಿಸುವ ನಿರೀಕ್ಷೆಯಿದೆ. ಹರಿಯಾಣ ರಾಜ್ಯದಲ್ಲಿ ಸುಮಾರು 14.82 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದು 7.3 ಮಿಲಿಯನ್ ಟನ್‌ಗಳಷ್ಟು ಭತ್ತದ ಹುಲ್ಲು ಉತ್ಪಾದಿಸುವ ನಿರೀಕ್ಷೆಯಿದೆ.
Web Stories