ನವದೆಹಲಿ: ಒಣಹುಲ್ಲು ಸುಡುವುದು ತಡೆಯಲು, ದೆಹಲಿಯಲ್ಲಿ (Delhi) ಮಾಲಿನ್ಯ ನಿಯಂತ್ರಣ (Air Pollution) ಸಲುವಾಗಿ ಈವರೆಗೂ ಒಂದೇ ಒಂದು ಕ್ರವವನ್ನು ವಾಯು ಗುಣಮಟ್ಟ ನಿರ್ವಹಣಾ ಆಯೋಗ (Air Quality Management Commission) ತೆಗೆದುಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಛೀಮಾರಿ ಹಾಕಿದೆ.
ಪ್ರಕಣದ ವಿಚಾರಣೆ ನಡೆಸಿದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲ್ಲು ಸುಡುವ ಘಟನೆಗಳ ವಿರುದ್ಧ ಸಿಎಕ್ಯೂಎಂ ಒಂದೇ ಒಂದು ಪ್ರಕರಣವನ್ನು ಸಹ ದಾಖಲಿಸಿಲ್ಲ ಎಂದು ಹೇಳಿತು. ಇದನ್ನೂ ಓದಿ: Delhi| ಕೋಟ್ಯಂತರ ಮೌಲ್ಯದ ಕೊಕೇನ್ ಪ್ರಕರಣದ ಹಿಂದೆ ಮಾಜಿ ಕಾಂಗ್ರೆಸ್ ನಾಯಕ
ಹುಲ್ಲು ಸುಡುವ ವಿಚಾರವಾಗಿ ಸಿಎಕ್ಯೂಎಂ ಆಗಸ್ಟ್ 29ರಂದು ಸಭೆ ನಡೆಸಿದೆ. ಈ ಸಭೆಯಲ್ಲಿ 11 ಸದಸ್ಯರ ಪೈಕಿ ಐವರು ಮಾತ್ರ ಹಾಜರಿದ್ದರು. ಅವರು ಯಾವುದೇ ಸೂಚನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ಮಾಡಿಲ್ಲ. ಇದರ ಜೊತೆಗೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಹುಲ್ಲು ಸುಡುವ ವಿರುದ್ಧ ಯಾವುದೇ ವಿಶೇಷ ಕ್ರಮ ಕೈಗೊಂಡಿಲ್ಲ ಮತ್ತು ಕಡಿಮೆ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಹೇಳಿ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇದನ್ನೂ ಓದಿ: ಮಲಗಿದ್ದವನ ಮೇಲೆ ಮೀನು ತುಂಬಿದ ವಾಹನ ಹರಿದು ಕಾರ್ಮಿಕ ಸಾವು
ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಮತ್ತು ಸಿಎಕ್ಯೂಎಂಗೆ ನ್ಯಾಯಾಲಯ ಸೂಚಿಸಿದೆ. ಇದೀಗ ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 16 ರಂದು ನಡೆಸಲಿದೆ. ಇದನ್ನೂ ಓದಿ: ವಿಜಯೇಂದ್ರ ವಿರುದ್ಧ ಯತ್ನಾಳ್ ಮಾತಾಡೋದು ನಿಲ್ಲಿಸಲಿ, ಇಲ್ಲವೇ ಹೈಕಮಾಂಡ್ ಕ್ರಮ ತೆಗೆದುಕೊಳ್ಳಲಿ: ಹರತಾಳು ಹಾಲಪ್ಪ